ಬೆಂಗಳೂರು :ಕೊರೊನಾ ಸಂಕಷ್ಟದ ನಡುವೆಯೂ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದ ಪೊಲೀಸ್ ಮಹಿಳೆಯು, ತಾಯಿ ಮಗುವನ್ನು ಸುರಕ್ಷಿತವಾಗಿ ಮನೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ದೃಶ್ಯ ವಿಶ್ವ ತಾಯಂದಿರ ದಿನದಂದು ಕಂಡು ಬಂತು.
ಪೊಲೀಸಾದರೇನು ತಾಯ್ತನ ಹುಟ್ಟಿದಾರಭ್ಯ ಬರುತ್ತೆ.. ಅದಕ್ಕೆ ಇಲ್ಲೊಂದು ಸಾಕ್ಷಿಯಿದೆ ನೋಡಿ..
ಚಿಕ್ಕ ಬಾಣಾವರ ಮತ್ತು ಮಾಲೂರಿನಿಂದ ಇಂದು ಮತ್ತೊಂದಿಷ್ಟು ವಲಸೆ ಕಾರ್ಮಿಕರನ್ನ ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಕೈಯಲ್ಲಿ ಮಗು ಹೊತ್ತು ಊರ ದಾರಿ ಹಿಡಿದಿದ್ದ ತಾಯಿ- ಮಗುವಿನ ಆರೋಗ್ಯವನ್ನ ಕೊರೊನಾ ವಾರಿಯರ್ಸ್ ವಿಚಾರಿಸಿದರು.
ಬರೋಬ್ಬರಿ ಒಂದೂವರೆ ತಿಂಗಳಿನಿಂದ ಮನೆ ಮಕ್ಕಳನ್ನ ದೂರವಿರಿಸಿ, ಕೊರೊನಾ ವಿರುದ್ಧ ಆರೋಗ್ಯ ಕಾರ್ಯಕರ್ತರಿಂದ ಹಿಡಿದು ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಚಿಕ್ಕ ಬಾಣಾವರ ಮತ್ತು ಮಾಲೂರಿನಿಂದ ಇಂದು ಮತ್ತೊಂದಿಷ್ಟು ವಲಸೆ ಕಾರ್ಮಿಕರನ್ನ ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಕೈಯಲ್ಲಿ ಮಗು ಹೊತ್ತು ಊರ ದಾರಿ ಹಿಡಿದಿದ್ದ ತಾಯಿ- ಮಗುವಿನ ಆರೋಗ್ಯವನ್ನ ಕೊರೊನಾ ವಾರಿಯರ್ಸ್ ವಿಚಾರಿಸಿದರು.
ಇಂದು ಮೂರು ಶ್ರಮಿಕ್ ರೈಲು ಚಿಕ್ಕ ಬಾಣಾವರದಿಂದ ಜಮ್ಮು-ಕಾಶ್ಮೀರದ ಉದಾಂಪುರ್ಗೆ ಹಾಗೂ ಮಾಲೂರಿನಿಂದ ವೆಸ್ಟ್ ಬೆಂಗಾಲ್ನ ಬಂಕೂರ್ಗೆ ಹೊರಡಿತು. ಮತ್ತೊಂದು ಮಧ್ಯಪ್ರದೇಶದ ಗ್ವಾಲಿಯರ್ಗೆ ತಲುಪಲಿದ್ದು, ಇಂದು ಒಟ್ಟು 3,300 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಇವರಿಗೆ ಆಹಾರದ ಪೂರೈಕೆಯನ್ನು ಮಾಡಲಾಗಿದ್ದು, ಆರೋಗ್ಯ ತಪಾಸಣೆ ಕಾರ್ಯವೂ ಮಾಡಲಾಗಿದೆ.