ಬೆಂಗಳೂರು: ಕೋವಿಡ್-19 ಸೋಂಕು ತಗುಲಿ ಚಿಕಿತ್ಸೆಗೆ ಎಂದು ದಾಖಲಾಗಿರುವ ಪೊಲೀಸರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಿವೃತ ಪೊಲೀಸ್ ಪರ್ಸನಲ್ ಅಸೋಸಿಯೇಷನ್ನಿಂದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗುಲಿ ಚಿಕಿತ್ಸೆಗೆ ಎಂದು ದಾಖಲಾಗಿರುವ, ಪೊಲೀಸರಿಗೆ ಸರಿಯಾದ ಚಿಕಿತ್ಸೆ, ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಇತ್ತೀಚೆಗಷ್ಟೆ ಕೊರೊನಾ ಸೋಂಕಿತ ಪೊಲೀಸರು ತಮ್ಮ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ, ಆಹಾರ ಕಲ್ಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ರಾಜ್ಯ ನಿವೃತ ಪೊಲೀಸ್ ಪರ್ಸನಲ್ ಅಸೋಸಿಯೇಷನ್ ಮನವಿ ಪರಿಸ್ಥಿತಿಯ ಗಂಭೀರತೆ ಅರಿತ ಕರ್ನಾಟಕ ರಾಜ್ಯ ನಿವೃತ ಪೊಲೀಸ್ ಪರ್ಸನಲ್ ಅಸೋಸಿಯೇಷನ್ ಅಧ್ಯಕ್ಷ ಪಿ,ಎಂ ಪೆಮ್ಮಯ್ಯ ಹಾಗೂ ಅವರ ನೇತೃತ್ವದ ತಂಡ ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ನಿಂಬಾಳ್ಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಸರಿಯಾದ ವ್ಯವಸ್ಥೆ ಕಲ್ಪಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ ಪೊಲೀಸರು ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಆಯುಕ್ತರು ಈಗಾಗಲೇ ಈ ಕುರಿತು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೊರೊನಾ ಸೋಂಕಿತ ಪೊಲೀಸರಿಗೆ ಕೂಡಲೇ ಹೆಚ್ಚಿನ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.