ಕರ್ನಾಟಕ

karnataka

ETV Bharat / state

ಕಾಂಗ್ರೆಸ್‌, ಜೆಡಿಎಸ್‌ ಅಂತೇನಿಲ್ಲ, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೀನಿ.. ಹೆಚ್ ಡಿ ರೇವಣ್ಣ

ಕೆಎಂಎಫ್‌ನ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಿದ ಬಗ್ಗೆ ಗೊತ್ತಿಲ್ಲ. ನಾನು ಇಂದು ಬೆಳಗ್ಗೆ 9:45 ನಿಮಿಷಕ್ಕೆ ನಾಮಪತ್ರ ಸಲ್ಲಿಸಿದ್ದೇನೆ ಎಂದು ಹೆಚ್ ಡಿ ರೇವಣ್ಣ ಹೇಳಿದರು.

ಎಚ್ ಡಿ ರೇವಣ್ಣ

By

Published : Jul 29, 2019, 1:51 PM IST

ಬೆಂಗಳೂರು: ರಾಜ್ಯ ಸರ್ಕಾರ ಕೆಎಂಎಫ್‌ನ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಿದ ಬಗ್ಗೆ ನನಗೆ ಗೊತ್ತಿಲ್ಲ. ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿ ಸದ್ಯ ವಿಧಾನ ಸೌಧಕ್ಕೆ ಹೊರಟಿದ್ದೇನೆ ಎಂದು ಜೆಡಿಎಸ್​ ಶಾಸಕ ಹೆಚ್ ಡಿ ರೇವಣ್ಣ ತಿಳಿಸಿದರು.

ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಹೆಚ್ ಡಿ ರೇವಣ್ಣ, ಕೆಎಂಎಫ್‌ನ ಅಧ್ಯಕ್ಷರ ಚುನಾವಣೆ ಮುಂದೂಡಿಕೆ ಬಗ್ಗೆ ಗೊತ್ತಿಲ್ಲ. ನಾನು ಹಾಸನದ ಹಾಲು ಒಕ್ಕೂಟದಲ್ಲಿ ಇಪ್ಪತ್ತೈದು ವರ್ಷದಿಂದ ಸೇವೆ ಸಲ್ಲಿಸಿದ್ದೇನೆ. ಅದಕ್ಕಾಗಿ ಇಂದು ನಾನು ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೇನೆ ಎಂದರು.

ಅಧ್ಯಕ್ಷರ ಚುನಾವಣೆ ಮುಂದೂಡಿಕೆ ಬಗ್ಗೆ ನನಗೆ ಗೊತ್ತಿಲ್ಲ..

ರೇವಣ್ಣ ಅವರು ಕಾಂಗ್ರೆಸ್‌ನ ನಿರ್ದೇಶಕರನ್ನು ಹೈಜಾಕ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಮತ್ತು ಕಾಂಗ್ರೆಸ್ ಬೇರೆ ಬೇರೆ ಅಲ್ಲ. ನಾವು ಮೈತ್ರಿಯಾಗಿ ಕೆಎಂಎಫ್ ಅಧ್ಯಕ್ಷರ ಚುನಾವಣೆಯನ್ನು ಎದುರಿಸುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್‌ನ ಭೀಮಾ ನಾಯ್ಕ ಅವರು ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದು ನನಗೆ ಗೊತ್ತಿಲ್ಲ ಎಂದು ನೇರವಾಗಿ ವಿಧಾನಸೌಧದ ಕಡೆಗೆ ತೆರಳಿದರು.

ABOUT THE AUTHOR

...view details