ಕರ್ನಾಟಕ

karnataka

ETV Bharat / state

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸಿದ್ದತೆ ಮಾಡಿಕೊಳ್ಳಿ: ರಾಜ್ಯಕ್ಕೆ ಕೇಂದ್ರ ಸಚಿವ ಬಾಲ್ಯನ್ ಸೂಚನೆ

ರಾಜ್ಯದಲ್ಲಿ ನಡೆಯುತ್ತಿರುವ ಪಶುಸಂಗೋಪನೆ ಇಲಾಖೆ ಅಭಿವೃದ್ಧಿ ಕುರಿತು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಜೊತೆ ಕೇಂದ್ರ ಪಶುಸಂಗೋಪನೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಾಲ್ಯನ್ ಚರ್ಚೆ ನಡೆಸಿದರು. ಇದೆ ವೇಳೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ಕೂಡ ನೀಡಿದರು.

ಕೇಂದ್ರ ಸಚಿವ ಬಾಲ್ಯನ್
ಕೇಂದ್ರ ಸಚಿವ ಬಾಲ್ಯನ್

By

Published : Nov 12, 2020, 6:56 PM IST

ಬೆಂಗಳೂರು:ರಾಜ್ಯದಲ್ಲಿ‌ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆದಷ್ಟು ಬೇಗ ಸಿದ್ದತೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಪಶುಸಂಗೋಪನೆ ರಾಜ್ಯ ಖಾತೆ ಸಚಿವ ಸಂಜೀವ್ ಕುಮಾರ್ ಬಾಲ್ಯನ್ ಸೂಚನೆ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಪ್ರಧಾನಿ ಮೋದಿಯವರ ಆತ್ಮನಿರ್ಭರ್ ಭಾರತದ ಪರಿಕಲ್ಪನೆಗೆ ಪಶುಸಂಗೋಪನೆ ಇಲಾಖೆಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ಪಶುಸಂಗೋಪನೆ ಇಲಾಖೆ ಅಭಿವೃದ್ಧಿ ಕುರಿತು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಜೊತೆ ಕೇಂದ್ರ ಪಶುಸಂಗೋಪನೆ, ಮೀನುಗಾರಿಗೆ ಮತ್ತು ಡೈರಿ ಖಾತೆಯ ರಾಜ್ಯ ಸಚಿವ ಸಂಜೀವ್ ಕುಮಾರ್ ಬಾಲ್ಯನ್ ಚರ್ಚೆ ನಡೆಸಿದರು.

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸಿದ್ದತೆ ಮಾಡಿಕೊಳ್ಳಿ ಎಂದ ಕೇಂದ್ರ ಸಚಿವ ಬಾಲ್ಯನ್

ರಾಜ್ಯದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡ ಪಶುಸಂಜೀವಿನಿ (ಸುಸಜ್ಜಿತ ಪಶು ಶಸ್ತ್ರ ಚಿಕಿತ್ಸಾ ವಾಹನ), ಪ್ರಾಣಿಕಲ್ಯಾಣ ಮಂಡಳಿ ಹಾಗೂ ಸದ್ಯದಲ್ಲೇ ಅನುಷ್ಠಾನಗೊಳ್ಳಲಿರುವ ಗೋ ಸೇವಾ ಆಯೋಗ, ವಾರ್ ರೂಮ್ ಕುರಿತಾಗಿ ವಿವರಗಳನ್ನು ನೀಡಿದರು. ಅಲ್ಲದೇ ಇತ್ತೀಚೆಗೆ ರಾಜ್ಯದಲ್ಲಿ ಕಂಡುಬಂದ ಲಂಪಿಸ್ಕಿನ್ ರೋಗದ ಹತೋಟಿಗೆ ಇಲಾಖೆ ತೆಗೆದುಕೊಂಡ ಕ್ರಮಗಳನ್ನು ಮತ್ತು ಕಾಲುಬಾಯಿ ರೋಗದ ಲಸಿಕೆಯ ಪ್ರಗತಿಯ ಬಗ್ಗೆ ಸಹ ಚರ್ಚೆ ನಡೆಸಿದರು.

ಗೋಹತ್ಯೆ ನಿಷೇಧ ಕಾಯ್ದೆಯ ಅನುಷ್ಠಾನದ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸಚಿವ ಬಾಲ್ಯನ್ ವಿವರಣೆ ಪಡೆದುಕೊಂಡರು. ಆದಷ್ಟು ಬೇಗ ರಾಜ್ಯದಲ್ಲಿ ಕಾಯ್ದೆಯನ್ನು ಜಾರಿಗೆ ತರಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲು ತಿಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪಶುಸಂಗೋಪನೆ ಇಲಾಖೆಯ ಆಯುಕ್ತ ಪ್ರವೀಣ್ ಮಲಿಕ್ ಹಾಜರಿದ್ದರು.

ABOUT THE AUTHOR

...view details