ಕರ್ನಾಟಕ

karnataka

ETV Bharat / state

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪ್ರಹಸನ: ಬೆಡ್ ಹಂಚಿಕೆಗೆ ಇನ್ನೂ ಮುಗಿದಿಲ್ಲ ಸರ್ಕಸ್ - private hospital

ಖಾಸಗಿ ಆಸ್ಪತ್ರೆಗಳ ಬೆಡ್​ ಹಂಚಿಕೆಯಲ್ಲಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ಮಾತುಕತೆಯ ಪ್ರಹಸನ ಇನ್ನೂ ನಡೆಯುತ್ತಿದೆ. ಸರ್ಕಾರ ಎಚ್ಚರಿಕೆ ನೀಡುತ್ತಿದ್ದರೂ, ಖಾಸಗಿ ಆಸ್ಪತ್ರೆಗಳು ಮಾತ್ರ ಕೇರ್​ ಮಾಡುತ್ತಿಲ್ಲ.

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪ್ರಹಸನ
ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪ್ರಹಸನ

By

Published : Jul 22, 2020, 10:44 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದರೂ ಖಾಸಗಿ ಆಸ್ಪತ್ರೆಗಳ ಬೆಡ್​ ಹಂಚಿಕೆಯಲ್ಲಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಮಾತುಕತೆಯ ಪ್ರಹಸನ ನಡೆಯುತ್ತಿದೆ. ಒಂದೆಡೆ ಸರ್ಕಾರ ಎಚ್ಚರಿಕೆ ನೀಡುತ್ತಿದ್ದರೂ ಖಾಸಗಿ ಆಸ್ಪತ್ರೆಗಳು ಕೇರ್ ಮಾಡುತ್ತಿಲ್ಲ. ಇದಕ್ಕೆ ಸೌಲಭ್ಯಗಳ ಕೊರತೆ ಮುಖ್ಯ ಕಾರಣವಾಗಿದೆ.

ರಾಜ್ಯದ 516 ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಶೇ.50ರಷ್ಟು ಬೆಡ್​ಗಳನ್ನು ಸರ್ಕಾರದ ಸುಪರ್ದಿಗೆ ನೀಡಬೇಕು ಎನ್ನುವ ಷರತ್ತು ವಿಧಿಸಿದೆ. ಈ ಷರತ್ತು ಖಾಸಗಿ ಆಸ್ಪತ್ರೆ ಪಾಲಿಗೆ ದುಬಾರಿಯಾಗಿರುವುದರಿಂದ ಸಾಕಷ್ಟು ಆಸ್ಪತ್ರೆಗಳು ಸರ್ಕಾರಕ್ಕೆ ಬೆಡ್ ನೀಡಲು ಹಿಂದೇಟು ಹಾಕುತ್ತಿವೆ.

ಕೊರೊನಾ ರೋಗಿಗಳಿಗೆ ವಿಶೇಷ ವಾರ್ಡ್ ಸಿದ್ದಪಡಿಸಬೇಕು, ವಿಶೇಷ ಆರೈಕೆ ಮಾಡಬೇಕು, ಐಸಿಯು, ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು, ಪಿಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡುವುದು, ಶುಶ್ರೂಷೆ ಮಾಡಬೇಕಿರುವ ಕಾರಣ ವೆಚ್ಚ ಹೆಚ್ಚಾಗಲಿದೆ. ಜೊತೆಗೆ ಇದಕ್ಕೆ ವಿಶೇಷ ತರಬೇತಿಯೂ ಅಗತ್ಯವಿದೆ. ಚಿಕಿತ್ಸೆ ನೀಡುವವರಿಗೆ, ಆರೈಕೆ ಮಾಡುವವರಿಗೂ ಸೋಂಕು ತಗುಲುವ ಸಾಧ್ಯತೆ ಇದ್ದು, ಆಸ್ಪತ್ರೆ ಸೀಲ್ ಡೌನ್, ಸಿಬ್ಬಂದಿ ಕ್ವಾರಂಟೈನ್ ಸ್ಥಿತಿಯನ್ನು ಎದುರಿಸಬೇಕಿದೆ.ಇದಕ್ಕೆಲ್ಲಾ ಹೆಚ್ಚಿನ ವೆಚ್ಚವಾಗುವ ಕಾರಣಕ್ಕೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿ ಸರ್ಕಾರಕ್ಕೂ ಬೆಡ್ ಕೊಡಬೇಕು ಎಂದರೆ ಕಷ್ಟವಾಗಲಿದೆ ಎನ್ನುವ ಅಭಿಪ್ರಾಯ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯದ್ದಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪ್ರಹಸನ

