ರಾಜ್ಯದಲ್ಲಿನ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಹ್ವಾನಿಸಲಾದ ಅರ್ಜಿಗಳ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈ ಮೊದಲು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 22 ಆಗಿತ್ತು. ಇದೀಗ ಈ ದಿನಾಂಕವನ್ನು ಜುಲೈ 31ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಕರ್ನಾಟಕ ರಾಜ್ಯದ ಸರ್ಕಾರಿ ಸಂಸ್ಥೆಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಸ್ತರದ ಹುದ್ದೆಗಳ ಭರ್ತಿಗೆ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ- 186, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಯಮ ನಿಯಮಿತ -386, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ -26 ಮತ್ತು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ನಲ್ಲಿ -72 ಹುದ್ದೆ ಸೇರಿದಂತೆ ಖಾಲಿ ಇರುವ ಒಟ್ಟು 607 ಹುದ್ದೆಗಳ ಭರ್ತಿ ನಡೆಯಲಿದೆ.
ಹುದ್ದೆ ವಿವರ:ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಆಪ್ತ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಕಿರಿಯ ಸಹಾಯಕರು, ಹಿರಿಯ ಸಹಾಯಕರು, ಕ್ಷೇತ್ರ ನಿರೀಕ್ಷಿಕ್ಷಕರು, ಜೂನಿಯರ್ ಪ್ರೋಗ್ರಾಂ, ಸಹಾಯಕ ವ್ಯವಸ್ಥಾಪಕರು, ಮೇಲ್ವಿಚಾರಕರು, ಪದವೀಧರ ಗುಮಾಸ್ತರು, ಗುಮಾಸ್ತರು ಸೇರಿದಂತೆ 757 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಶೈಕ್ಷಣಿಕ ಅರ್ಹತೆ, ವೇತನ: ಹಿರಿಯ ಸಹಾಯಕರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಅಭ್ಯರ್ಥಿಗಳು ಪದವಿ ಹೊಂದಿರಬೇಕು. ಕಿರಿಯ ಸಹಾಯಕರ ಹುದ್ದೆಗೆ ಪಿಯುಸಿ ಪೂರ್ಣವಾಗಿರಬೇಕು. ವಿವಿಧ ಶ್ರೇಣಿಗಳ ಹುದ್ದೆಗಳಿಗೆ ಅನುಸಾರವಾಗಿ 11,600 ರೂ.ಯಿಂದ 97,100 ರೂ.ವರೆಗೆ ವೇತನ ನಿಗದಿಸಲಾಗಿದೆ. ಹುದ್ದೆಗೆ ಅನುಸಾರವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಅಭ್ಯರ್ಥಿಗಳು ಪದವಿ ಹೊಂದಿರಬೇಕು.