ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಎರಡು ವಿಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಿ ಪೊಲೀಸ್ ಕಮಿಷನರ್ ಆದೇಶ - ಮದ್ಯ ಮಾರಾಟ

ಗಣಪತಿ ನಿಮಜ್ಜನ ಮೆರವಣಿಗೆಗಳು ಭಾರಿ ಪ್ರಮಾಣದಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳ ಮೂಲಕ ಹಾದು ಹೋಗಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಬಾರ್, ಪಬ್, ರೆಸ್ಟೋರೆಂಟ್​ಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧಿಸಲಾಗಿದೆ.

liquor band order by Police Commissioner
ಮದ್ಯ ಮಾರಾಟ ನಿಷೇಧಿಸಿ ಪೊಲೀಸ್ ಕಮಿಷನರ್ ಆದೇಶ

By

Published : Sep 2, 2022, 4:52 PM IST

ಬೆಂಗಳೂರು : ಸಾಮೂಹಿಕ ಗಣೇಶ ಮೂರ್ತಿ ನಿಮಜ್ಜನ ಹಿನ್ನೆಲೆ ಸೆ. 3ರ ಸಂಜೆ 6 ರಿಂದ ಸೆ. 5ರ ಬೆಳಗ್ಗೆ 6 ಗಂಟೆಯವರೆಗೂ ಬೆಂಗಳೂರಿನ ಈಶಾನ್ಯ ಹಾಗೂ ಪೂರ್ವ ವಿಭಾಗದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಗೊಳಿಸಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ.

ನಿಮಜ್ಜನ ಮೆರವಣಿಗೆಗಳು ಭಾರಿ ಪ್ರಮಾಣದಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಬಾರ್, ಪಬ್, ರೆಸ್ಟೋರೆಂಟ್​ಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧಿಸಲಾಗಿದೆ. ಸೆ.3ರ ಸಂಜೆ 6 ಗಂಟೆಯಿಂದ 5ರ ಬೆಳಗ್ಗೆ 6ರವರೆಗೂ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ, ಯಲಹಂಕ, ಯಲಹಂಕ ನ್ಯೂಟೌನ್, ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧವಿರಲಿದೆ.

ಸೆ. 4ರ ಬೆಳಗ್ಗೆ 6 ರಿಂದ 5 ರ ಬೆಳಗ್ಗೆ 6 ರವರೆಗೂ ಪೂರ್ವ ವಿಭಾಗದ ಕೆ.ಜಿ.ಹಳ್ಳಿ, ಗೋವಿಂದಪುರ, ಡಿ.ಜೆ.ಹಳ್ಳಿ, ಬಾಣಸವಾಡಿ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಭಾರತಿನಗರ, ಪುಲಿಕೇಶಿ ನಗರ, ಹಲಸೂರು ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟ ನಿಷೇಧವಿರಲಿದೆ.

ಇದನ್ನೂ ಓದಿ:ಈದ್ಗಾ ಮೈದಾನದ ಗಣೇಶೋತ್ಸವ ಯಶಸ್ವಿ: ಪ್ರಮೋದ್ ಮುತಾಲಿಕ್

ABOUT THE AUTHOR

...view details