ಬೆಂಗಳೂರು: ಹೈಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ಗೆಂದು ತಂದಿದ್ದ ಲ್ಯಾಪ್‌ಟಾಪ್ ಕಳ್ಳತನವಾಗಿದ್ದು, ಈ ಕುರಿತು ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗೆಜೆಟೆಡ್ ಅಧಿಕಾರಿ ಪಂಕಜ್ ಎಂಬುವವರು ಲ್ಯಾಪ್‌ಟಾಪ್ ಕಳ್ಳತನವಾಗಿರುವ ಕುರಿತು ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೈಕೋರ್ಟ್ನಲ್ಲಿದ್ದ ಲ್ಯಾಪ್‌ಟಾಪ್ ಎಗರಿಸಿದ ಕಳ್ಳರು: ಎಫ್ಐಆರ್ ದಾಖಲು - ಹೈಕೋರ್ಟ್ ಲ್ಯಾಪ್‌ಟಾಪ್ ಕಳ್ಳತನ
ಹೈಕೋರ್ಟ್‌ನ ಹೆಚ್.ಎಸ್.ಶೌರಿಯವರ ಕೊಣೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಸಲುವಾಗಿ ಡಿ. 23ರಂದು ಮಧ್ಯಾಹ್ನ 2.30ಕ್ಕೆ ಡೆಲ್ ಕಂಪನಿಯ ಲ್ಯಾಪ್‌ಟಾಪ್ ಇರಿಸಲಾಗಿತ್ತು. ಕೆಲ ಸಮಯದ ಬಳಿಕ ಬಂದು ನೋಡಿದಾಗ ಲ್ಯಾಪ್‌ಟಾಪ್ ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ.
ಹೈಕೋರ್ಟ್
ಹೈಕೋರ್ಟ್‌ನ ಹೆಚ್.ಎಸ್.ಶೌರಿಯವರ ಕೊಣೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಸಲುವಾಗಿ ಡಿ. 23ರಂದು ಮಧ್ಯಾಹ್ನ 2.30ಕ್ಕೆ ಡೆಲ್ ಕಂಪನಿಯ ಲ್ಯಾಪ್‌ಟಾಪ್ ಇರಿಸಲಾಗಿತ್ತು. ಕೆಲ ಸಮಯದ ಬಳಿಕ ಬಂದು ನೋಡಿದಾಗ ಲ್ಯಾಪ್‌ಟಾಪ್ ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ಬಳಿಕ ವಿಧಾನಸೌಧ ಠಾಣೆಗೆ ಬಂದು ಲ್ಯಾಪ್‌ಟಾಪ್ ಕಳ್ಳತನವಾಗಿರುವ ಕುರಿತು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ:ವಾಯು ವಿಹಾರಕ್ಕೆ ತೆರಳಿದ್ದ ಪೊಲೀಸ್ ಪತ್ನಿಯ ಸರ ಕದ್ದು ಪರಾರಿಯಾದ ದುಷ್ಕರ್ಮಿಗಳು..