ಕರ್ನಾಟಕ

karnataka

ETV Bharat / state

ಪಕ್ಷಕ್ಕೆ ಆಪತ್ತಾಗಿದೆ... ಅದನ್ನೇ ನಾನು ಎತ್ತರದ ದನಿಯಲ್ಲಿ ಹೇಳಿದ್ದೀನಿ: ಮುನಿಯಪ್ಪ - ಕಾಂಗ್ರೆಸ್ ಪಕ್ಷ

ನಾನು ಪಕ್ಷಕ್ಕಾಗಿ ಮಾತಾಡಿದ್ದು, ಇರೋ ವಿಚಾರವನ್ನ ನೇರವಾಗಿ ಹೇಳಿದ್ದೇನೆ. ಹಿರಿಯರ ಸಭೆಯನ್ನ ಕರೆಯಬೇಕು ಈ ಬಗ್ಗೆ ಚರ್ಚೆ ಮಾಡಬೇಕು ಅಂತಾ ದಿನೇಶ್​​ ಗುಂಡೂರಾವ್​ಗೆ ಕೇಳಿದ್ದೆ ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.

ಕೆ.ಹೆಚ್.ಮುನಿಯಪ್ಪ, ಮಾಜಿ ಸಂಸದ

By

Published : Sep 26, 2019, 11:37 PM IST

Updated : Sep 27, 2019, 2:16 AM IST

ಬೆಂಗಳೂರು: ನನಗೆ ಪಕ್ಷ ಮುಖ್ಯ, ಪಕ್ಷಕ್ಕೆ ಆಪತ್ತಾಗಿದೆ. ಅದನ್ನೇ ನಾನು ಎತ್ತರದ ದನಿಯಲ್ಲಿ ಹೇಳಿದ್ದೀನಿ ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.

ಕೆ.ಹೆಚ್.ಮುನಿಯಪ್ಪ, ಮಾಜಿ ಸಂಸದ

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವಾಗ್ವಾದ ನಡೆಸಿದ ವಿಚಾರದ ಬಗ್ಗೆ ಮಾತನಾಡಿ, ಸಭೆಯಲ್ಲಿ ರೋಷನ್ ಬೇಗ್​ಗೆ ಒಂದು ರೀತಿ, 14 ಶಾಸಕರಿಗೆ ಮತ್ತೊಂದು ರೀತಿ ಆಗಿದೆ. ಆದರೆ ರಮೇಶಕುಮಾರ್ ಮತ್ತು ಇತರರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಯಾಕೆ ಅನ್ನೋದನ್ನ ಸಿದ್ದರಾಮಯ್ಯಗೆ ಕೇಳಿದೆ. ಕಾಂಗ್ರೆಸ್ ಸೋಲಿಸಿ ಬಿಜೆಪಿ ಗೆಲುವಿಗೆ ಕಾರಣರಾದವರ ವಿರುದ್ಧ ಕ್ರಮ ಏಕಿಲ್ಲ ? ಎಂದು ಕೇಳಿದ್ದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ನಾನು ಪಕ್ಷಕ್ಕಾಗಿ ಮಾತಾಡಿದ್ದು, ಇರೋ ವಿಚಾರವನ್ನ ನೇರವಾಗಿ ಹೇಳಿದ್ದೇನೆ. ಹಿರಿಯರ ಸಭೆಯನ್ನ ಕರೆಯಬೇಕು ಈ ಬಗ್ಗೆ ಚರ್ಚೆ ಮಾಡಬೇಕು ಅಂತಾ ದಿನೇಶ್​ ಗುಂಡೂರಾವ್​ಗೆ ಕೇಳಿದ್ದೆ. ಸಿದ್ದರಾಮಯ್ಯ ಮತ್ತು ದಿನೇಶ್​ ಗುಂಡೂರಾವ್​ಗೆ ಖುದ್ದಾಗಿ ಭೇಟಿ ಮಾಡಿ ರಮೇಶ್​ ಕುಮಾರ್ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಹೇಳಿದ್ದೆ ಎಂದರು.

ಮೂಲ, ವಲಸಿಗ ಅನ್ನೋ ಪ್ರಶ್ನೆ ಇಲ್ಲ. ಪಕ್ಷಕ್ಕೆ ಬಂದು ಸಿಎಂ ಮಾಡಿದ ಮೇಲೆ ಆ ಪ್ರಶ್ನೆ ಬರೋಲ್ಲ. ನಾನು ಇವತ್ತು ಮಾತಾಡಿದ್ದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತರುತ್ತೆ. ಉಪಚುನಾವಣೆಯಲ್ಲಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುವಂತಾಗುತ್ತೆ. ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಸೋಲಿಸಿದರಲ್ಲ. ಅವರ ವಿರುದ್ಧ ಯಾವ ಕ್ರಮ ತೆಗೆದುಕೊಂಡ್ರಿ ? ಪಕ್ಷ ವಿರೋಧಿ, ಪಕ್ಷದ ಅಭ್ಯರ್ಥಿಯನ್ನ ಸೋಲಿಸಿದವರನ್ನ ಪಕ್ಕದಲ್ಲಿ ಕೂರಿಸಿಕೊಂಡು ಓಡಾಡ್ತಿದ್ದೀರಾ ಅಂತಾ ಕೇಳಿದ್ದೀನಿ ಎಂದರು.

