ಕರ್ನಾಟಕ

karnataka

ETV Bharat / state

ಬೆಂಗಳೂರು ಅಭಿವೃದ್ಧಿಗೆ 7,795 ಕೋಟಿ ರೂ.: ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ. ಮೀಸಲು - ಕರ್ನಾಟಕ ಆರ್ಥಿಕತೆಮ

ಜಗತ್ತನ್ನು ಕಾಡಿದ ಮಹಾಮಾರಿ ಕೊರೊನಾ ಸಾಂಕ್ರಾಮಿಕ ತಂದೊಡ್ದಿದ ಕಠಿಣ ಸವಾಲು ಹಾಗೂ ಪ್ರಾಕೃತಿಕ ವಿಕೋಪಗಂತಹ ಸರಣಿ ಸಮಸ್ಯೆಗಳು ಕರ್ನಾಟಕದ ಆರ್ಥಿಕತೆಯ ತಳಪಾಯ ಅಲುಗಾಡಿಸಿದವು. ಇಂತಹ ಜಟಿಲತೆಯ ನಡುವೆಯೂ ಮುಖ್ಯಮಂತ್ರಿ ಬಿ ಎಸ್​​ ಯಡಿಯೂರಪ್ಪ ಅವರು ತಮ್ಮ 8ನೇ ರಾಜ್ಯ ಬಜೆಟ್​ ಮಂಡಿಸುತ್ತಿದ್ದಾರೆ.

Railway
Railway

By

Published : Mar 8, 2021, 1:49 PM IST

Updated : Mar 8, 2021, 6:50 PM IST

ಬೆಂಗಳೂರು:ನಗರದ ಅಭಿವೃದ್ಧಿಗಾಗಿ ರಾಜ್ಯ ಬಜೆಟ್​​ನಲ್ಲಿ 7795 ಕೋಟಿ ರೂ ಅನುದಾನ ಘೋಷಿಸಲಾಗಿದೆ. ನಗರದ ಸುಗಮ ಸಂಚಾರ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ಹಸಿರು ಹೊದಿಕೆ ಹೆಚ್ಚಳ ಹಾಗೂ ಉತ್ತಮ ಸೇವಾ ಸೌಲಭ್ಯ ನೀಡಲು, "ಬೆಂಗಳೂರು ಮಿಷನ್ 2022- ಬೆಂಗಳೂರಿಗೆ ನವಚೈತನ್ಯ" ಕಾರ್ಯಕ್ರಮ ಜಾರಿಗೊಳಿಸುವುದಾಗಿ ಬಜೆಟ್​​ನಲ್ಲಿ ಘೋಷಿಸಲಾಗಿದೆ.

