ಬೆಂಗಳೂರು:ರಷ್ಯಾದಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಮನವಿ ಮಾಡಿದ್ದಾರೆ.
ರಷ್ಯಾದಲ್ಲಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಹೆಸರು ನೋಂದಾಯಿಸಲು ಜಿ.ಸಿ. ಚಂದ್ರಶೇಖರ್ ಕರೆ
ರಷ್ಯಾದಲ್ಲಿ ಸಿಲುಕಿರುವ ಕರ್ನಾಟಕದ 200ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಷ್ಯಾದಲ್ಲಿ ಸಿಲುಕಿರುವ 200ಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳೇ ಚಾರ್ಟೆಡ್ ಫ್ಲೈಟ್ ಹಾಗೂ ವಂದೇ ಭಾರತ್ ಮಿಷನ್ನ ಫ್ಲೈಟ್ಗಳನ್ನೂ ಸಹ ನಿಮ್ಮ ಅನುಕೂಲಕ್ಕೆ ಕಡಿಮೆ ದರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲು ಇಂದು ನಮ್ಮ ಕಚೇರಿಯನ್ನು ಸಂಪರ್ಕಿಸಿ. ಇ-ಮೇಲ್- pa2gcmp@gmail.com, ವಾಟ್ಸ್ಆ್ಯಪ್: +91 73491 89712ಸಂಖ್ಯೆ ನೀಡಿದ್ದಾರೆ.
ನೂರು ವರ್ಷದ ಹಿಂದೆ ಇತ್ತು ಸಮಸ್ಯೆ:ಮತ್ತೊಂದು ಟ್ವೀಟ್ನಲ್ಲಿ ಬೆಂಗಳೂರಿನ ಮುನ್ಸಿಪಲ್ ಕೌನ್ಸಿಲ್ ನೀಡಿದ ನೋಟಿಸ್ ಚಿತ್ರವನ್ನು ಲಗತ್ತಿಸಿರುವ ಅವರು, ಸುಮಾರು 100 ವರ್ಷಗಳ ಹಿಂದೆ ವಿಶ್ವದಾದ್ಯಂತ 5 ಕೋಟಿ ಜನರನ್ನು ಬಲಿ ತೆಗೆದುಕೊಂಡ ಸಾಂಕ್ರಾಮಿಕ ರೋಗ 'ಸ್ಪ್ಯಾನಿಷ್ ಫ್ಲೂ' ತಡೆಗಟ್ಟಲು ಜನಸಂದಣಿ ಇರುವ ನಾಟಕ ಮತ್ತು ಸಿನಿಮಾ ಥಿಯೇಟರ್ಗಳಿಗೆ ಹೋಗಬೇಡಿ ಎಂದು ಅಂದಿನ ಬೆಂಗಳೂರು ನಗರ ಮುನ್ಸಿಪಲ್ ಕೌನ್ಸಿಲ್ ನೀಡಿದ್ದ ನೋಟಿಸ್! ಎಂದು ವಿವರಿಸಿದ್ದಾರೆ.