ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕ ಪ್ರವಾಹದಿಂದ ನಲುಗಿ ಹೋಗಿದೆ. ಜನರು ತಮ್ಮ ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಯದಲ್ಲಿ ನೆರವಿನ ಹಸ್ತಗಳಿಗಾಗಿ ನೆರೆಪೀಡಿತ ಜನರು ಎದುರು ನೋಡುತ್ತಿದ್ದಾರೆ.
ಅಗತ್ಯ ವಸ್ತುಗಳೊಂದಿಗೆ ಉತ್ತರ ಕರ್ನಾಟಕದ ಕಡೆ ಹೊರಟ ಕಿಚ್ಚನ ಅಭಿಮಾನಿಗಳು - Flood effected area
ಉತ್ತರ ಕರ್ನಾಟಕದ ನೆರೆಪೀಡಿತ ಜನರಿಗೆ ಸಹಾಯ ಮಾಡುವ ಸಲುವಾಗಿ ನಟ ಸುದೀಪ್ ಅಭಿಮಾನಿಗಳು ಅಗತ್ಯ ವಸ್ತುಗಳನ್ನು ಟ್ರಕ್ಗಳಲ್ಲಿ ಹೊತ್ತು ನೆರೆಪೀಡಿತ ಪ್ರದೇಶಕ್ಕೆ ಧಾವಿಸಿದ್ದಾರೆ. ಆಗಸ್ಟ್ 9 ರಂದು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ 'ಪೈಲ್ವಾನ್' ಆಡಿಯೋ ಸಮಾರಂಭವನ್ನು ಕೂಡಾ ಸುದೀಪ್ ಮುಂದೂಡಿದ್ದರು.
ನೊಂದ ಜೀವಗಳಿಗೆ ಕರ್ನಾಟಕದಾದ್ಯಂತ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಸೆಲಬ್ರಿಟಿಗಳು ಕೂಡಾ ನೆರೆಪೀಡಿತ ಜನರ ಕಷ್ಟಕ್ಕೆ ಮಿಡಿದಿದ್ದಾರೆ. ತಾವೂ ನೆರೆಪೀಡಿತರಿಗೆ ಸಹಾಯ ಮಾಡುತ್ತಿರುವುದಲ್ಲದೆ, ನೀವೂ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ನೆಚ್ಚಿನ ನಟರ ಮನವಿಗೆ ಸ್ಪಂದಿಸಿರುವ ಅಭಿಮಾನಿಗಳು ನೆರೆ ಸಂತ್ರಸ್ತರ ನೆರವಿಗೆ ಸಹಾಯ ಹಸ್ತ ಚಾಚಿದ್ದಾರೆ. ಸುದೀಪ್ ಅಭಿಮಾನಿಗಳು ಇದೀಗ ಅಗತ್ಯ ವಸ್ತುಗಳೊಂದಿಗೆ ಉತ್ತರ ಕರ್ನಾಟಕದ ಕಡೆ ಧಾವಿಸಿದ್ದಾರೆ. ಆಗಸ್ಟ್ 9 ರಂದು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ 'ಪೈಲ್ವಾನ್' ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಸುದೀಪ್ ಮುಂದೂಡಿದ್ದರು.
ಉತ್ತರ ಕರ್ನಾಟಕದ ಜನರು ನೆರೆಯಿಂದ ಕಷ್ಟಪಡುವಾಗ ಆಡಿಯೋ ಬಿಡುಗಡೆ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದು ಸಂಭ್ರಮ ಪಡುವ ಸಮಯವಲ್ಲ, ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿರುವ ಜನರಿಗೆ ಬೆಂಬಲ ಬೇಕಿದೆ. ಆಡಿಯೋ ಕಾರ್ಯಕ್ರಮ ಮಾಡುವ ಶ್ರಮವನ್ನು ನೆರೆಪೀಡಿತ ಜನರಿಗೆ ಸಹಾಯ ಮಾಡಲು ಬಳಸೋಣ ಎಂದು ಹೇಳಿದ್ದರು. ಅದರಂತೆ ಕಿಚ್ಚನ ಅಭಿಮಾನಿಗಳು ಎರಡು ಟ್ರಕ್ಗಳಲ್ಲಿ ಆಹಾರ ಸಾಮಗ್ರಿಗಳು, ಬಟ್ಟೆ, ಔಷಧಗಳು, ನೀರು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಹೊತ್ತು ಉತ್ತರ ಕರ್ನಾಟಕದ ಕಡೆ ಹೊರಟಿದ್ದಾರೆ.