ಕರ್ನಾಟಕ

karnataka

ETV Bharat / state

ದಾಸರಹಳ್ಳಿ ಮಂಡಲ ಕಚೇರಿಗೆ ಕಟೀಲ್ ಭೇಟಿ...! - ದಾಸರಹಳ್ಳಿ ಮಂಡಲ ಕಚೇರಿಗೆ ಕಟೀಲ್ ಭೇಟಿ

ನಗರದ ದಾಸರಹಳ್ಳಿಯಲ್ಲಿ ಮಂಡಲ ಕಾರ್ಯಾಲಯ ಮತ್ತು ನವೀನ ಗ್ರಂಥಾಲಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು.

Katil visits Dasarahalli Mandala office
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

By

Published : Nov 8, 2020, 11:46 PM IST

ಬೆಂಗಳೂರು: ಪಕ್ಷ ಸಂಘಟನೆ ಜೊತೆ ಜೊತೆಯಲ್ಲಿ ಮಂಡಲ ಕಾರ್ಯಾಲಯ ಮತ್ತು ಗ್ರಂಥಾಲಯಗಳ ಸ್ಥಾಪನೆಗೆ ಪಕ್ಷ ಆದ್ಯತೆ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದ ದಾಸರಹಳ್ಳಿಯಲ್ಲಿ ಮಂಡಲ ಕಾರ್ಯಾಲಯ ಮತ್ತು ನವೀನ ಗ್ರಂಥಾಲಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು. ಮಂಡಲ ಕಚೇರಿಯನ್ನು ವೀಕ್ಷಿಸಿದರು. ಭವನದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಗ್ರಂಥಾಲಯವನ್ನು ವೀಕ್ಷಿಸಿದರು. ಅಚ್ಚುಕಟ್ಟಾದ ನಿರ್ವಹಣೆಗೆ ಹರ್ಷ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಕಟೀಲ್, ಮಂಡಲ ಕಾರ್ಯಾಲಯ, ಗ್ರಂಥಾಲಯ ವ್ಯವಸ್ಥಿತವಾಗಿದ್ದು, ಎಲ್ಲಾ ಕಡೆಯಲ್ಲಿಯೂ ಗ್ರಂಥಾಲಯಕ್ಕೆ ಆದ್ಯತೆ ನೀಡಬೇಕು ಎಂದರು.

ನಂತರ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಜೊತೆಯಲ್ಲಿ ಮಂಡಲ ಕಾರ್ಯಾಲಯ ಸಿಬ್ಬಂದಿ, ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಿದರು.

ABOUT THE AUTHOR

...view details