ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೊರಡುವ ವಲಸೆ ಕಾರ್ಮಿಕರಿಗೆ 500 ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ಜನಪ್ರತಿನಿಧಿಗಳು ಆಗಮಿಸಿ, ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದ್ದಾರೆ.
ಬಸ್ಗಳು ನಗರದ ಮೆಜೆಸ್ಟಿಕ್‌ನಿಂದ ಹೊರಡಲಿವೆ. ಕೋವಿಡ್-19 ಆತಂಕದ ಹಿನ್ನೆಲೆ ಜನರು ಗುಂಪು ಸೇರದಂತೆ ನೂಕನುಗ್ಗಲಾಗದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ. ಎರಡು ತಿಂಗಳಿಂದ ಕೆಲಸವಿಲ್ಲದೆ ಪರದಾಟ ನಡೆಸುತ್ತಿದ್ದ ಕಾರ್ಮಿಕರಿಗೆ ಕೊನೆಗೂ ಊರುಗಳಿಗೆ ತೆರಳಲು ಅವಕಾಶ ಸಿಕ್ಕಿದೆ. ಊರಿಗೆ ಹೋಗಲು ಸಿದ್ದರಾಗಿರುವ ಜನರು ನೂಕುನುಗ್ಗಲು ಮಾಡದೆ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದಾರೆ. ಪೊಲೀಸರ ಜೊತೆ ಬಿಎಂಟಿಸಿ, ಕೆಎಸ್ಆರ್ಟಿಸಿ ಭದ್ರತಾ ಸಿಬ್ಬಂದಿ, ಸಿವಿಲ್ ಡಿಫೆನ್ಸ್, ಕೊರೊನಾ ವಾರಿಯರ್ಸ್‌ಗಳಿಂದ ಪ್ರಯಾಣಿಕರಿಗೆ ಭದ್ರತೆ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ.
ಕೆಎಸ್ಆರ್ಟಿಸಿ ಬಸ್ ಸ್ಟಾಂಡ್‌ಗೆ ಸಚಿವರು, ಸಂಸದರ ಭೇಟಿ :ಸಂಸದ ಪಿ ಸಿ ಮೋಹನ್, ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಸಚಿವ ಸುರೇಶ್‌ಕುಮಾರ್, ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್ ಭೇಟಿ ನೀಡಿ ಪ್ರಯಾಣಿಕರನ್ನು ಮಾತನಾಡಿಸಿ, ಬಸ್ಗಳ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿದರು.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಯಿತು. ಎಲ್ಲಾ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಹಸಿರು ವಲಯದಲ್ಲಿ ಮಾತ್ರ ಬಸ್‌ಗಳನ್ನ ಬಿಡಲಾಗ್ತಿದೆ ಮಾಡಲಾಗುತ್ತಿದೆ.
ಬಸ್ ಪ್ರಯಾಣದ ಮಾಹಿತಿ : ಮೆಜೆಸ್ಟಿಕ್ನ ಬಿಎಂಟಿಸಿ ನಿಲ್ದಾಣದಿಂದ- ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಯಾದಗಿರಿ.
ಕೆಎಸ್ಆರ್ಟಿಸಿ ( ಮೆಜೆಸ್ಟಿಕ್) ಬಸ್ ನಿಲ್ದಾಣ ಟರ್ಮಿನಲ್ -1 ರಿಂದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಗಳೂರು, ಮಡಿಕೇರಿ,ಉಡುಪಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ. ಈ ಮಾರ್ಗಗಳಲ್ಲಿ ಪ್ರಯಾಣ ಬೆಳೆಸಲಿವೆ.