ಕರ್ನಾಟಕ

karnataka

ETV Bharat / state

ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ರಾಜ್ಯ ಬಂದ್: ನಾಳೆ ಏನಿರುತ್ತೆ, ಏನಿರಲ್ಲಾ?

ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ನಾಳೆ ಕನ್ನಡ ಪರ ಹೋರಾಟಗಾರರು ಕರೆ ನೀಡಿರುವ ಬಂದ್​ ನಿಂದಾಗಿ ನಗರದಲ್ಲಿ ಯಾವೆಲ್ಲಾ ಸೌಲಭ್ಯ ಇರುತ್ತೆ ಇರೋಲ್ಲಾ ಅನ್ನೋ ಮಾಹಿತಿ ಇಲ್ಲಿದೆ..

karnataka bund
ಕರ್ನಾಟಕ ಬಂದ್​

By

Published : Dec 4, 2020, 9:51 AM IST

ಬೆಂಗಳೂರು: ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಹೋರಾಟಗಾರರು ಶನಿವಾರ ಕರ್ನಾಟಕ ಬಂದ್​ಗೆ ಕರೆ ನೀಡಿದ್ದಾರೆ. ಈ ಬಗ್ಗೆ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಹಾಗೂ ಸಾ ರಾ ಗೋವಿಂದು​ ನೇತೃತ್ವದಲ್ಲಿ ನಾಳೆಯ ಬಂದ್​ ಬಗ್ಗೆ ಇಂದು ರೋಡ್​​ ಶೋ ನಡೆಸಲಿದ್ದಾರೆ.

ಸದ್ಯ ಕರೆ ನೀಡಿರುವ ಬಂದ್​ಗೆ ಪೊಲೀಸರಿಂದ ಬೆಂಬಲ ದೊರೆತಿಲ್ಲ. ಆದರೆ ಬಂದ್​ಗೆ ಪೆಟ್ರೋಲ್​-ಡೀಸೆಲ್ ಬಂಕ್ ಮಾಲೀಕರಿಂದ ನೈತಿಕ ಬೆಂಬಲ ದೊರಕಿದ್ದು, ನಾಳೆ ಎಂದಿನಂತೆ ಬಂಕ್​ಗಳು ಕಾರ್ಯ ನಿರ್ವಹಿಸಲಿವೆ. ಕರ್ನಾಟಕ ಬಂದ್​ಗೆ ಕರವೇ ನಾರಾಯಣ ಗೌಡ ಬಣ ಸೇರಿದಂತೆ 1,500 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.

ಕರ್ನಾಟಕ ಬಂದ್​ನಿಂದಾಗಿ ಯಾವೆಲ್ಲಾ ಸೌಲಭ್ಯ ಇರುತ್ತೆ, ಇರೋಲ್ಲಾ:

ಏನಿರುತ್ತೆ..?ಕೆಎಸ್​ಆರ್​ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ, ಆಸ್ಪತ್ರೆ, ಮೆಡಿಕಲ್ ಶಾಪ್, ಸರ್ಕಾರಿ ಕಚೇರಿ, ಆ್ಯಂಬುಲೆನ್ಸ್, ಹಾಲು, ಪೇಪರ್, ವಿಮಾನ, ರೈಲ್ವೆ ಸೇವೆ, ಬ್ಯಾಂಕ್, ಹೋಟೆಲ್, ಬಟ್ಟೆ ಅಂಗಡಿ, ಕೃಷಿ ಮಾರುಕಟ್ಟೆ, ತರಕಾರಿ, ಹೂ- ಹಣ್ಣು, ಪೆಟ್ರೋಲ್ ಬಂಕ್, ಬಾರ್ ಶಾಪ್ , ಮಾಲ್, ರೆಸ್ಟೋರೆಂಟ್, ಥಿಯೇಟರ್ ಓಪನ್​ ಇರುತ್ತವೆ.

ಏನಿರುವುದಿಲ್ಲ..?ಏರ್ ಪೋರ್ಟ್ ಟ್ಯಾಕ್ಸಿ, ಓಲಾ, ಊಬರ್, ಟ್ಯಾಕ್ಸಿ ಸಂಚಾರ, ಬೀದಿ ಬದಿ ವ್ಯಾಪಾರ, ಆಟೋ ಸೇವೆ ಲಭ್ಯವಿಲ್ಲ.

ಎಲ್ಲೆಲ್ಲಿ ಪ್ರತಿಭಟನೆ :ಕನ್ನಡ ಪರ ಸಂಘಟೆಗಳಿಂದ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂ ಪಾರ್ಕ್​ವರೆಗೆ ನಡಯುವ ಪ್ರತಿಭಟನಾ ಱಲಿಯಲ್ಲಿ ಐದು ಲಕ್ಷ ಜನ ಸೇರುವ ಸಾಧ್ಯತೆ ಇದೆ. ಕರವೇಯಿಂದ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ, ಸರ್ಕಾರಿ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ತಹಶಿಲ್ದಾರ್ ಕಚೇರಿ ಮುತ್ತಿಗೆ ಹಾಕಲಾಗುತ್ತದೆ. ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಮೌರ್ಯ ಸರ್ಕಲ್ ನಿಂದ ರಾಜಭವನವರಿಗೆ ಬೃಹತ್ ಪ್ರತಿಭಟನೆ ಱಲಿ ನಡೆಯಲಿದೆ. ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ಬಿಗಿ ಭದ್ರತೆ ವಹಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ... ನಿಷೇಧಾಜ್ಞೆ ಜಾರಿ ಮಾಡಿದ್ರೂ ನಮ್ಮನ್ನು ಏನು ಮಾಡೋಕಾಗಲ್ಲ: ವಾಟಾಳ್

ABOUT THE AUTHOR

...view details