ಕರ್ನಾಟಕ

karnataka

ETV Bharat / state

COVID Vaccine ವಿತರಣೆಯಲ್ಲಿ ರಷ್ಯಾ, ಫ್ರಾನ್ಸ್, ಕೆನಡಾ ಹಿಂದಿಕ್ಕಿದ ಕರ್ನಾಟಕ: ಬಿಜೆಪಿ ಟ್ವೀಟ್ - ರಷ್ಯಾ, ಫ್ರಾನ್ಸ್, ಕೆನಡಾ

ರಾಜ್ಯದಲ್ಲಿ ಕೋವಿಡ್(COVID) ವಿತರಣೆ ಬಿರುಸುಗೊಂಡಿದ್ದು ಕರ್ನಾಟಕವು ರಷ್ಯಾ, ಫ್ರಾನ್ಸ್, ಕೆನಡಾ ದೇಶಗಳನ್ನು ಹಿಂದಿಕ್ಕಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಕೋವಿಡ್
ಕೋವಿಡ್

By

Published : Sep 12, 2021, 12:09 PM IST

ಬೆಂಗಳೂರು: ಕೋವಿಡ್‌ ಲಸಿಕೆ ವಿತರಣೆಯಲ್ಲಿ ಕರ್ನಾಟಕವು ರಷ್ಯಾ, ಫ್ರಾನ್ಸ್‌ ಹಾಗೂ ಕೆನಡಾ ದೇಶಗಳನ್ನು ಹಿಂದಿಕ್ಕಿದೆ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.

ಲಸಿಕೆ ಅಭಿಯಾನ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಲಸಿಕಾ ಅಭಿಯಾನ ಬಿರುಸುಗೊಂಡಿದ್ದು, ವಿದೇಶಗಳಿಗೆ ಹೋಲಿಸಿರೆ ಕರ್ನಾಟಕದ ಸಾಧನೆ ಅದ್ವಿತೀಯವಾಗಿದೆ. ರಾಜ್ಯದಲ್ಲಿ ನಿತ್ಯ ಸರಾಸರಿ 3.8 ಲಕ್ಷ ವ್ಯಾಕ್ಸಿನ್ ಡೋಸ್​ಗಳನ್ನು ನೀಡುತ್ತಿದ್ದು, ರಷ್ಯಾ, ಫ್ರಾನ್ಸ್ ಹಾಗೂ ಕೆನಡಾ ದೇಶಗಳನ್ನು ಹಿಂದಿಕ್ಕಿದೆ ಎಂದು ಹೇಳಿದೆ.

ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 28,591 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 338 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಈವರೆಗೆ 73,82,07,378 ಡೋಸ್‌ ಲಸಿಕೆ ಹಾಕಲಾಗಿದೆ.

ABOUT THE AUTHOR

...view details