ಕರ್ನಾಟಕ

karnataka

ETV Bharat / state

ಯಲಚೇನಹಳ್ಳಿ- ಅಂಜನಾಪುರ ಮೆಟ್ರೋ ಸೇವೆ: ಜ.14ರಂದು ಸಿಎಂ ಚಾಲನೆ

ಯಲಚೇನಹಳ್ಳಿ- ಅಂಜನಾಪುರ ಮಾರ್ಗದಲ್ಲಿ ಮೆಟ್ರೋ ಓಡಾಟ ಆರಂಭವಾಗಲಿದೆ.‌ ಜ.14 ರಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಹೊಸ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.

Metro service
ಯಲಚೇನಹಳ್ಳಿ- ಅಂಜನಾಪುರ ಮೆಟ್ರೋ ಸೇವೆ

By

Published : Jan 7, 2021, 12:02 PM IST

ಬೆಂಗಳೂರು : ರಾಜ್ಯ ಬಿಎಂಆರ್​​ಸಿಎಲ್ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ನಗರದಲ್ಲಿ ಮತ್ತೊಂದು ಮಾರ್ಗದಲ್ಲಿ ಮೆಟ್ರೋ ಓಡಾಟಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಬೆಂಗಳೂರಿನಲ್ಲಿ ಮತ್ತೊಂದು ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಇದೀಗ ಮುಹೂರ್ತ ನಿಗದಿಯಾಗಿದೆ. ಜ.15 ರಿಂದ ಯಲಚೇನಹಳ್ಳಿ- ಅಂಜನಾಪುರ ಮಾರ್ಗದಲ್ಲಿ ಮೆಟ್ರೋ ಓಡಾಟ ಆರಂಭವಾಗಲಿದ್ದು,‌ ಜ.14 ರಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಹೊಸ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.

ಕಳೆದ ಮೂರು ತಿಂಗಳಿಂದ ಪರೀಕ್ಷಾರ್ಥ ಸಂಚಾರ ನಡೆಯುತ್ತಿತ್ತು. ಇದೀಗ ಕೇಂದ್ರದ ರೈಲ್ವೆ ಸುರಕ್ಷತೆ ಆಯುಕ್ತರು ಭೇಟಿ ನೀಡಿ ವಾಣಿಜ್ಯ ಸಂಚಾರ ಆರಂಭಕ್ಕೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮೆಟ್ರೋ 2ನೇ ಹಂತದ ರೀಚ್-4 ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಓದಿ: ಶೀಘ್ರದಲ್ಲೇ ಮತ್ತೊಂದು ಮಾರ್ಗದಲ್ಲಿ ಮೆಟ್ರೋ ರೈಲು ಓಡಾಟ ಆರಂಭ

ಸದ್ಯ ಯಲಚೇನಹಳ್ಳಿ- ಅಂಜನಾಪುರ ಮಾರ್ಗದಲ್ಲಿ ಕಾಮಗಾರಿ ಮುಗಿಸಿರುವ ಬಿಎಂಆರ್​ಸಿಎಲ್​ ಜ.15 ರಿಂದ 6.29 ಕಿಮೀ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಿಸಲಿದೆ. 72 ಕಿಮೀ ನ 2ನೇ ಹಂತದ ಮೊದಲ ಮಾರ್ಗಕ್ಕೆ ಸರ್ಕಾರ ಅವಕಾಶ ನೀಡಿದೆ. ಕೋಣನಕುಂಟೆ, ದೊಡ್ಡ ಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಹಾಗೂ ಅಂಜನಾಪುರ ಮಾರ್ಗದಲ್ಲಿ ಮೆಟ್ರೋ ಓಡಾಟ ನಡೆಸಲಿದೆ.

ABOUT THE AUTHOR

...view details