ಬೆಂಗಳೂರು: ಆರ್.ಆರ್. ನಗರದಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿರುವುದೇ ನಮಗೆ ಅಡ್ವಾಂಟೇಜ್ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಆರ್ ಆರ್ ನಗರದಲ್ಲಿ ಕಡಿಮೆ ಮತದಾನ ಆಗಿರುವುದೇ ನಮಗೆ ಅಡ್ವಾಂಟೇಜ್: ಸಿದ್ದರಾಮಯ್ಯ - Opposition leader Siddaramaiah latest news
ಶಿರಾ ಹಾಗೂ ಆರ್.ಆರ್. ನಗರ ಎರೆಡೂ ಕ್ಷೇತ್ರದಲ್ಲಿಯೂ ನಾವು ಗೆಲ್ಲುತ್ತೇವೆ. ಮತದಾನದ ಪ್ರಮಾಣ ಕಡಿಮೆ ಆಗಿರುವುದು ನಮಗೆ ಅನುಕೂಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಮಾಹಿತಿ ಪ್ರಕಾರ ನಾವು ಶಿರಾ ಹಾಗೂ ಆರ್.ಆರ್. ನಗರ ಎರಡೂ ಕ್ಷೇತ್ರದಲ್ಲಿಯೂ ಗೆಲ್ಲುತ್ತೇವೆ. ಮತದಾನದ ಪ್ರಮಾಣ ಕಡಿಮೆ ಆಗಿರುವುದು ನಮಗೆ ಅನುಕೂಲ. ರಾಜ್ಯ ಸರ್ಕಾರದ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಅದು ಈ ಉಪಚುನಾವಣೆ ಫಲಿತಾಂಶದ ಮೂಲಕ ಬಹಿರಂಗವಾಗಲಿದೆ ಎಂದರು.
ಲವ್ ಜಿಹಾದ್ ವಿರುದ್ಧ ಕಾನೂನಿನ ಅಸ್ತ್ರ ಉಪಯೋಗಿಸುವ ವಿಚಾರ ಗೊತ್ತಿಲ್ಲ. ಭೂಸುಧಾರಣಾ ಕಾಯ್ದೆ ವಿರುದ್ಧ ಮತ್ತೆ ಹೋರಾಟ ಮಾಡುತ್ತೇವೆ. ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.