ಆದರೆ, ಸರ್ಕಾರ ಇದಕ್ಕೆಲ್ಲಾ ಕೇರ್ ಮಾಡದೇ ಕಟ್ಟುನಿಟ್ಟಿನ ಸೂಚನೆ ನೀಡಿ ಶೇ.50 ರಷ್ಟು ಬೆಡ್​ಗಳನ್ನು ಸರ್ಕಾರಕ್ಕೆ ನೀಡುವಂತೆ ತಾಕೀತು ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಆರ್. ಅಶೋಕ್ ಅಗತ್ಯ ಸಿಬ್ಬಂದಿ ಇಲ್ಲ, ಸ್ವಚ್ಛತಾ ಸಿಬ್ಬಂದಿ ಇಲ್ಲ ಅದು ಇದು ಎಂದು ಖಾಸಗಿ ಆಸ್ಪತ್ರೆಗಳು ಸಬೂಬು ಹೇಳುತ್ತಿವೆ. ಆದರೆ ಯಾವ ಕೊರೊನಾ ರೋಗಿಯೂ ಬೆಡ್ ಸಿಗದೇ ಇರಬಾರದು ಎನ್ನುವ ನಿಲುವು ನಮ್ಮದು. ಅದರಲ್ಲಿಯೂ ಐಸಿಯು ಬೆಡ್ ಮತ್ತು ವೆಂಟಿಲೇಟರ್ ಬೆಡ್ ಬಹಳ ಮುಖ್ಯ. ಆರಂಭದಲ್ಲಿ ಬೆಂಗಳೂರಿನಲ್ಲಿ 2500 ಬೆಡ್ ಸರ್ಕಾರಕ್ಕೆ ಕೊಡಬೇಕು ಅಂತಾ ಹೇಳಿದ್ದೆವು. ಒಂದೇ ದಿನದಲ್ಲಿ 750 ಬೆಡ್ ಕೊಡುವುದಾಗಿ ಹೇಳಿದ್ದರು. ಆದರೆ ಅದನ್ನು ನೀಡಿಲ್ಲ. ಹಾಗಾಗಿ ಎಲ್ಲಾ ಖಾಸಗಿ ಆಸ್ಪತ್ರೆಗೆ ಎನ್​ಜಿಒ ನೇಮಕ ಮಾಡಿದ್ದು, ಅವರು ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ ಖಾಲಿ ಇದೆ, ರೋಗಿಗಳು ಎಷ್ಟು ಇದ್ದಾರೆ ಎನ್ನುವ ಮಾಹಿತಿ ನೀಡಲಿದ್ದಾರೆ. ಸರ್ಕಾರಕ್ಕೆ ಬೆಡ್ ಕೊಡದೆ ತಪ್ಪಿಸಿಕೊಳ್ಳಲು ಸಾಧ್ಯವಾಗದ ವ್ಯವಸ್ಥೆ ತರುವ ಚರ್ಚೆ ಆಗಿದೆ. ಅದನ್ನು ಕಾರ್ಯರೂಪಕ್ಕೆ‌ ತರುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭ:

ಆದರೆ ತನ್ನ ಪಾಲಿನ ಬೆಡ್​ಗಳಲ್ಲಿ ಅನುಮತಿ ಪಡೆದ 516 ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿವೆ. ಆರಂಭದಲ್ಲಿ ತಮ್ಮದೇ ಆದ ರೀತಿಯಲ್ಲಿ ಚಿಕಿತ್ಸೆಗೆ ದರ ವಿಧಿಸಲಾಗುತ್ತಿತ್ತು. ಆದರೆ ಇದೀಗ ಸರ್ಕಾರ ದರ ಪಟ್ಟಿಯನ್ನು ಪ್ರಕಟಿಸಿದ್ದು, ಆ ಪ್ರಕಾರದಲ್ಲಿ ದರವನ್ನು ವಿಧಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶಿಫಾರಸ್ಸು ಮಾಡಿದ ಸೋಂಕಿತರು ಹಾಗು ನೇರವಾಗಿ ಬರುವ ಸೋಂಕಿತರಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದರ ಪಟ್ಟಿ:

ಸರ್ಕಾರಿ ಆಸ್ಪತ್ರೆಯಿಂದ ಬರುವವರ ಸ್ವಾಬ್ ಟೆಸ್ಟ್ -2,600 ರೂ.

ಜನರಲ್ ವಾರ್ಡ್: 5,200 ರೂ. (ದಿನಕ್ಕೆ)

ಹೆಚ್‌ಡಿಯು: 7,000 ರೂ. (ದಿನಕ್ಕೆ)

ಐಸೊಲೇಷನ್ ಐಸಿಯು ವೆಂಟಿಲೇಟರ್ ಇಲ್ಲದೆ: 8,500 ರೂ. (ದಿನಕ್ಕೆ)

ಐಸೊಲೇಷನ್ ಐಸಿಯು​ ವೆಂಟಿಲೇಟರ್ ಜೊತೆಗೆ: 10,000 ರೂ. (ದಿನಕ್ಕೆ)

