400 ಕೋಟಿ ರೂ. ವೆಚ್ಚದಲ್ಲಿ ಕೋಟಿ ಲಸಿಕೆ ಖರೀದಿಗೆ ಸಿಎಂ ಅನುಮೋದನೆ! - ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ವ್ಯಾಕ್ಸಿನ್
ಮೊದಲ ಹಂತವಾಗಿ 400 ಕೋಟಿ ರೂ.ಗಳ ವೆಚ್ಚದಲ್ಲಿ 1 ಕೋಟಿ ಡೋಸೇಜ್ ಕೋವಿಡ್ ವ್ಯಾಕ್ಸಿನ್ ಖರೀದಿಸಲಾಗುತ್ತಿದ್ದು, ಇದನ್ನು 18 ವರ್ಷದಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಬೆಂಗಳೂರು: ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ 1 ಕೋಟಿ ಡೊಸೇಜ್ ವ್ಯಾಕ್ಸಿನ್ ಖರೀದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ.
ಮೊದಲ ಹಂತವಾಗಿ 400 ಕೋಟಿ ರೂ.ಗಳ ವೆಚ್ಚದಲ್ಲಿ 1 ಕೋಟಿ ಡೋಸೇಜ್ ಕೋವಿಡ್ ವ್ಯಾಕ್ಸಿನ್ ಖರೀದಿಸಲಾಗುತ್ತಿದ್ದು, ಇದನ್ನು 18 ವರ್ಷದಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಕೊರೊನಾ ವ್ಯಾಕ್ಸಿನ್ ಖರೀದಿಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅಗತ್ಯ ವ್ಯಾಕ್ಸಿನ್ ದಾಸ್ತಾನು ಮಾಡಿಕೊಳ್ಳಲು ರಾಜ್ಯಗಳು ಮುಂದಾಗಿದ್ದು, ಅದರಂತೆ ಮೊದಲ ಹಂತವಾಗಿ ಕರ್ನಾಟಕ 1 ಕೋಟಿ ಡೋಸೇಜ್ ಖರೀದಿ ಮಾಡುತ್ತಿದೆ.