ಕರ್ನಾಟಕ

karnataka

ETV Bharat / state

ಲೋಕಸಭೆ ಎಲೆಕ್ಷನ್ ಹಿನ್ನೆಲೆ.. ಬೆಟ್ಟಿಂಗ್‌ ಭೂಪ, ರೌಡಿ ಕುಣಿಗಲ್ ಗಿರಿ ಸಿಸಿಬಿ ವಶಕ್ಕೆ

ರೌಡಿ ಕುಣಿಗಲ್ ಗಿರಿ ಐಪಿಎಲ್ ಕ್ರಿಕೆಟ್​​​ ಮ್ಯಾಚ್ ವೇಳೆ ಬೆಟ್ಟಿಂಗ್ ನಡೆಸಿ ಹಣ ಮಾಡುತ್ತಿದ್ದ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಗಿರಿಯನ್ನ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಕುಣಿಗಲ್ ಗಿರಿ

By

Published : Apr 14, 2019, 7:10 PM IST

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೌಡಿ ಕುಣಿಗಲ್ ಗಿರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಕುಣಿಗಲ್ ಗಿರಿ ಇತ್ತೀಚೆಗೆ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್​​​ ಮ್ಯಾಚ್ ವೇಳೆ ಬೆಟ್ಟಿಂಗ್ ನಡೆಸಿ ಹಣ ಮಾಡುತ್ತಿದ್ದ. ಈತನ ವಿಚಾರ ತಿಳಿದು ಸಿಸಿಬಿ ವಶಕ್ಕೆ ಪಡೆದಿದೆ. ಅಲ್ಲದೆ ಲೋಕಸಭೆ ಚುನಾವಣೆ ಬರುತ್ತಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಈತನನ್ನ ವಶಕ್ಕೆ ಪಡೆದಿದ್ದೇವೆ. ಕುಣಿಗಲ್ ಗಿರಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.

ಗಿರಿ ಕುಣಿಗಲ್ ನಿವಾಸಿಯಾಗಿದ್ದು, ಈತನ ಅಪ್ಪ ಅರ್ಚಕರಾಗಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಫೇಲ್​ ಆದ ನಂತರ ದೇವಸ್ಥಾನ ಕಳ್ಳತನಕ್ಕಿಳಿದ ಗಿರಿಯನ್ನು ತಂದೆಯೇ ಮನೆಯಿಂದ ಹೊರಹಾಕಿದ್ದ. ಅಲ್ಲಿಂದ ಬೆಂಗಳೂರಿಗೆ ಬಂದ ಈತ ಸುಮಾರು 132ಕ್ಕೂ ಹೆಚ್ಚು ರಾಬರಿ, ಕಳ್ಳತನ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ.

ಮೊನ್ನೆ ತಾನೆ ನಡೆದ ಸಿಲಿಕಾನ್ ಸಿಟಿಯ ರೌಡಿಗಳ ಪರೇಡ್​ ವೇಳೆ ಕುಣಿಗಲ್ ಗಿರಿ ಬಂದಿದ್ದ. ಬಳಿಕ ನಿನ್ನೆ ಗಿರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details