ಬೆಂಗಳೂರು:ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಪುರ ವಾರ್ಡ್-67ರಲ್ಲಿ ರಾಜಾಜಿನಗರ ರೋಟರಿ ಕ್ಲಬ್ ಅಗತ್ಯವಿರುವ ವಸ್ತುಗಳು ಸಾಮಾನ್ಯ ಜನರಿಗೆ ಸಿಗಬೇಕೆಂಬ ಉದ್ದೇಶದಿಂದ ನಿರ್ಮಾಣ ಮಾಡಿರುವ "ಕರುಣೆ ಕಪಾಟು"ಅನ್ನು ಮೇಯರ್ ಗಂಗಾಂಬಿಕೆ ಶನಿವಾರ ಉದ್ಘಾಟಿಸಿದರು.
ಬೆಂಗಳೂರಲ್ಲಿ 'ಕರುಣೆ ಕಪಾಟು'... ನಿಮಗೆ ಬೇಡವಾದ ಉಪಯುಕ್ತ ವಸ್ತುಗಳನ್ನ ಇಲ್ಲಿಡಿ, ಯಾಕೆ ಗೊತ್ತಾ? - ಬಿಬಿಎಂಪಿ
ರಾಜಾಜಿನಗರ ರೋಟರಿ ಕ್ಲಬ್ ಅಗತ್ಯವಿರುವ ವಸ್ತುಗಳು ಸಾಮಾನ್ಯ ಜನರಿಗೆ ಸಿಗಬೇಕೆಂಬ ಉದ್ದೇಶದಿಂದ ನಿರ್ಮಾಣ ಮಾಡಿರುವ "ಕರುಣೆ ಕಪಾಟು"ಅನ್ನು ಮೇಯರ್ ಗಂಗಾಂಬಿಕೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಮೇಯರ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದೆ ಸ್ಥಳಾವಕಾಶವಿರುವ ಕಡೆ ಕರುಣೆ ಕಪಾಟು ಅಳವಡಿಸಲು ಕ್ರಮ ವಹಿಸಲಾಗುವುದು. ನಿಮ್ಮ ಮನೆಗಳಲ್ಲಿ ಅವಶ್ಯವಿರದೇ ಇರುವ ವಸ್ತುಗಳು ಉತ್ತಮವಾಗಿದ್ದಲ್ಲಿ ಅದನ್ನು ಕರುಣೆ ಕಾಪಾಟಿನಲ್ಲಿಡಿ. ಇದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ಯಾರೇ ಆಗಲಿ ಬಳಕೆಯಾಗದ ಅನುಪಯುಕ್ತ ವಸ್ತುಗಳನ್ನು ತಂದಿಡಬೇಡಿ. ಕಪಾಟುಗಳನ್ನು ನಿರ್ಮಾಣ ಮಾಡಿದರೆ ಸಾಲದು. ಅದನ್ನು ಸರಿಯಾಗಿ ನಿರ್ವಹಣೆ ಮಾಡಲು ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎಂದು ಹೇಳಿದ್ರು.
ನಂತರ ಶಂಕರಮಠ ವಾರ್ಡ್-75ರಲ್ಲಿ ಜೈ ಮಾರುತಿ ದೇವಸ್ಥಾನ ಹೆಬ್ಬಾಗಿಲು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಕೆಂಪೇಗೌಡ ಉದ್ಯಾನದ ಬಳಿ ಮಕ್ಕಳ ಆಟಿಕೆಗಳಿರುವ "ಚಿನ್ನರ ಅಂಗಳ" ಹಾಗೂ ಜೆ.ಸಿ.ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮೇಯರ್ ಉದ್ಘಾಟಿಸಿದ್ರು. ಇನ್ನು ಈ ಕಾರ್ಯಕ್ರಮದಲ್ಲಿ ಉಪ ಮೇಯರ್, ಆಡಳಿತ ಪಕ್ಷದ ನಾಯಕರು, ಸ್ಥಳೀಯ ಸದಸ್ಯರುಗಳಾದ ಶಿವರಾಜು, ಕೇಶವಮೂರ್ತಿ ಉಪಸ್ಥಿತರಿದ್ದರು.