ಕರ್ನಾಟಕ

karnataka

ETV Bharat / state

ನಾಯಕತ್ವದ ಬದಲಾವಣೆ ಸುಳ್ಳು, ಸದ್ಯದಲ್ಲೇ ಎಲ್ಲವೂ ಸರಿಯಾಗಲಿದೆ: ಎಂ.ಬಿ.ಪಾಟೀಲ್​​​ - kannadanews

ಅತೃಪ್ತರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಸಿಎಂ ಬಂದ ಮೇಲೆ ವೇಣುಗೋಪಾಲ್ ಸೇರಿದಂತೆ ಎಲ್ಲರೂ ಚರ್ಚೆ ನಡೆಸಲಿದ್ದೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ.

ನಾಯಕತ್ವದ ಬದಲಾವಣೆ ಸುಳ್ಳು

By

Published : Jul 7, 2019, 7:23 PM IST

ಬೆಂಗಳೂರು: ನಾಯಕತ್ವದ ಬದಲಾವಣೆ ಸುಳ್ಳು. ಆದಷ್ಟು ಬೇಗ ಎಲ್ಲವೂ ಸರಿಯಾಗಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್​​ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಸಿಎಂ ಬರ್ತಿದ್ದಾರೆ. ಎಲ್ಲರೂ ಮಾತಾಡ್ತಾ ಇದ್ದಾರೆ. ಅತೃಪ್ತರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಸಿಎಂ ಬಂದ ಮೇಲೆ ವೇಣುಗೋಪಾಲ್, ಸಿದ್ದರಾಮಯ್ಯ ಎಲ್ರೂ ಚರ್ಚೆ ಮಾಡ್ತೀವಿ. ಸರ್ಕಾರ ಉಳಿಯುತ್ತೆ ಎಂದು ವಿವರಿಸಿದರು.

ಗೃಹ ಸಚಿವ ಎಂ.ಬಿ.ಪಾಟೀಲ್​

ಅಸಮಾಧಾನಿತ ಶಾಸಕ ಭೀಮಾನಾಯಕ್ ಮಾತನಾಡಿ, ಒನ್ ಟು ಒನ್ ಕರೆದು ಮಾತನಾಡಿಸಿದ್ದಾರೆ. ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ನಮಗೆ ಅಸಮಾಧಾನ ಇರುವುದು ರೇವಣ್ಣ ಅವರ ಮೇಲೆ. ಕೆಎಂಎಫ್ ವಿಚಾರವಾಗಿ ನನಗೆ ಅಸಮಾಧಾನ ಇರುವುದು ನಿಜ. ಎಲ್ಲಾ ವಿಚಾರವನ್ನು ಹಿರಿಯರು ಬಂದು ತಿಳಿಸುತ್ತಾರೆ. ಯಾರನ್ನಾದ್ರು ಸಂಪರ್ಕ ಮಾಡಿರುವ ಬಗ್ಗೆ ಹಿರಿಯರು ಬಂದು ಹೇಳುತ್ತಾರೆ ಎಂದು ಹೇಳಿದರು. ಹಲವಾರು ಶಾಸಕರು ಹೇಳುತ್ತಿದ್ದಾರೆ ಎಲ್ಲಾ ಇಲಾಖೆಗಳಲ್ಲಿ ರೇವಣ್ಣ ಕೈಯಾಡಿಸುತ್ತಾರೆ ಅಂತ. ಜೊತೆಗೆ ರಾಜೀನಾಮೆ ಕೊಡುವುದಕ್ಕೆ ರೇವಣ್ಣ ಕೂಡ ಕಾರಣ ಅಂತ ಕೆಲವರು ಹೇಳಿದ್ದಾರೆ. ಕೆಎಂಎಫ್ ವಿಚಾರ ಬಂದಾಗ ಯಾವುದೇ ಕಾರಣಕ್ಕೂ ರೇವಣ್ಣ ಅವರಿಗೆ ಬಿಟ್ಟು ಕೊಡುವ ಮಾತೇ ಇಲ್ಲ. ನಾನು ಕಾಂಗ್ರೆಸ್​​ನಲ್ಲಿ ಇದ್ದೇನೆ. ಕಾಂಗ್ರೆಸ್​​​ನಲ್ಲೇ ಇರುತ್ತೇನೆ ಎಂದ್ರು.

ABOUT THE AUTHOR

...view details