ಆರೋಗ್ಯ ಇಲಾಖೆ ಶಿಫಾರಸು ಇಲ್ಲದೆ ನೇರವಾಗಿ ಹೋಗುವವರಿಗೆ:

ಸ್ವಾಬ್ ಟೆಸ್ಟ್ -4,600

ಜನರಲ್ ವಾರ್ಡ್: 10,000 (ದಿನಕ್ಕೆ)

ಹೆಚ್ಡಿಯು: 12,000 (ದಿನಕ್ಕೆ)

ಐಸೊಲೇಷನ್ ಐಸಿಯು ವೆಂಟಿಲೇಟರ್ ಇಲ್ಲದೆ: 15,000 (ದಿನಕ್ಕೆ)

ಐಸೊಲೇಷನ್ ಐಸಿಯು ವೆಂಟಿಲೇಟರ್ ಜೊತೆಗೆ: 25,000 (ದಿನಕ್ಕೆ)

ರಾಜ್ಯದ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಇರುವ ಬೆಡ್ ಸಂಖ್ಯೆ:

ಸರ್ಕಾರಿ ಆಸ್ಪತ್ರೆ 11,295

ಖಾಸಗಿ ಆಸ್ಪತ್ರೆ 3,655

ಕೋವಿಡ್ ಆಸ್ಪತ್ರೆ 5,053 ಬೆಡ್

ಆಕ್ಸಿಜನ್ ಬೆಡ್ ಸಂಖ್ಯೆ 6,580

ಐಸಿಯು ಬೆಡ್ ಸಂಖ್ಯೆ 1,985

ವೆಂಟಿಲೇಟರ್ ಬೆಡ್ 979

ಐಸೊಲೇಷನ್ ಬೆಡ್ ಸಂಖ್ಯೆ 20,003

ಬೆಂಗಳೂರು ನಗರ:

ಸರ್ಕಾರಿ ಆಸ್ಪತ್ರೆ ಬೆಡ್ ಸಂಖ್ಯೆ 965

ಖಾಸಗಿ ಆಸ್ಪತ್ರೆ ಬೆಡ್ ಸಂಖ್ಯೆ 1,219

ಕೋವಿಡ್ ಆಸ್ಪತ್ರೆ 645

ಆಕ್ಸಿಜನ್ ಬೆಡ್ ಸಂಖ್ಯೆ 1,981

ಐಸಿಯು ಬೆಡ್ ಸಂಖ್ಯೆ 289

ವೆಂಟಿಲೇಟರ್ ಬೆಡ್ ಸಂಖ್ಯೆ 254

ಐಸೊಲೇಷನ್ ಬೆಡ್ ಸಂಖ್ಯೆ 2,829

ಇಲ್ಲಿ ಖಾಸಗಿ ಆಸ್ಪತ್ರೆಗೆ ನೇರವಾಗಿ ಹೋಗುವ ಕೊರೊನಾ ಸೋಂಕಿತರಿಗೆ ಬೆಡ್ ಸಿಗುತ್ತಿದೆ. ಅಗತ್ಯ ಚಿಕಿತ್ಸೆ ಕೂಡ ಲಭಿಸುತ್ತಿದೆ. ಆದರೆ ಸರ್ಕಾರ ಶಿಫಾರಸು ಮಾಡಿದ ವ್ಯಕ್ತಿಗೆ ಬೆಡ್ ಇಲ್ಲ ಎನ್ನಲಾಗುತ್ತಿದೆ. ಸಿಬ್ಬಂದಿ ಕೊರತೆ, ವೆಂಟಿಲೇಟರ್, ಸಮಸ್ಯೆ ಸಬೂಬು ಹೇಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಈ ಧೋರಣೆಗೆ ಸರ್ಕಾರದ ಸಿಬ್ಬಂದಿ ಕಳಿಸಿಕೊಡುವ ಭರವಸೆ ನೀಡಿದೆ. ವೆಂಟಿಲೇಟರ್ ಕೊಡುವ ಆಶ್ವಾಸನೆ ನೀಡಿ ಖಾಸಗಿ ಆಸ್ಪತ್ರೆಗಳನ್ನು ಒಪ್ಪಿಸುವ ಕೆಲಸ ನಡೆದಿದೆ.

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ಹೋಗುವ ಕೊರೊನಾ ಸೋಂಕಿತರಿಗೆ ಬೆಡ್ ಸೇರಿದಂತೆ ಅಗತ್ಯ ಚಿಕಿತ್ಸೆ ಲಭಿಸುತ್ತಿದ್ದು, ಸರ್ಕಾರದಿಂದ ಶಿಫಾರಸು ಮಾಡಲ್ಪಟ್ಟ ಸೋಂಕಿತರಿಗೆ ಮಾತ್ರ ಸಮಸ್ಯೆಯಾಗುತ್ತಿದೆ.

ABOUT THE AUTHOR

...view details