ಕರ್ನಾಟಕ

karnataka

ETV Bharat / state

ಕೇಂದ್ರದ ಜಿಎಸ್​​​ಟಿ ಪರಿಹಾರ ಮಾರ್ಗಸೂಚಿ ತಿರಸ್ಕರಿಸಿ; ರಾಜ್ಯ ಸರ್ಕಾರಕ್ಕೆ ಖರ್ಗೆ ಸಲಹೆ

ರಾಜ್ಯ ಕಾಂಗ್ರೆಸ್ ನಾಯಕರು ಮೇಲಿಂದ ಮೇಲೆ ಕೇಂದ್ರ ಸರ್ಕಾರದ ಜಿಎಸ್​​​​ಟಿ ಪರಿಹಾರ ಮಾರ್ಗಸೂಚಿಯನ್ನು ವಿರೋಧಿಸುತ್ತಲೇ ಬಂದಿದ್ದರು. ಈಗ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಬಗ್ಗೆ ದನಿ ಎತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸಲಹೆ ತಿರಸ್ಕರಿಸಿ ಎಂದಿದ್ದಾರೆ.

By

Published : Aug 31, 2020, 12:22 PM IST

Mallikharjun kharge on  central  GST Compensation Guidelines
ಜಿಎಸ್​​​ಟಿ ಪರಿಹಾರ ಮಾರ್ಗಸೂಚಿ ತಿರಸ್ಕರಿಸುವಂತೆ ಖರ್ಗೆ ಸೂಚನೆ

ಬೆಂಗಳೂರು:ಜಿಎಸ್​​ಟಿ ಪರಿಹಾರಕ್ಕಾಗಿ ರಾಜ್ಯಗಳು ಸಾಲ ತೆಗೆದುಕೊಳ್ಳಲಿ ಎಂಬ ಕೇಂದ್ರ ಸರ್ಕಾರದ ಸಲಹೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.

ಟ್ವೀಟ್ ಮೂಲಕ ರಾಜ್ಯಸರ್ಕಾರಕ್ಕೆ ಈ ಸಲಹೆ ನೀಡಿರುವ ಅವರು, ಕೇಂದ್ರವು ರೂಪಿಸಿರುವ ಜಿಎಸ್​​​ಟಿ ಪರಿಹಾರಕ್ಕಾಗಿ ನೀಡಿರುವ 2 ಆಯ್ಕೆಗಳನ್ನು ಕರ್ನಾಟಕ ಸರ್ಕಾರ ತಿರಸ್ಕರಿಸಬೇಕು. ಕೇಂದ್ರ ಸರ್ಕಾರದ ತಪ್ಪುಗಳಿಗೆ ರಾಜ್ಯಗಳಿಗೆ ಹೊರೆ ಹೊರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವೇ ಸಾಲ ಪಡೆಯುವ ಕಾರ್ಯ ಮಾಡುವ ಬದಲು ಕೇಂದ್ರವೇ ಸಾಲ ಪಡೆದು ರಾಜ್ಯಗಳಿಗೆ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು. ಈ ರೀತಿ ಮಾಡಿ ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಕೇಳಬೇಕು ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಪ್ರಾರಂಭದಿಂದಲೂ ಜಿಎಸ್​​ಟಿಯ ದೋಷಪೂರಿತ ಅನುಷ್ಠಾನದ ಬಗ್ಗೆ ಸರ್ಕಾರವನ್ನು ಎಚ್ಚರಿಸುತ್ತಲೇ ಬಂದಿದ್ದರು. ಆದರೆ ಇವರ ಮಾತಿಗೆ ಕೇಂದ್ರ ಬೆಲೆ ಕೊಡಲಿಲ್ಲ. ಕೇಂದ್ರ ಸರ್ಕಾರ ತನ್ನ ದುರಹಂಕಾರವನ್ನು ಬಿಡಬೇಕು ಮತ್ತು ವ್ಯಾಪಾರ ಸಮುದಾಯಗಳು ನೀಡುವ ಸಲಹೆಯನ್ನು ಆಲಿಸಬೇಕು ಎಂದಿದ್ದಾರೆ.

ಪ್ರಸ್ತುತ ಕಾರ್ಯತಂತ್ರವು ವ್ಯವಹಾರಗಳನ್ನು ಮತ್ತು ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details