ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು ಕೊರೊನಾ ಸ್ಫೋಟ: 4,169 ಕೋವಿಡ್ ದೃಢ​, 104 ಜನ ಬಲಿ... ಬೆಂಗಳೂರಲ್ಲೇ 2,344 ಕೇಸ್​! - Karnataka corona news

ಇಂದು ಒಂದೇ ದಿನ 4,169 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಬೆಂಗಳೂರಲ್ಲೇ 2344 ಮಂದಿಗೆ ಮಹಾಮಾರಿ ಸೋಂಕು ತಗುಲಿರುವುದು ದೃಢಪಟ್ಟಿದೆ. 104 ಮಂದಿ ಸೋಂಕಿತರು ಬಲಿಯಾಗಿದ್ದಾರೆ. ಇಂದು 1,263 ಮಂದಿ ಬಿಡುಗಡೆ ಆಗಿದ್ದು, ಚೇತರಿಕೆ ಪ್ರಮಾಣ ಶೇಕಡಾ 38.37 ಇದೆ.

Covid
ಕೋವಿಡ್

By

Published : Jul 16, 2020, 7:21 PM IST

Updated : Jul 16, 2020, 7:31 PM IST

ಬೆಂಗಳೂರು:ರಾಜ್ಯದಲ್ಲಿಂದು ಕೊರೊನಾ ಮಹಾಸ್ಫೋಟವೇ ಸಂಭವಿಸಿದೆ. ಒಂದೇ ದಿನದಲ್ಲಿ 4,169 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದರೆ, 104 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30,655 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿಂದು 104 ಮಂದಿ ಕೋವಿಡ್​ನಿಂದ ಸಾವನ್ನಪ್ಪಿದ್ದರೆ, 1,263 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಚೇತರಿಕೆ ಪ್ರಮಾಣ ಶೇಕಡಾ 38.37 ಇದ್ದರೆ, ಮರಣ ಪ್ರಮಾಣ ಶೇಕಡಾ 2.01 ಇದೆ. ಒಟ್ಟು 9,25,477 ಪರೀಕ್ಷೆ ನಡೆಸಲಾಗಿದ್ದು, ಇಂದು 23,451 ಮಂದಿಯ ಸೋಂಕು ಪರೀಕ್ಷೆ ನಡೆಸಲಾಗಿದೆ.

ಕರ್ನಾಟಕದ ಕೋವಿಡ್​ ವರದಿ

ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ಹಳೆಯ ಪ್ರಕರಣಗಳ ದಾಖಲೆಗಳನ್ನು ಮುರಿದಿದ್ದು, ನಗರದಲ್ಲಿ ಇಂದು ಒಂದೇ ದಿನ 2,344 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು ನಗರದಲ್ಲಿ 70 ಜನರು ಮೃತಪಟ್ಟಿರುವುದು ವರದಿಯಾಗಿದೆ.

497 ಮಂದಿ ಬಿಡುಗಡೆಯಾಗಿದ್ದು, 18,828 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 23.54 ಇದ್ದು, ಮರಣ ಪ್ರಮಾಣ 2.00% ಇದೆ.

Last Updated : Jul 16, 2020, 7:31 PM IST

ABOUT THE AUTHOR

...view details