ಕರ್ನಾಟಕ

karnataka

By

Published : May 22, 2020, 5:28 PM IST

ETV Bharat / state

ಲಾಕ್​ಡೌನ್ ಅಬ್ಬರಕ್ಕೆ ತತ್ತರಿಸಿದ ಕಲ್ಯಾಣ ಮಂಟಪ: ಶಾಮಿಯಾನ, ಧ್ವನಿ, ಬೆಳಕಿನವರ ಬಾಳಲ್ಲಿ ಕತ್ತಲು

ಮದುವೆ, ರಾಜಕೀಯ ಸಭೆ - ಸಮಾರಂಭ, ಗ್ರಾಮ ಪಂಚಾಯಿತಿ ಚುನಾವಣೆ ಸೇರಿದಂತೆ ಬೇಸಿಗೆಯಲ್ಲಿ ಸಾಲು ಸಾಲು ಕಾರ್ಯಕ್ರಮಗಳು ನಡೆಯಬೇಕಿತ್ತು. ಆದರೆ, ಲಾಕ್‌ಡೌನ್‌ ಇದಕ್ಕೆಲ್ಲ ಕಡಿವಾಣ ಹಾಕಿದೆ. ಹಾಗಾಗಿ ಕಲ್ಯಾಣ ಮಂಟಪಗಳು, ಶಾಮಿಯಾನ ಅಂಗಡಿಗಳು, ಡೆಕೋರೇಷನ್ ಶಾಪ್, ಧ್ವನಿ-ಬೆಳಕು ಅಂಗಡಿ ಮಾಲೀಕರು ಪರದಾಡುವಂತಾಗಿದೆ.

lackdown-effect
ಲಾಕ್​ಡೌನ್ ಪರಿಣಾಮ

ಬೆಂಗಳೂರು :ಲಾಕ್​ಡೌನ್​ನಿಂದಾಗಿ ಕಲ್ಯಾಣ ಮಂಟಪ, ಶಾಮಿಯಾನ ಅಂಗಡಿಗಳು, ಡೆಕೋರೇಷನ್ ಶಾಪ್, ಧ್ವನಿ-ಬೆಳಕು ಅಂಗಡಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮದುವೆ, ರಾಜಕೀಯ ಸಭೆ-ಸಮಾರಂಭ, ಗ್ರಾಮ ಪಂಚಾಯಿತಿ ಚುನಾವಣೆ ಸೇರಿದಂತೆ ಬೇಸಿಗೆಯಲ್ಲಿ ಸಾಲು ಸಾಲು ಕಾರ್ಯಕ್ರಮಗಳು ನಡೆಯಬೇಕಿತ್ತು. ಆದರೆ, ಲಾಕ್‌ಡೌನ್‌ ಇದಕ್ಕೆಲ್ಲ ಕಡಿವಾಣ ಹಾಕಿದೆ. ಹಾಗಾಗಿ ಕಲ್ಯಾಣ ಮಂಟಪಗಳು, ಶಾಮಿಯಾನ ಅಂಗಡಿಗಳು, ಡೆಕೋರೇಷನ್ ಶಾಪ್, ಧ್ವನಿ-ಬೆಳಕು ಅಂಗಡಿ ಮಾಲೀಕರು ಪರದಾಡುವಂತಾಗಿದೆ.

ಲಾಕ್​ಡೌನ್ ಪರಿಣಾಮ

ನಗರದಲ್ಲಿ 100ಕ್ಕೂ ಹೆಚ್ಚು ಶಾಮಿಯಾನ, ಡೆಕೋರೇಷನ್, ಧ್ವನಿ-ಬೆಳಕು ಅಂಗಡಿಗಳಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು 60 ರಿಂದ 70 ಮಳಿಗೆಗಳಿವೆ. ಒಂದೊಂದು ಊರಿನಲ್ಲಿ ಎರಡೆರಡು ಅಂಗಡಿಗಳಿವೆ. ‍ಪ್ರತಿ ಬೇಸಿಗೆಯಲ್ಲಿ 5 ರಿಂದ 6 ಲಕ್ಷ ಸಂಪಾದಿಸುತ್ತಿದ್ದವರೀಗ ಕೆಲಸವಿಲ್ಲದೇ ಅತಂತ್ರ ಸ್ಥಿತಿಗೆ ತಲುಪಿಸಿದ್ದಾರೆ.

ಕೋಟ್ಯಂತರ ರೂ. ಖರ್ಚು ಮಾಡಿ ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಿ ಈಗ ಮದುವೆ ನಡೆಯದೇ ನಷ್ಟ ಅನುಭವಿಸುವಂತೆ ಆಗಿದೆ. ಅದೇ ರೀತಿ ಶಾಮಿಯಾನ ಅಂಗಡಿಗಳನ್ನು 2 ರಿಂದ 3 ಲಕ್ಷ ಬಂಡವಾಳ ಹಾಕಿ ಒಂದು ಅಂಗಡಿ ತೆಗೆಯಲಾಗುತ್ತದೆ. ಆದರೆ, ಕೊರೊನಾ ಪರಿಣಾಮದಿಂದ ಅಂಗಡಿಗಳು ಮುಚ್ಚಿರುವುದರಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮುಂದೇನು ಮಾಡಬೇಕು ಎನ್ನುವುದು ತೋಚುತ್ತಿಲ್ಲ, ಕೆಲಸಗಾರರಿಗೆ ಸಂಬಳ ಕೊಡಲು ಪರದಾಟಬೇಕಾಗಿದೆ ಎಂದು ಅಂಗಡಿ ಮಾಲಿಕರು ಅಳಲು ತೋಡಿಕೊಂಡಿದ್ದಾರೆ.

ನಾವು ಸಿದ್ದಪಡಿಸಿದ ವೇದಿಕೆಯಲ್ಲಿ ಉದ್ದುದ್ದ ಭಾಷಣ ಮಾಡುವ ರಾಜಕಾರಣಿಗಳು, ಸರ್ಕಾರದ ಮನವೊಲಿಸಿ ನಮಗೆ ನೆರವು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ABOUT THE AUTHOR

...view details