ಬೆಂಗಳೂರು:ಹಣಕಾಸಿನ ವಿಚಾರದ ಹಿನ್ನೆಲೆಯಲ್ಲಿ ಲಾರಿ ಚಾಲಕ ಸೆಲ್ಫಿ ವಿಡಿಯೋ ಮಾಡಿ, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಕಿರಣ್ ಕುಮಾರ್ ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಕೆ.ಆರ್.ಪುರಂನ ತಿರುಮಲ ಲಾಜಿಸ್ಟಿಕ್ಸ್ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್, ಕಂಪನಿಯ ಮಾಲೀಕ ಸಂಬಳ ಹಾಕದ ಹಿನ್ನೆಲೆಯಲ್ಲಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಮಂಜಣ್ಣ, ಶಿವಣ್ಣ, ತಿರುಮಲ ಲಾಜಿಸ್ಟಿಕ್ಸ್ ಒಡೆಯ ಮನು ಅವರೇ ಸಾವಿಗೆ ತನ್ನ ಸಾವಿಗೆ ಕಾರಣ ಎಂದು ವಿಡಿಯೋದಲ್ಲಿ ಆರೋಪ ಮಾಡಿದ್ದಾನೆ.