ಕರ್ನಾಟಕ

karnataka

ETV Bharat / state

ಚುನಾವಣಾ ಅಕ್ರಮ: 2,78,798 ಲೀಟರ್ ಮದ್ಯ, 13.575 ಕೆ.ಜಿ ಚಿನ್ನ ಮತ್ತಿತರ ವಸ್ತುಗಳ ವಶ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂಬಂಧ ಎಲ್ಲೆಡೆ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಅಪಾರ ಪ್ರಮಾಣದ ಮದ್ಯ, ಅಕ್ರಮ ನಗದು, ಚಿನ್ನಾಭರಣ, ಮಾದಕ ದ್ರವ್ಯಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

By

Published : Apr 3, 2023, 9:40 PM IST

ವliquor-illegal-cash-jewellery-and-drugs-seized-by-election-commission-officers
ಚುನಾವಣಾ ಅಕ್ರಮ : 2,78,798 ಲೀಟರ್ ಮದ್ಯ, 13.575 ಕೆ.ಜಿ ಚಿನ್ನ ಮತ್ತಿತರ ವಸ್ತುಗಳ ವಶ

ಬೆಂಗಳೂರು :ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಮಾರ್ಚ್ 29 ರಿಂದ ಇಲ್ಲಿಯವರೆಗೆ ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು ರೂ.12,82,94,736 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 16,02,76,775 ರೂ. ಮೌಲ್ಯದ 2,78,798 ಲೀಟರ್ ಮದ್ಯ ವಶಪಡಿಸಿಕೊಂಡಿವೆ. ಜೊತೆಗೆ, 41,26,155 ರೂ. ಮೌಲ್ಯದ 79.44 ಕೆ.ಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಅಬಕಾರಿ ಇಲಾಖೆಯು 450 ಗಂಭೀರ ಪ್ರಕರಣಗಳನ್ನು ಹಾಗೂ ಮದ್ಯದ ಪರವಾನಗಿ ಉಲ್ಲಂಘಿಸಿದ 305 ಪ್ರಕರಣಗಳು, 16 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15(ಎ) ಅನ್ವಯ ಒಟ್ಟು 1,238 ಪುಕರಣಗಳನ್ನು ದಾಖಲಿಸಿವೆ ಮತ್ತು 270 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಕ್ಷಣ ದಳ, ಸ್ಥಿರ ಕಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ 6,72,96,733 ರೂ. ಮೌಲ್ಯದ 13.575 ಕೆ.ಜಿ ಚಿನ್ನ ಹಾಗೂ 63,98,560 ರೂ. ಮೌಲ್ಯದ 88.763 ಕೆ.ಜಿ. ಬೆಳ್ಳಿ ಹಾಗೂ 10,79,92,943 ರೂ. ಮೌಲ್ಯದ ಉಚಿತ ಕೊಡುಗೆ ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಆಯೋಗ ತಿಳಿಸಿದೆ.

ನಗದು, ಮದ್ಯ, ಮಾದಕ ದ್ರವ್ಯ, ಅಮೂಲ್ಯ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡ ಮತ್ತು ಪೊಲೀಸ್ ಅಧಿಕಾರಿಗಳು 316 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 31,486 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 10 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 7 ಶಸ್ತ್ರಾಸ್ತ್ರಗಳ ಪರವಾನಗಿ ರದ್ದು ಪಡಿಸಲಾಗಿದೆ.

ಸಿಆರ್‌ಪಿಸಿ ಕಾಯ್ದೆಯಡಿ 1,416 ಪುಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 1,869 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 3554 ಜಾಮೀನು ರಹಿತ ವಾರಂಟ್ ಗಳನ್ನು ಜಾರಿಗೊಳಿಸಲಾಗಿದೆ. ಎಲ್ಲ ತಂಡಗಳು ಒಟ್ಟು 47,43,85,902 ರೂ. ಮೌಲ್ಯದ ನಗದು ಸೇರಿದಂತೆ ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವಿಶೇಷ ವರದಿ :ಸ್ಥಿರ ಕಾವಲು ತಂಡಗಳು ಬೆಂಗಳೂರು ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರೂ. 29,94,550/- ನಗದು ಮತ್ತು ಆದಾಯ ತೆರಿಗೆ ಇಲಾಖೆಯು ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ರೂ. 42,95,000 ನಗದನ್ನು ವಶಪಡಿಸಿಕೊಂಡಿವೆ.

