ಬೆಂಗಳೂರು : ಸರ್ಕಾರ ಕೇವಲ ಪ್ರಚಾರ ಪ್ರಿಯ. ಅಧಿಕಾರಿಗಳು, ಮಂತ್ರಿಗಳನ್ನು ಎಲ್ಲೂ ಕಳಿಸಿಲ್ಲ. ಆಕ್ಸಿಜನ್ ಕೂಡ ಕೊಡಲು ಸಾಧ್ಯವಿಲ್ಲ ಅಂದರೆ ಏನು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವರಿಗೆ ಇಂತಿತ ಆಸ್ಪತ್ರೆ, ಅಧಿಕಾರಿಗಳು ಇಂತಿಥವರು ಅಂತ ಹೇಳ್ತಾರೆ. ಆದರೆ, ಯಾರೂ ಕರೆ ಮಾಡುತ್ತಿಲ್ಲ. ಆಕ್ಸಿಜನ್ ವಿಚಾರದಲ್ಲೂ ಸರಿಯಾಗಿ ಏನು ಮಾಡ್ತಾ ಇಲ್ಲ.
ಹೀಗಾಗಿ, ನಮ್ಮ ಶಾಸಕರು ಸಿಎಂ ಭೇಟಿಯಾಗಲು ನಿರ್ಧರಿಸಿದ್ದೇವೆ. ನಮ್ಮ ಮರ್ಯಾದೆ ಹೋದರು ಕೂಡ ಪರವಾಗಿಲ್ಲ. ಸಿಎಂ ಭೇಟಿಯಾಗಿ ವಾಸ್ತವ ಕೇಳುತ್ತೇವೆ ಎಂದರು.
ತಜ್ಞರು ಅಂತ ಇದಾರಲ್ಲ ಅವರ ಬಗ್ಗೆ ಕೂಡ ನಂಬಿಕೆ ಕಳೆದುಕೊಂಡಿದ್ದಾರೆ. ಭೂಮಿಯಲ್ಲಿ ಹುಟ್ಟಿದ ತಕ್ಷಣ ಗಾಳಿ ಕೇಳ್ತಾರೆ. ಅಂತದ್ದನ್ನೇ ಸರ್ಕಾರದಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಯನ್ನು ನಾನೇ ಭೇಟಿಯಾಗ್ತಿನಿ.
ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಆದ 24 ಜನರ ಸಾವಿಗೆ ಯಾರು ಜವಾಬ್ದಾರಿ? ಇದಕ್ಕೆ ಯಾರು ಹೊಣೆ ? ಮಾಧ್ಯಮದವರು ಸತ್ಯ ಹೇಳಿದ್ರೆ ತಪ್ಪಾ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.