ಕರ್ನಾಟಕ

karnataka

ETV Bharat / state

ಶಿಕ್ಷಕರ ಕಡ್ಡಾಯ ವರ್ಗಾವಣೆ ತಾತ್ಕಾಲಿಕ ಸ್ಥಗಿತ: ಸಚಿವ ಸುರೇಶ್​ ಕುಮಾರ್​​​ ಘೋಷಣೆ

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ, ಸಿಎಂ ಬಿ.ಎಸ್​​. ಯಡಿಯೂರಪ್ಪ ಅವರಿಗೆ ಗೌರಿ ಗಣೇಶ ಹಬ್ಬದ ಶುಭಕೋರಿದ್ರು. ಬಳಿಕ ಮಾತನಾಡಿದ ಅವರು ಶಿಕ್ಷಕರ ಕಡ್ಡಾಯ ವರ್ಗಾವಣೆ ಮಾಡದಂತೆ ಹಲವು ಶಿಕ್ಷಕರು ಕೇಳಿದ್ದಾರೆ. ಸದ್ಯಕ್ಕೆ ಕಡ್ಡಾಯ ವರ್ಗಾವಣೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ನಾಳೆ ಸಭೆ ನಡೆಸಿ ಅಂತಿಮ ತೀರ್ಮಾನ ಮಾಡಲಾಗುತ್ತದೆ ಎಂದರು.

By

Published : Sep 2, 2019, 1:26 PM IST

ಸಚಿವ ಸುರೇಶ್​ ಕುಮಾರ್​​​

ಬೆಂಗಳೂರು:ಪಿಯುಸಿ ಮತ್ತು ಎಸ್​​ಎಸ್​​​ಎಲ್​​ಸಿಗೆ ಒಂದೇ ಮಂಡಳಿ ಮಾಡುವ ಪ್ರಸ್ತಾಪ ಇಲಾಖೆ ಮುಂದಿದ್ದು, ಈ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸಕ್ಕೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದರು.‌ ಸಿಎಂಗೆ ಗೌರಿ ಗಣೇಶ ಹಬ್ಬದ ಶುಭ ಕೋರಿ ಕೆಲಕಾಲ ಇಲಾಖೆ ಸಂಬಂಧ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಶಿಕ್ಷಕರ ಕಡ್ಡಾಯ ವರ್ಗಾವಣೆ ಮಾಡದಂತೆ ಹಲವು ಶಿಕ್ಷಕರು ಕೇಳಿದ್ದಾರೆ. ಸದ್ಯಕ್ಕೆ ಕಡ್ಡಾಯ ವರ್ಗಾವಣೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ನಾಳೆ ಸಭೆ ನಡೆಸಿ ಅಂತಿಮ ತೀರ್ಮಾನ ಮಾಡಲಾಗುತ್ತದೆ ಎಂದರು.

ಸಚಿವ ಸುರೇಶ್​ ಕುಮಾರ್​​​

ನಾಳೆ ಕೊಡಗು ಜಿಲ್ಲೆಯಲ್ಲಿ ಸಾಂಪ್ರದಾಯಿಕ ಖೈಲ್ ಹಬ್ಬ ಆಚರಣೆ ಇದೆ. ಹೀಗಾಗಿ ಖೈಲ್ ಹಬ್ಬಕ್ಕೆ ರಜೆ ನೀಡುವಂತೆ ಅಪ್ಪಚ್ಚು ರಂಜನ್ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ, ಇಂದು ಮಧ್ಯಾಹ್ನದ ವೇಳೆಗೆ ಸರ್ಕಾರಿ ಆದೇಶ ಆಗುವ ಸಾಧ್ಯತೆ ಇದೆ‌ ಎಂದರು.

ಕುಮಾರಸ್ವಾಮಿ ಜಾರಿಗೆ ತಂದಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್, ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮ ಮುಂದೆ ಸದ್ಯಕ್ಕೆ ಶಿಕ್ಷಕರ ಕಡ್ಡಾಯ ವರ್ಗಾವಣೆ ವಿಚಾರ ಇದೆ. ಇದನ್ನು ಬಗೆಹರಿಸಿ ನಂತರ ಪಬ್ಲಿಕ್ ಸ್ಕೂಲ್, ಒಂದರಿಂದ ಇಂಗ್ಲಿಷ್​​​ ಮಾಧ್ಯಮ ಕಲಿಕೆ ವಿಚಾರಗಳತ್ತ ಗಮನ ಕೊಡ್ತೇವೆ. ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ತೇವೆ. ಅಲ್ಲಿಯವರೆಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಒಂದರಿಂದ ಇಂಗ್ಲಿಷ್ ಮಾಧ್ಯಮ ಕಲಿಕೆ ವಿಚಾರಗಳು ಯಥಾಸ್ಥಿತಿಯಲ್ಲಿರುತ್ತವೆ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details