ಬೆಂಗಳೂರು : ಯಾರೋ ಮೆಂಟಲ್ ಗಿರಾಕಿಗಳಿಗೆ ಉತ್ತರ ಕೊಡಲು ನಾನು ತಯಾರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿರುವುದು.. ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಪಾರ್ಟಿ ವಿಚಾರಕ್ಕೆ ಅವರೇನು ಟ್ವೀಟ್ ಮಾಡೋದು?. ಮೊದಲು ಅವರ ಪಾರ್ಟಿಯಲ್ಲಿ ಇರೋ ಹೆಗ್ಗಣ ಕಿತ್ತು ಬಿಸಾಕಲಿ. ನಮ್ಮ ಪಾರ್ಟಿಯನ್ನು ಹೆಂಗ್ ಮಾಡಬೇಕು ಅಂತಾ ನಮಗೆ ಗೊತ್ತು.
ನಿನ್ನೆ ಪುನೀತ್ ರಾಜ್‍ಕುಮಾರ್ ಕಾರ್ಯಕ್ರಮ ಇತ್ತು. ಅದಕ್ಕಾಗಿ ಸಿದ್ದರಾಮಯ್ಯನವರು ಚಿಕ್ಕ ಭಾಷಣ ಮಾಡಿ ಹೋದರು ಎಂದು ಬಿಜೆಪಿ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯಿಸಿದರು.
ಸಿಎಂ ಮಾತನಾಡುವಂತೆ ಕೇಳಲಿ, ಆಗ ಪ್ರತಿಕ್ರಿಯೆ ನೀಡುತ್ತೇನೆ. ಹೌದು, ನಾನು ನಿನ್ನೆ ಗರಂ ಆಗಿದ್ದೆ. ಒಂದೊಂದು ಸಮಯದಲ್ಲಿ ಸಾಫ್ಟ್ ಆಗಿರುತ್ತೇನೆ. ಒಂದೊಂದು ಸಲ ಗರಂ ಆಗಿರುತ್ತೇನೆ. ಇದು ನನ್ನ ಸ್ವಭಾವ. ನಾನು ಬೈದ್ರೂ ಪ್ರೀತಿಯಿಂದ ಅವರು ನೋಡ್ತಾರೆ. ಅವರು ನಮ್ಮ ಮನೆಯ ಮಕ್ಕಳು.
ಜಮೀರ್ ಅಹ್ಮದ್ ಖಾನ್ ದೆಹಲಿಗೆ ಹೋಗಿದ್ದಾರೆ. ಅದಕ್ಕೆ ಕಾರ್ಯಕ್ರಮಕ್ಕೆ ಬಂದಿಲ್ಲ. ಪ್ರತಿಯೊಬ್ಬರಿಗೂ ಬೆಂಬಲಿಗರು ಇರ್ತಾರೆ ಎಂದು ಸಮಜಾಯಿಷಿ ಕೊಟ್ಟರು.