ರಮೇಶ್ ಕುಮಾರ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಬಿಜೆಪಿ ಜೊತೆ ಕೈಜೋಡಿಸಿ ನೇರವಾಗಿ ಆ ಪಕ್ಷದ ಮುಖಂಡರಂತೆ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಜವಾಬ್ದಾರಿಯುತ ಸ್ಪೀಕರ್ ಸ್ಥಾನದಲ್ಲಿದ್ದುಕೊಂಡು ಇವರೇ ನಾಯಕತ್ವ ವಹಿಸಿದ್ದರು. ಈ ಬಗ್ಗೆ ದಿನೇಶ್, ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೆ. ಆದರೆ ಯಾವುದೇ ಕ್ರಮಕೈಗೊಳ್ಳಲಿಲ್ಲ. ಪಕ್ಷದ ಕೆಲಸ ಮಾಡಲು ಆಗದೇ ಇದ್ದಲ್ಲಿ ರಾಜೀನಾಮೆ ನೀಡಿ ಅಂತಾ ಹೇಳಬೇಕಿತ್ತು. ಪಕ್ಷದ ನಾಯಕರು ಯಾಕೆ ಹಾಗೆ ಹೇಳಲಿಲ್ಲ. ಅದೇ ಕಾರಣಕ್ಕೆ ಇಂದು ಸಭೆಯಲ್ಲಿ ಖಾರವಾಗಿಯೇ ಕೇಳಿದೆ. ಜೋರಾಗಿ ಏನು ಕೇಳಲಿಲ್ಲ, ಕೇಳಬೇಕಾದನ್ನ ಗಟ್ಟಿಯಾಗಿ ಕೇಳಿದ್ದೇನೆ ಎಂದರು.

ನಮ್ಮ ಪಕ್ಷದಲ್ಲಿ ಮೂಲ, ವಲಸಿಗ ಎಂಬುದು ಏನಿಲ್ಲ. ಒಂದು ಬಾರಿ ಪಕ್ಷಕ್ಕೆ ಸೇರಿದ ಮೇಲೆ‌ ಎಲ್ಲರೂ ಒಂದೇ. ಹಾಗಿದ್ದಿದ್ದರೆ ಸಿದ್ದರಾಮಯ್ಯರನ್ನ ಪಕ್ಷ ಸಿಎಂ ಆಗಿ ಮಾಡುತ್ತಿರಲಿಲ್ಲ. ಅವರೂ ಕಾಂಗ್ರೆಸ್ ನವರು ಎಂದೇ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಸಿದ್ದರಾಮಯ್ಯ ನಮ್ಮ ನಾಯಕರು. ಅವರನ್ನ ಏಕವಚನದಲ್ಲಿ ಕೇಳಲು ಸಾಧ್ಯವೇ ? ಎಂದರು.

ನನಗೆ ಮೊದಲೇ ಅನುಮಾನವಿತ್ತು:
ಉಪ ಚುನಾವಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಮಾತನಾಡಿ, ಶಾಸಕರ ಅನರ್ಹತೆಯ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿರುವ ಸಂದರ್ಭ ಈ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿದ ಚುನಾವಣಾ ಆಯೋಗದ ನಿರ್ಧಾರ ಅಚ್ಚರಿ ತರಿಸಿತ್ತು. ನಾನು ಕೂಡ ಕೆಲ ಸಮಯ ವಕೀಲನಾಗಿ ಕಾರ್ಯ ನಿರ್ವಹಿಸಿದ್ದರಿಂದ ಈ ರೀತಿ ತೀರ್ಮಾನ ಅಚ್ಚರಿ ತರಿಸಿತ್ತು.

ಸುಪ್ರೀಂಕೋರ್ಟ್ ತೀರ್ಪನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಲೇಬೇಕು. ಚುನಾವಣಾ ಆಯೋಗ ಒಂದು ಪ್ರತ್ಯೇಕ ಸಂಸ್ಥೆಯಾಗಿದ್ದರು ಸುಪ್ರೀಂಕೋರ್ಟ್​ನಲ್ಲಿ ತನಿಖೆ ನಡೆಯುತ್ತಿರುವ ಸಂದರ್ಭ ಮನ್ನಣೆ ನೀಡಬೇಕಾಗುತ್ತದೆ. ಇಂತಾ ಸಂದರ್ಭ ತೀರ್ಮಾನ ಕೈಗೊಳ್ಳುವಾಗ ಸ್ವಲ್ಪ ಯೋಚಿಸಬೇಕಾಗುತ್ತದೆ ಎಂದಿದ್ದಾರೆ.

Last Updated : Sep 27, 2019, 2:16 AM IST

ABOUT THE AUTHOR

...view details