  • ಸಂಚಾರ ದಟ್ಟಣೆ ತಗ್ಗಿಸಲು 65 ಕಿ.ಮೀ ಉದ್ದದ 100 ಮೀ. ಅಗಲದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ಸಾರ್ವಜನಿಕ- ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಟೆಂಡರ್ ಕರೆದು ಪ್ರಾರಂಭಿಸಲಾಗುವುದು.
  • ಉಪನಗರ ರೈಲು ಯೋಜನೆಗೆ 15,767 ಕೋಟಿ ರೂ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. 6 ವರ್ಷದಲ್ಲಿ ಯೋಜನೆ ಪೂರ್ಣಮಾಡುವ ಗುರಿ ಇದ್ದು, 21-22 ನೇ ಸಾಲಿನಲ್ಲಿ 850 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ಸಿಎಂ ಘೋಷಿಸಿದ್ದಾರೆ.
  • ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ರನ್ ವೇ ಕಾಮಗಾರಿಯು 2708 ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಳಿಸುವ ಕಾರ್ಯಾಚರಣೆಯಲ್ಲಿದ್ದು, ಈ ವರ್ಷ 4751 ಕೋಟಿ ರೂ. ನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಘೋಷಿಸಲಾಗಿದೆ.
  • ರೈಲ್ವೆ ದ್ವಿಪಥಗೊಳಿಸುವ ಯೋಜನೆಗೆ 813 ಕೋಟಿ ರೂ. ಅನುದಾನ ಮೀಸಲಿಟ್ಟು, ಯಶವಂತಪುರ- ಚನ್ನಸಂದ್ರ, ಮತ್ತು ಬೈಯಪ್ಪನಹಳ್ಳಿ- ಹೊಸೂರು ವಿಭಾಗಗಳ ನಡುವೆ ದ್ವಿಪಥ ಕಾಮಗಾರಿಯನ್ನು 2023 ರಲ್ಲಿ ಅಂತ್ಯಗೊಳಿಸಲು ಯೋಜನೆ ರೂಪಿಸಲಾಗಿದೆ.
  • ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ ಗೆ 169 ಕೋಟಿ ರೂ ಮೀಸಲು.
  • 168 ಕೋಟಿ ರೂ ವೆಚ್ಚದಲ್ಲಿ ಕೆಎಸ್ ಐಐಡಿಸಿ ಮೂಲಕ ವಿಮಾನ ನಿಲ್ದಾಣ ಪಕ್ಕದಲ್ಲಿ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್​ ಪಾರ್ಕ್ ನಿರ್ಮಾಣ.
  • ಜಲಮಂಡಳಿ ಕೆ.ಸಿ ವ್ಯಾಲಿ ಆವರಣದಲ್ಲಿ 248 ಎಮ್​ಎಲ್​ಡಿ, ಎಸ್​ಟಿಪಿ ಪುನರುಜ್ಜೀವನಗೊಳಿಸಲು ಬಿಬಿಎಂಪಿ ಸಹಯೋಗದಿಂದಿಗೆ ಮಾಡಲು 450 ಕೋಟಿ ರೂ ಘೋಷಣೆ.
  • ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಹಾಗೂ ವಿದ್ಯುಚ್ಛಕ್ತಿ ಉತ್ಪಾದನೆಗೆ ಅರ್ಕಾವತಿ- ಕಾವೇರಿ ನದಿ ಸಂಗಮದಲ್ಲಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ 9 ಸಾವಿರ ಕೋಟಿ ಯೋಜನಾ ವರದಿ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು, ಶೀಘ್ರ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.
  • ನಗರದಲ್ಲಿ ಜೂನ್ 2021 ರಿಂದ ಡಿ. 2022 ರ ನಡುವೆ 41 ಕಿ.ಮೀ ಮೆಟ್ರೋ ಮಾರ್ಗ ಹಂತಹಂತವಾಗಿ ಕಾರ್ಯಗತಗೊಳಿಸಲಾಗುವುದು. ಈವರೆಗೆ ಹಂತ-1,2 ಕ್ಕೆ 30 ಸಾವಿರ ಕೋಟಿ ಬಳಸಿಕೊಳ್ಳಲಾಗಿದೆ.
  • ನಗರದಲ್ಲಿ 58 ಕಿ.ಮೀ ಉದ್ದದ ಹೊರವರ್ತುಲ ರಸ್ತೆ- ಏರ್​ಪೋರ್ಟ್​ ಮೆಟ್ರೋ ಜಾಲದ ಹಂತ-2 ಕ್ಕೆ 14,788 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಕ್ಕೆ ಕೇಂದ್ರದ ಅನುಮೋದನೆ ನಿರೀಕ್ಷಿಸಲಾಗಿದೆ. ಈಗಾಗಲೇ ಭೂಸ್ವಾಧೀನಕ್ಕಾಗಿ 1600 ಕೋಟಿ ರೂ. ವೆಚ್ಚ ಮಾಡಲಾಗಿದೆ.
  • ಯಶವಂತಪುರ, ಕೆ.ಆರ್. ಪುರಂ, ಜ್ಞಾನಭಾರತಿಯಲ್ಲಿ ಮೆಟ್ರೋ- ರೈಲ್ವೆ ನಿಲ್ದಾಣದ ನಡುವೆ ಮೂರು ಪಾದಚಾರಿ ಮೇಲ್ಸೇತುವೆ, ದಾಸರಹಳ್ಳಿ- ಚಿಕ್ಕಬಿದರಕಲ್ಲು ರಸ್ತೆಗಳಲ್ಲಿ ಎರಡು ಹಾಗೂ ಮುಂಬರುವ ಮೆಟ್ರೋ ನಿಲ್ದಾಣಕ್ಕೆ ಉತ್ತಮ ಸಂಪರ್ಕ ಕಲ್ಪಿಸಲು ಹೊಸೂರು ರಸ್ತೆಗೆ ಅಡ್ಡಲಾಗಿ ಏಳು ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದೆಂದು ಘೋಷಿಸಿದ್ದಾರೆ.

ಆರೋಗ್ಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು:

  • ಬಿಬಿಎಂಪಿ ವತಿಯಿಂದ 57 ವಾರ್ಡ್ ಗಳಲ್ಲಿ 10 ಕೋಟಿ ವೆಚ್ಚದಲ್ಲಿ ಜನಾರೋಗ್ಯ ಕೇಂದ್ರಗಳನ್ನು ಆರೋಗ್ಯ ಇಲಾಖೆಯ ಮೂಲಕ ಸ್ಥಾಪಿಸಿ, ತಪಾಸಣಾ ಸೌಲಭ್ಯಗಳ ಜೊತೆಗೆ ಹೊರರೋಗಿ ಸೇವೆ ಒದಗಿಸಲು ಘೋಷಿಸಲಾಗಿದೆ.
  • ಬಿಬಿಎಂಪಿ ಶಾಲೆಗಳ ನವೀಕರಣಕ್ಕೆ 33 ಕೋಟಿ ರೂ. ಘೋಷಣೆ ಮಾಡಲಾಗಿದೆ.
  • ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಒತ್ತಡ ಕಡಿಮೆ ಮಾಡಲು ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಉಪಕೇಂದ್ರ ತೆರೆಯಲು 20 ಕೋಟಿ ರೂ ಅನುದಾನ ಘೋಷಣೆ ಮಾಡಲಾಗಿದೆ.
  • ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಸೌಲಭ್ಯ ಒದಗಿಸಲು 28 ಕೋಟಿ ರೂ ವೆಚ್ಚದಲ್ಲಿ 120 ಹಾಸಿಗೆಗಳ ಸೌಲಭ್ಯಕ್ಕೆ ಈ ವರ್ಷ ಚಾಲನೆ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
  • ನಗರದ ವಲಸೆ ಕಾರ್ಮಿಕರು, ಬಡಜನರಿಗಾಗಿ ಉತ್ತರ ಬೆಂಗಳೂರು ಪ್ರದೇಶದಲ್ಲಿ ಒಂದು ಹೊಸಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.
  • ನಗರದ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ 2 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ಒಟ್ಟಿನಲ್ಲಿ 2021- 22 ನೇ ಸಾಲಿನಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ 7795 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

Last Updated : Mar 8, 2021, 6:50 PM IST

ABOUT THE AUTHOR

...view details