ಕರ್ನಾಟಕ

karnataka

ETV Bharat / state

ಸಾಯೋದು ಹೇಗೆಂದು ಆನ್​ಲೈನ್​ನಲ್ಲಿ‌ ತಿಳಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

20 ವರ್ಷದ ನವೀನ್ ಮೃತ ವಿದ್ಯಾರ್ಥಿ. ಸೋಮವಾರದಿಂದ ಆರಂಭವಾಗಿರುವ ಎಂಬಿಬಿಎಸ್ ಪರೀಕ್ಷೆಯನ್ನು ನವೀನ್ ಬರೆಯಬೇಕಿತ್ತು. ಆದರೆ, ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

MBBS student committed suicide
ಸಾಯೋದು ಹೇಗೆಂದು ಆನ್​ಲೈನ್​ನಲ್ಲಿ‌ ತಿಳಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

By

Published : Mar 9, 2021, 12:13 AM IST

ಬೆಂಗಳೂರು: ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳೋದು ಹೇಗೆ ಎಂದು ಆನ್​ಲೈನ್ ಮೂಲಕ ತಿಳಿದುಕೊಂಡು ಜೀವ ಕೊನೆಗಾಣಿಸಿಕೊಂಡಿರುವ ಘಟನೆ ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

20 ವರ್ಷದ ನವೀನ್ ಮೃತ ವಿದ್ಯಾರ್ಥಿ. ಸೋಮವಾರದಿಂದ ಆರಂಭವಾಗಿರುವ ಎಂಬಿಬಿಎಸ್ ಪರೀಕ್ಷೆಯನ್ನು ನವೀನ್ ಬರೆಯಬೇಕಿತ್ತು. ಆದರೆ, ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ರಾಯಚೂರು ಮೂಲದ ನವೀನ್ ಮೆರಿಟ್ ನಲ್ಲಿ ಎಂಬಿಬಿಎಸ್ ಸೀಟ್ ಸಂಪಾದಿಸಿ 2ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಹಾಗೆ ಹಾಸ್ಟೆಲ್​ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮುಂದುವರೆಸಿದ್ದ. ಭಾನುವಾರ ಮಧ್ಯಾಹ್ನ ಸ್ನೇಹಿತರ ಜೊತೆ ಊಟ ಮುಗಿಸಿ, ಬಳಿಕ ಹಾಸ್ಟೆಲ್ ನ ತನ್ನ ಕೊಠಡಿಗೆ ತೆರಳಿದ್ದಾನೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ನವೀನ್ ಸ್ನೇಹಿತ ಕೊಠಡಿ ಬಳಿ ಬಂದಾಗ, ಒಳಗಿನಿಂದ ಲಾಕ್ ಆಗಿತ್ತು. ಹಲವು ಬಾರಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.ಹೀಗಾಗಿ ಸ್ನೇಹಿತರ ಜತೆ ಬಾಗಿಲು ಒಡೆದು ಒಳಹೋಗಿ ನೋಡಿದಾಗ ನವೀನ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ನವೀನ್ ಮೃತಪಟ್ಟ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ.‌ ಆತನ ಮೊಬೈಲ್ ಪರಿಶೀಲಿಸಿದಾಗ ನಾಲ್ಕು ದಿನಗಳ ಹಿಂದೆ ಆನ್ ಲೈನ್ ನಲ್ಲಿ ಒತ್ತಡ ನಿವಾರಣೆ ಹಾಗೂ ಆತ್ಮಹತ್ಯೆ ಮಾರ್ಗಗಳ ಕುರಿತು ಸರ್ಚ್ ಮಾಡಿರುವುದು ಗೊತ್ತಾಗಿದೆ. ಬಹುಶಃ ಪರೀಕ್ಷಾ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ABOUT THE AUTHOR

...view details