ಕರ್ನಾಟಕ

karnataka

ETV Bharat / state

ಮೆಜೆಸ್ಟಿಕ್​ನಿಂದ ಮೈಸೂರು ರಸ್ತೆ​ವರೆಗೆ 8 ದಿನ ಮೆಟ್ರೋ ಸ್ಥಗಿತ

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ ಸಿಗ್ನಲಿಂಗ್ ವ್ಯವಸ್ಥೆಗೆ ಮಾರ್ಪಾಡು ಕಾಮಗಾರಿಗಳನ್ನು ನಮ್ಮ ಮೆಟ್ರೋ ಕೈಗೊಳ್ಳುತ್ತಿದೆ. ಹೀಗಾಗಿ 8 ದಿನಗಳ ಕಾಲ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ.

metro-serves-temporarily-stoped-in-bengalore
ಮೆಜೆಸ್ಟಿಕ್​ನಿಂದ ಮೈಸೂರು ರೋಡ್​ವರೆಗೆ 8 ದಿನ ಮೆಟ್ರೋ ಸ್ಥಗಿತ

By

Published : Mar 17, 2021, 5:59 PM IST

ಬೆಂಗಳೂರು: ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ನಡುವೆ ಮೆಟ್ರೋ ರೈಲು ಸೇವೆಗಳನ್ನು ಮಾರ್ಚ್ 21 ರಿಂದ 28ರ ವರೆಗೆ (8 ದಿನಗಳು) ಸ್ಥಗಿತಗೊಳಿಸಲಾಗಿದೆ.

ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಪೂರ್ವ-ಪಶ್ಚಿಮ ವಿಸ್ತರಿಸಿದ ನೇರಳೆ ಮಾರ್ಗ ಪೂರ್ವ ನಿಯೋಜನೆಗೆ ಸಂಬಂಧಿಸಿದಂತೆ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ ಸಿಗ್ನಲಿಂಗ್ ವ್ಯವಸ್ಥೆಗೆ ಮಾರ್ಪಾಡು ಕಾಮಗಾರಿಗಳನ್ನು ನಮ್ಮ ಮೆಟ್ರೋ ಕೈಗೊಳ್ಳುತ್ತಿದೆ. ಹೀಗಾಗಿ, ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ.

ಇದರಿಂದಾಗಿ ನೇರಳೆ ಮಾರ್ಗದಲ್ಲಿರುವ ಮೆಟ್ರೋ ಸೇವೆಗಳು ಈ ಅವಧಿಯಲ್ಲಿ ಬೈಯಪ್ಪನಹಳ್ಳಿ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ನಡುವೆ ಮಾತ್ರ (ವಾಣಿಜ್ಯ ಸೇವೆ) ಲಭ್ಯವಿರುತ್ತದೆ. ಮಾರ್ಚ್ 29ರ ಬೆಳಗ್ಗೆ 7ಗಂಟೆಯಿಂದ ಎಂದಿನಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಪುನರಾಂಭಗೊಳ್ಳುತ್ತದೆ.

ಇದನ್ನೂ ಓದಿ:ಯಾವುದೇ ಲಾಕ್‌ಡೌನ್, ಕರ್ಫ್ಯೂ ಇಲ್ಲ, ಜನ ಆತಂಕ ಪಡುವ ಅಗತ್ಯ ಇಲ್ಲ : ಸಿಎಂ

ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳಲ್ಲಿ ಆ ಎಂಟು ದಿನಗಳಂದು ಯಾವುದೇ ಬದಲಾವಣೆ ಇರುವುದಿಲ್ಲ. ವಿಸ್ತರಣಾ ಮಾರ್ಗದ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಪ್ರಯಾಣಿಕರು ಸಹಕರಿಸುವಂತೆ ನಿಗಮ ಮನವಿ ಮಾಡಿದೆ.

ABOUT THE AUTHOR

...view details