ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ನ್ಯಾಯ ಕೊಡಿಸಬೇಕಾದ ಪೊಲೀಸರು ಅಕ್ರಮವೆಸಗಿ ದುರ್ವರ್ತನೆ ತೋರುವ ಘಟನೆಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಹಣಕ್ಕಾಗಿ ವ್ಯಕ್ತಿಯೋರ್ವನನ್ನು ಮಾರತ್ತಹಳ್ಳಿ ಪೊಲೀಸರು ಅಪರಿಹರಿಸಿದ ಅಪಾದನೆ ಹಸಿಯಿರುವಾಗಲೇ ಮತ್ತೋರ್ವ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಸುಬ್ರಮಣ್ಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶರಣಗೌಡ ವಿರುದ್ಧ ಠಾಣಾ ಸಿಬ್ಬಂದಿಗಳೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಷ್ಟ್ರಪತಿ, ಪ್ರಧಾನಿಮಂತ್ರಿಗಳಿಗೆ ಸಿಬ್ಬಂದಿಯೊಬ್ಬರು ದೂರು ನೀಡಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದೂರಿನಲ್ಲಿ ಠಾಣೆಯ ಪ್ರತಿಯೊಂದು ಅವ್ಯವಹಾರ ಹಾಗೂ ಇನ್ಸ್ಪೆಕ್ಟರ್ ಕಿರುಕುಳದ ಬಗ್ಗೆ ಇಂಚಿಂಚು ಮಾಹಿತಿಯನ್ನ ಬರೆದಿದ್ದಾರೆ. ಆ ದೂರಿನ ಪ್ರತಿಯಲ್ಲಿ ಬಹುತೇಕ ವಸೂಲಿ ವಿಚಾರಗಳು ಪ್ರಸ್ತಾಪವಾಗಿವೆ.