ಸಾರ್ವಜನಿಕ ಕುಂದುಕೊರತೆಗಳ ಇತ್ಯರ್ಥ: ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 1,047 ಕರೆಗಳಲ್ಲಿ 1,019 ಸಾರ್ವಜನಿಕರು ಮಾಹಿತಿ ಕೋರಿದ್ದಾರೆ. 3 ಜನರು ಪ್ರತಿಕ್ರಿಯ (ಫೀಡ್‌ಬ್ಯಾಕ್) ನೀಡಿದ್ದಾರೆ. 6 ಜನರು ಸಲಹೆಗಳನ್ನು ನೀಡಿದ್ದಾರೆ ಮತ್ತು 19 ಜನರು ದೂರುಗಳನ್ನು ದಾಖಲಿಸಿದ್ದಾರೆ. ಸ್ವೀಕರಿಸಿದ ಎಲ್ಲ 1,047 ಕರೆಗಳ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಇದಲ್ಲದೇ ಎನ್‌ಜಿಆರ್‌ಎಸ್‌ ಪೋರ್ಟ್‌ನಲ್ಲಿ 362 ದೂರುಗಳನ್ನು ನಾಗರಿಕರು ನೋಂದಾಯಿಸಿದ್ದು, ಇವುಗಳಲ್ಲಿ 140 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಸಿ-ವಿಜಿಲ್ ಅಪ್ಲಿಕೇಷನ್ ಮೂಲಕ 424 ದೂರು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಪುಮುಖವಾದವು, ಪರವಾನಿಗೆ ಇಲ್ಲದ ಪೋಸ್ಟರ್/ಬ್ಯಾನರ್ ಅಂಟಿಸಿದ 169 ಪ್ರಕರಣಗಳು, ಹಣ ಹಂಚಿಕೆ 11, ಪಾವತಿಸಿದ ಸುದ್ದಿ 03, ಉಡುಗೊರೆ ಕೂಪನ್ ಹಂಚಿಕೆ 14, ಮದ್ಯ ಹಂಚಿಕೆ 7, ಆಸ್ತಿ ಹಾನಿಗೊಳಿಸಿದ 05, ಪರವಾನಿಗೆ ಇಲ್ಲದ ವಾಹನ ಅಥವಾ ಬೆಂಗಾವಲು ಪಡೆ 10 ಪ್ರಕರಣಗಳು ಸೇರಿದಂತೆ ಈ ಪೈಕಿ 216 ದೂರುಗಳು ನಿಜವೆಂದು ಕಂಡುಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ವಿವಿಧ ಮಾಧ್ಯಮಗಳ ಮೂಲಕ ದೂರುಗಳನ್ನು ಸ್ವೀಕರಿಸಲಾಗಿದ್ದು, ಇಮೇಲ್ 60 ಮತ್ತು ಪತ್ರಗಳ ಮೂಲಕ 62, ಸುದ್ದಿಪತ್ರಿಕೆಗಳಿಂದ 6, ಟಿ.ವಿ ಚಾನಲ್‌ಗಳಿಂದ 14 ಮತ್ತು ಸಾಮಾಜಿಕ ಜಾಲತಾಣಗಳಿಂದ 24 ಸೇರಿದಂತೆ ಒಟ್ಟು 166 ದೂರುಗಳು ಬಂದಿದ್ದು, 84 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಸುವಿಧಾ :ಆನ್‌ಲೈನ್ ವ್ಯವಸ್ಥೆ ಸುವಿಧಾ ಮೂಲಕ ವಿವಿಧ ಅನುಮತಿ ಕೋರಿ 3/4 ಒಟ್ಟು 512 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 240 ಅರ್ಜಿಗಳ 11 ಅನುಮತಿ ನೀಡಲಾಗಿದ್ದು, 170 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅವುಗಳಲ್ಲಿ 02 ಅರ್ಜಿಗಳು ಪ್ರಗತಿಯಲ್ಲಿದೆ. 94 ಅರ್ಜಿಗಳು ಬಾಕಿ ಉಳಿದಿದ್ದು, 06 ಅರ್ಜಿಗಳನ್ನು ಅರ್ಜಿದಾರರೆ ರದ್ದು ಪಡಿಸಿದ್ದಾರೆ.

ಇದನ್ನೂ ಓದಿ :ಚುನಾವಣೆ ಬೆನ್ನಲ್ಲೇ ಗೋವಾದಿಂದ ಹರಿದು ಬರುತ್ತಿದೆ ಅಗ್ಗದ ಮದ್ಯ, ಕಂತೆ ಕಂತೆ ನೋಟು!!

ABOUT THE AUTHOR

...view details