ಕರ್ನಾಟಕ

karnataka

ETV Bharat / state

ಸಂಪುಟ ರಚನೆಗೆ ಕೊನೆಗೂ ಸಿಕ್ತು ಹೈಕಮಾಂಡ್ ಒಪ್ಪಿಗೆ, ಮಂಗಳವಾರವೇ ಮಂತ್ರಿಮಂಡಲ ರಚನೆ​

ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ರಚನೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್​ ಶಾ ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರವೇ ಸಚಿವ ಸಂಪುಟ ರಚನೆ ಆಗಲಿದೆ.

ಅಮಿತ್​ ಶಾ ಭೇಟಿ ಮಾಡಿದ ಬಿಎಸ್​ವೈ

By

Published : Aug 17, 2019, 7:53 PM IST

Updated : Aug 17, 2019, 8:08 PM IST

ನವದೆಹಲಿ:ಸಚಿವ ಸಂಪುಟ ರಚನೆ ಕಸರತ್ತು ಸಲುವಾಗಿ ಸಲುವಾಗಿ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಕ್ಯಾಬಿನೆಟ್‌ ಸೇರಲಿರುವ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ನೀಡಿದ್ದಾರೆ. ಅದಕ್ಕೆ ಬಿಜೆಪಿ ಹೈಕಮಾಂಡ್​​​ ಗ್ರೀನ್ ಸಿಗ್ನಲ್‌ ಕೊಟ್ಟಿದ್ದಾರೆ. ಮಂಗಳವಾರವೇ ಸಚಿವ ಸಂಪುಟ ರಚನೆ ಆಗಲಿದೆ.

ಅಮಿತ್​ ಶಾ ಭೇಟಿ ಮಾಡಿದ ಬಿಎಸ್​ವೈ

ದೆಹಲಿಯ ನಾರ್ತ್​ ಬ್ಲಾಕ್​ನಲ್ಲಿರುವ ಕೇಂದ್ರ ಗೃಹ ಸಚಿವರ ಕಚೇರಿಯಲ್ಲಿ ಅಮಿತ್ ಶಾ ಹಾಗು ಬಿಎಸ್​ವೈ ಭೇಟಿ ಮಾಡಿದ್ದು, ಅವರಿಗೆ ಸಂಭಾವ್ಯ ಸಚಿವರ ಪಟ್ಟಿ ಸಲ್ಲಿಸಿದ್ದಾರೆ. ಜತೆಗೆ ನಾಳೆ ಸಂಜೆ ಅಭ್ಯರ್ಥಿಗಳ ಅಧಿಕೃತ ಪಟ್ಟಿ ರವಾನೆ ಮಾಡುವುದಾಗಿ ಶಾ ಹೇಳಿದ್ದಾರೆ.ಯಡಿಯೂರಪ್ಪ ನೀಡಿರುವ ಸಚಿವರ ಪಟ್ಟಿಯ ಜೊತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಕೂಡ ಒಂದು ಪಟ್ಟಿ ನೀಡಿರುವ ಕಾರಣ ಎರಡೂ ಪಟ್ಟಿ ನೋಡಿ ನಂತರ ಸಚಿವ ಸ್ಥಾನಕ್ಕೆ ಯಾರಿಗೆ ಅವಕಾಶ ಎಂದು ಅಮಿತ್ ಶಾ ನಿರ್ಧರಿಸಲಿದ್ದಾರೆ.

ಅಮಿತ್​ ಶಾ ಭೇಟಿ ಮಾಡಿದ ಬಿಎಸ್​ವೈ

ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೊದಲ ಹಂತದಲ್ಲಿ 11ರಿಂದ 13 ಶಾಸಕರು ಸಂಪುಟ ಸೇರಲಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ದೆಹಲಿಯಿಂದ ಬಿಎಸ್​ವೈ ಬೆಂಗಳೂರಿನತ್ತ ಪ್ರಯಾಣ ಬೆಳೆಸಿರುವುದಾಗಿ ತಿಳಿದು ಬಂದಿದೆ. ಅಮಿತ್​ ಶಾ ಜೊತೆ ರಾಜ್ಯದಲ್ಲಿನ ನೆರೆಹಾವಳಿ ಪರಿಸ್ಥಿತಿಯ ಬಗ್ಗೆಯೂ ಬಿಎಸ್​ವೈ ಮಾಹಿತಿ ನೀಡಿದ್ದಾರೆ.

ಬಿಎಸ್​ ಯಡಿಯೂರಪ್ಪ

ಇನ್ನು, ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಂಜೆ ಸಂಪುಟ ರಚನೆಯಾಗಲಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಹ ನಡೆಯಲಿದೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಸೇರಿದಂತೆ ಅನೇಕ ಕೇಂದ್ರ ಸಚಿವರನ್ನು ಬಿಎಸ್​ ಯಡಿಯೂರಪ್ಪ ಭೇಟಿ ಮಾಡಿ ರಾಜ್ಯದ ಯೋಜನೆಗಳು, ಕೇಂದ್ರದಿಂದ ದೊರೆಯಬೇಕಿರುವ ಅನುಮೋದನೆಗಳ ಬಗ್ಗೆ ಚರ್ಚೆ ನಡೆಸಿದ್ದರು.

Last Updated : Aug 17, 2019, 8:08 PM IST

ABOUT THE AUTHOR

...view details