ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆಯ ಆಳಕ್ಕಿಳಿದಿರುವ ಸಿಸಿಬಿ ಪೊಲೀಸರಿಗೆ ಒಂದೊಂದು ರೋಚಕ ವಿಚಾರಗಳು ಬೆಳಕಿಗೆ ಬರ್ತಿವೆ. ಹೀಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರ ಬರೆಯಲು ಬೆಂಗಳೂರು ನಗರ ಆಯುಕ್ತ ಪೊಲೀಸ್ ಕಮಿಷನರ್ ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಹಗರಣ ಬಗೆದಷ್ಟು ಆಳ.. ಕೆಪಿಎಲ್ ನಿಷೇಧಕ್ಕೆ ಬಿಸಿಸಿಐಗೆ ಪತ್ರ ಬರೆಯುತ್ತಾರಾ ಕಮೀಷನರ್? - Letter from commissioner to BCCI to ban the KPL
ಕೆಎಪಿಎಲ್ ಕ್ರಿಕೆಟ್ನಲ್ಲಿ ಸಾಕಷ್ಟು ಹಗರಣಗಳು ನಡೆದ ಹಿನ್ನೆಲೆಯಲ್ಲಿ ಕೆಪಿಎಲ್ ಪಂದ್ಯಾವಳಿಗಳನ್ನು ಬ್ಯಾನ್ ಮಾಡುವಂತೆ ಬೆಂಗಳೂರು ನಗರ ಆಯುಕ್ತ ಕಮಿಷನರ್ ಚಿಂತನೆ ನಡೆಸಿದ್ದಾರೆ.

ಕೆಪಿಎಲ್ ಪ್ರಕರಣ ಬಗೆದಷ್ಟೂ ಪ್ರತಿಷ್ಠಿತ ಆಟಗಾರರು ಹಾಗೂ ಮ್ಯಾನೇಜ್ಮೆಂಟ್ ಭಾಗಿಯಾಗಿರುವ ಮಾಹಿತಿ ಮೇರೆಗೆ ಬಿಸಿಸಿಐ ಅಧ್ಯಕ್ಯರಿಗೆ ಪತ್ರ ಬರೆದು ಕರ್ನಾಟಕ ಪ್ರೀಮಿಯರ್ ಲೀಗ್ ನಿಷೇಧಿಸುವಂತೆ ತಿಳಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಈವರೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ತನಿಖೆ ನಡೆಸಿದಾಗ ಪ್ರಕರಣದಲ್ಲಿ ಭಾಗಿಯಾದ ಆಟಗಾರರ ಮಾಹಿತಿಯನ್ನ ಪತ್ರದಲ್ಲಿ ಉಲ್ಲೇಖ ಮಾಡಲಿದ್ದಾರೆ. ಸದ್ಯ ಕಮಿಷನರ್ಗೆ ವರದಿ ತಲುಪಿದ ನಂತ್ರ ಅವರು ಈ ಬಗ್ಗೆ ಪತ್ರ ರವಾನಿಸಲಿದ್ದಾರೆ. ಬಿಸಿಸಿಐ ಮುಂದಿನ ನಿರ್ಧಾರ ಏನು ತೆಗೆದುಕೊಳ್ಳುತ್ತೋ ಅದರ ಮೇಲೆ ಕೆಪಿಎಲ್ ಭವಿಷ್ಯ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.