ಕರ್ನಾಟಕ

karnataka

ETV Bharat / state

ಮಳೆಯಿಂದ ಹಾನಿಗೀಡಾಗಿರುವ ಮೈಸೂರು, ಮಡಿಕೇರಿ ಜಿಲ್ಲೆಗೆ ಇಂದು, ನಾಳೆ ಡಿಕೆಶಿ ಭೇಟಿ

ನಾನು ಕೂಡಲೇ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ. ಕಾರ್ಯಕರ್ತರು ಈಗಲೇ ಈ ವಿಚಾರದಲ್ಲಿ ಜಾಗೃತರಾಗಿ. ನೀವೆಲ್ಲಾ ಸಜ್ಜಾಗಿ ಜನರ ನೆರವಿಗೆ ಮುಂದಾಗಬೇಕು. ಸದ್ಯದಲ್ಲೇ ನಾನು ಕೊಡಗಿಗೆ ಭೇಟಿ ನೀಡುವ ಕಾರ್ಯ ಹಮ್ಮಿಕೊಳ್ಳುತ್ತೇನೆ.

KPCC President D.K. Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

By

Published : Aug 8, 2020, 12:34 PM IST

Updated : Aug 8, 2020, 1:00 PM IST

ಬೆಂಗಳೂರು :ಮಳೆಯಿಂದ ಹಾನಿಗೀಡಾಗಿರುವ ಮೈಸೂರು ಹಾಗೂ ಮಡಿಕೇರಿ ಜಿಲ್ಲೆಯ ವಿವಿಧ ಭಾಗಗಳಿಗೆ ಇಂದು ಮತ್ತು ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ಮಳೆಯಿಂದ ಹಾನಿಗೀಡಾಗಿರುವ ಮೈಸೂರು, ಮಡಿಕೇರಿ ಜಿಲ್ಲೆಗೆ ಇಂದು, ನಾಳೆ ಡಿಕೆಶಿ ಭೇಟಿ

ಇಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಿಂದ ಹೊರಟು ಮೈಸೂರು ತಲುಪುವ ಡಿಕೆಶಿ ಸಂಜೆ 3.30ಕ್ಕೆ ಹುಣಸೂರಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಅಧಿಕಾರಿಗಳ ಜೊತೆ ಸಮಾಲೋಚಿಸಲಿದ್ದಾರೆ. ಸಂಜೆ 7 ಗಂಟೆಗೆ ಮಡಿಕೇರಿಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡುವ ಅವರು ಭಾನುವಾರ ಬೆಳಗ್ಗೆ 11 ಗಂಟೆಗೆ ಬಾಗಮಂಡಲದಲ್ಲಿ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅಧಿಕಾರಿಗಳೊಂದಿಗೆ ವಸ್ತುಸ್ಥಿತಿಯ ವಿವರ ಪಡೆದು ಸಭೆ ನಡೆಸಿ ಚರ್ಚಿಸಲಿದ್ದಾರೆ.

ಮಳೆಯಿಂದ ಹಾನಿಗೀಡಾಗಿರುವ ಮೈಸೂರು, ಮಡಿಕೇರಿ ಜಿಲ್ಲೆಗೆ ಇಂದು, ನಾಳೆ ಡಿಕೆಶಿ ಭೇಟಿ

ಸಂಜೆ ಅಲ್ಲಿಂದ ಹೊರಟು 7.30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲಿ ಕಂಡ ಸ್ಥಿತಿ ಗತಿ ಹಾಗೂ ಜನರ ಪರಿಸ್ಥಿತಿ ಕುರಿತು ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡುವ ಸಾಧ್ಯತೆ ಇದೆ. ಕೊರೊನಾ ಅಟ್ಟಹಾಸದ ನಡುವೆಯೂ ರಾಜ್ಯಾದ್ಯಂತ ನಿರಂತರ ಪ್ರವಾಸ ಮಾಡುತ್ತಲೇ ಇರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಳೆಯಿಂದಾಗಿ ತೊಂದರೆಗೀಡಾಗಿರುವ ಮಡಿಕೇರಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಮಳೆಯಿಂದಾಗಿ ಹಲವು ಜಿಲ್ಲೆಗಳು ತೊಂದರೆಗೆ ಸಿಲುಕಿವೆ. ಜನ, ಜಾನುವಾರುಗಳು ಪ್ರಾಣ ಕಳೆದುಕೊಂಡಾಗಿದೆ. ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ. ಮಲೆನಾಡು ಭಾಗದಲ್ಲಿ ವಿಪರೀತ ಮಳೆಯಾಗುತ್ತಿದೆ. ಕೊಡಗು, ಮಡಿಕೇರಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಬ್ರಹ್ಮಗಿರಿ ಬೆಟ್ಟದ ಮಣ್ಣು ಕುಸಿತವಾಗಿದೆ. ಅರ್ಚಕರ ಕುಟುಂಬ ಕಣ್ಮರೆಯಾಗಿದೆ. ಸಾಕಷ್ಟು ಆತಂಕ ಉಂಟಾಗಿದ್ದು, ಈ ಪ್ರದೇಶಕ್ಕೆ ಭೇಟಿ ನೀಡುವುದಾಗಿ ತಿಳಿದಿರುವ ಡಿಕೆಶಿ, ಪಕ್ಷದ ಕಾರ್ಯಕರ್ತರಿಗೆ ಕೂಡಲೇ ಇಲ್ಲಿನ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿ ಎಂದು ಕರೆ ಕೊಟ್ಟಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ಮಲೆನಾಡಿನ ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದ್ದನ್ನು ನೋಡುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ನಾವು ನೊಂದ ಜನರ ಸಹಾಯಕ್ಕೆ ಮುಂದಾಗಬೇಕಾಗಿದೆ. ಸಾಕಷ್ಟು ಕಡೆ ಹಾನಿಯಾಗಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಜನರ ಸಹಾಯಕ್ಕೆ, ನೆರವಿಗೆ ಮುಂದಾಗಬೇಕೆಂದು ಕೋರುತ್ತೇನೆ ಎಂದಿದ್ದಾರೆ.

ಭೇಟಿ ಕಾರ್ಯಕ್ರಮ : ನಾನು ಕೂಡಲೇ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ. ಕಾರ್ಯಕರ್ತರು ಈಗಲೇ ಈ ವಿಚಾರದಲ್ಲಿ ಜಾಗೃತರಾಗಿ. ನೀವೆಲ್ಲಾ ಸಜ್ಜಾಗಿ ಜನರ ನೆರವಿಗೆ ಮುಂದಾಗಬೇಕು. ಸದ್ಯದಲ್ಲೇ ನಾನು ಕೊಡಗಿಗೆ ಭೇಟಿ ನೀಡುವ ಕಾರ್ಯ ಹಮ್ಮಿಕೊಳ್ಳುತ್ತೇನೆ ಎಂದಿದ್ದಾರೆ.

ಕಳೆದ ಮೂರ್ನಾಲ್ಕು ದಿನದಿಂದ ನಿರಂತರವಾಗಿ ವಿವಿಧ ಜಿಲ್ಲಾ ಪ್ರವಾಸದಲ್ಲಿರುವ ಶಿವಕುಮಾರ್ ಪಕ್ಷದ ಜಿಲ್ಲಾ ಕಚೇರಿಗೆ ತೆರಳಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಹಾಗೂ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವ ಕಾರ್ಯ ಮಾಡುತ್ತಿದ್ದರು. ಇದೀಗ ನೆರೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

Last Updated : Aug 8, 2020, 1:00 PM IST

ABOUT THE AUTHOR

...view details