ಕರ್ನಾಟಕ

karnataka

ETV Bharat / state

ವಂಚಕ ಮನ್ಸೂರ್​ಗೆ ಮತ್ತೆ 14 ದಿನ ನ್ಯಾಯಂಗ ಬಂಧನ: ನ್ಯಾಯಲಯ ಆದೇಶ

ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್​ನ ಎಸ್ಐಟಿ ಕಸ್ಟಡಿ‌ ಅಂತ್ಯ ಹಿನ್ನೆಲೆ, ಎಸ್ಐಟಿ ವಿಚಾರಣೆಗೆ ಮನ್ಸೂರ್ ಖಾನ್​ನ ಅಗತ್ಯ ಇಲ್ಲದ ಕಾರಣ ನ್ಯಾಯಧೀಶರು 14 ದಿನಗಳ ನ್ಯಾಯಂಗ ಬಂಧನ ನೀಡಿ ಆದೇಶ ಹೊರಡಿಸಿದರು.

mansoor-khan-sentenced-to-14-days-judicial-custody

By

Published : Aug 16, 2019, 10:41 PM IST

ಬೆಂಗಳೂರು:ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್​ನ ಎಸ್ಐಟಿ ಕಸ್ಟಡಿ‌ ಅಂತ್ಯ ಹಿನ್ನೆಲೆ, ಇಂದು ಸಿಟಿ ಸಿವಿಲ್ ನ್ಯಾಯಲಯ ಆವರಣದ 1ನೇ ಸಿಸಿಹೆಚ್ ನ್ಯಾಯಾಲದ ನ್ಯಾಯಾಧೀಶ ಶಿವಶಂಕರ ಅಮರಣ್ಣನವರ್‌ ಎದುರು ಖಾನ್​ನನ್ನು ಹಾಜರು ಪಡಿಸಲಾಯ್ತು. ಈ ವೇಳೆ ಎಸ್ಐಟಿ ವಿಚಾರಣೆ ಮುಕ್ತಾಯ ಹಿನ್ನೆಲೆ ಮತ್ತೆ ಕಸ್ಟಡಿಗೆ ಕೇಳದೆ ಇರುವ ಕಾರಣ ಮುಂದಿನ 14 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ.

ಎಸ್ಐಟಿಯ ಪರ ವಕೀಲರು, ಮನ್ಸೂರ್ ನ್ಯಾಯಲಯಕ್ಕೆ ಸ್ವಇಚ್ಚಾ ಹೇಳಿಕೆ ನೀಡುವುದಾಗಿ ಹೇಳಿದ್ದಾರೆ ಎಂದಿದ್ದರಿಂದ, ನ್ಯಾಯಧೀಶರು ಮನ್ಸೂರ್‌ನನ್ನು ಪ್ರಶ್ನಿಸಿದಕ್ಕೆ, ನನಗೆ ಹೃದಯ ಸಮಸ್ಯೆ ಇದೆ. ಈ ಚಿಕಿತ್ಸೆ ಮುಗಿದ ನಂತರ ವಕೀಲರ ಜೊತೆ ಚರ್ಚೆ ಮಾಡಿ‌ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಮನ್ಸೂರ್‌ ಉತ್ತರಿಸಿದ.

ಇದೇ ವೇಳೆ ಮನ್ಸೂರ್ ಖಾನ್​ ಇಮೇಲ್‌ಗಳನ್ನು ಎಫ್ಎಸ್ಎಲ್‌ (ವಿಧಿವಿಜ್ಞಾನ ಪ್ರಯೋಗಾಲಯ)ಗೆ ಕಳುಹಿಸಲು ಕೋರ್ಟ್ ಅನುಮತಿ ಬೇಕು. ಈಗಾಗಲೇ ಅಮೆಜಾನ್ ಕ್ಲೌಡ್ ಸೇರಿ ನಾಲ್ಕು ಇಮೇಲ್ ಪರಿಶೀಲನೆ ನಡೆಸಿದ್ದಾಗಿದೆ ಎಂದು ಎಸ್ಐಟಿ ಪರ ವಕೀಲರು ನ್ಯಾಯಲಯಕ್ಕೆ ತಿಳಿಸಿದರು. ಈ ವೇಳೆ ಎಸ್ಐಟಿ ಯಾವೆಲ್ಲಾ ಮಾಹಿತಿಗಳನ್ನು ಇಮೇಲ್‌ನಿಂದ ತೆಗದುಕೊಳ್ಳುತ್ತಾರೋ ಅದರ ಒಂದು ಪ್ರತಿ ನಮಗೆ ನೀಡುವಂತೆ ಮನ್ಸೂರ್ ಪರ ವಕೀಲರು ಮನವಿ ಮಾಡಿದರು.

ನಂತರ ವಾದ ಪ್ರತಿವಾದ ಆಲಿಸಿ ಎಸ್ಐಟಿ ವಿಚಾರಣೆಗೆ ಮನ್ಸೂರ್ ಖಾನ್​ನ ಅಗತ್ಯ ಇಲ್ಲದ ಕಾರಣ, ನ್ಯಾಯಧೀಶರು 14 ದಿನಗಳ ನ್ಯಾಯಂಗ ಬಂಧನ ನೀಡಿ ಆದೇಶ ಹೊರಡಿಸಿದರು. ಕಳೆದ ಆಗಸ್ಟ್ 3ರಂದು‌ ಆರೋಪಿಯನ್ನು ವಿಶೇಷ ತನಿಖಾ ತಂಡ 14 ದಿನಗಳ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

ABOUT THE AUTHOR

...view details