ಬೆಂಗಳೂರು: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ಅರ್ಜಿ ವಿಚಾರಣೆ ನಡೆಯಲಿದೆ. ಈ ಸಂಬಂಧ ರಾಜ್ಯದ ಅಡ್ವೊಕೇಟ್ ಜನರಲ್ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮಹತ್ವದ ಮಾತುಕತೆ ನಡೆಸಿದರು. ಚಳ್ಳಕೆರೆ, ಹಿರಿಯೂರು ಪ್ರವಾಸ ಮುಗಿಸಿ ಬೆಂಗಳೂರಿಗೆ ಬರುತ್ತಿದ್ದಂತೆ, ರೇಸ್ ಕೋರ್ಸ್ ರಸ್ತೆಯ ತಮ್ಮ ಸರ್ಕಾರಿ ನಿವಾಸಕ್ಕೆ ಎಜಿ ಅವರನ್ನು ಕರೆಯಿಸಿ ಮಾತುಕತೆ ನಡೆಸಿದರು.
ಗಡಿ ವಿವಾದ: ಅಡ್ವೊಕೇಟ್ ಜನರಲ್ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ - maharastra karnataka border issue
ಸುಪ್ರೀಂ ಕೋರ್ಟ್‌ನಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ಅರ್ಜಿ ವಿಚಾರಣೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಡ್ವೊಕೇಟ್ ಜನರಲ್ (ಎಜಿ) ಅವರನ್ನು ಕರೆಯಿಸಿ ಚರ್ಚೆ ನಡೆಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಜೊತೆಗಿನ ಮಾತುಕತೆ ವೇಳೆ, ಮಹಾರಾಷ್ಟ್ರ ಸರ್ಕಾರದ ಅರ್ಜಿಯನ್ನು ಪರಿಗಣಿಸದ ರೀತಿ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸುವ ಬಗ್ಗೆ ತಿಳಿಸಿದರು. ಈಗಾಗಲೇ ಸರ್ಕಾರದ ಪರವಾಗಿ ವಾದಿಸಲು ಮುಕುಲ್ ರೋಹ್ಟಗಿ ನೇತೃತ್ವದ ಹಿರಿಯ ವಕೀಲರ ತಂಡ ಸಿದ್ದವಾಗಿದ್ದು, ತಂಡಕ್ಕೆ ಸರ್ಕಾರದ ಪರವಾಗಿ ಎಜಿ ಅಗತ್ಯ ಸಹಕಾರ ನೀಡುವರು.
ಇದನ್ನೂ ಓದಿ:ಕರ್ನಾಟಕ - ಮಹಾ ಗಡಿ ವಿವಾದ ಮತ್ತೆ ಮುನ್ನೆಲೆಗೆ: ಇಂದಿನಿಂದ ಸುಪ್ರೀಂ ಅಂಗಳದಲ್ಲಿ ಉಭಯ ರಾಜ್ಯಗಳ ವಾದ - ಪ್ರತಿವಾದ!