ಬೆಂಗಳೂರು: ಎಲ್ಲ ಬಾರ್, ವೈನ್ಶಾಪ್ಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಪೂರೈಕೆ ಮಾಡಲಾಗುವುದು ಎಂದು ಕೆಎಸ್ಬಿಸಿಎಲ್ ತಿಳಿಸಿದೆ.
ಮದ್ಯಪ್ರಿಯರಿಗೆ ನೋ ಟೆನ್ಷನ್: ಅಂಗಡಿಗಳಲ್ಲಿದೆ ಸಾಕಷ್ಟು ದಾಸ್ತಾನು - bangalore latest nesw
ನಿನ್ನೆ ಬೆಳಗ್ಗೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಕೆಎಸ್ಬಿಸಿಎಲ್ನಿಂದ 3.95 ಲಕ್ಷ ಕೇಸ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಪೂರೈಕೆ ಮಾಡಲಾಗಿದೆ.
ಅಂಗಡಿಗಳಲ್ಲಿ ಸಾಕಷ್ಟು ಎಣ್ಣೆ ಸ್ಟಾಕ್
79,000 ಕೇಸ್ ಬಿಯರ್ ಕೂಡ ಮಾಡಲಾಗಿದ್ದು, ಇದರ ಅಂದಾಜು ಮೊತ್ತ 183 ಕೋಟಿ ರುಪಾಯಿ ಆಗಿದೆ. ಬೆಂಗಳೂರಲ್ಲಿ ಒಟ್ಟು 22( KSBCL) ಗೊಡೌನ್ಗಳಿದ್ದು, ಯಶವಂತಪುರದ ಕೆಎಸ್ಬಿಸಿಎಲ್ ಗೊಡೌನ್‌ನಿಂದಲೇ 1,550 ಬಿಯರ್ ಕೇಸ್ಗಳನ್ನು ಸರಬರಾಜು ಮಾಡಲಾಗಿದೆ.
ಯಶವಂತಪುರ ವ್ಯಾಪ್ತಿಯಲ್ಲಿ ಬರುವ 28 ಸಿ.ಎಲ್ 2 ಅಂಗಡಿಗಳಿಗೆ ಸುಮಾರು ಬೆಲೆ 2.50 ಕೋಟಿ ಮದ್ಯ ಸರಬರಾಜು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.