ಕರ್ನಾಟಕ

karnataka

ETV Bharat / state

Karnataka Budget 2023: ರಾಜ್ಯ ಬಜೆಟ್ ಹೈಲೈಟ್ಸ್ - ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆ?​ - ಕರ್ನಾಟಕ ಬಜೆಟ್ ​2023

ಬಜೆಟ್​ ಮಂಡನೆ
karnataka Budget

By

Published : Feb 17, 2023, 8:08 AM IST

Updated : Feb 17, 2023, 4:58 PM IST

13:10 February 17

2 ಗಂಟೆ 35 ನಿಮಿಷಗಳ ಕಾಲ ಬಜೆಟ್ ಓದಿದ ಸಿಎಂ

2 ಗಂಟೆ 35 ನಿಮಿಷಗಳ ಕಾಲ ಬಜೆಟ್ ಓದಿದ ಸಿಎಂ

  • ಬಜೆಟ್ ಮಂಡನೆ ಮುಕ್ತಾಯಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
  • 15ನೇ ವಿಧಾನಸಭೆಯ ಕೊನೆಯ ಅಧಿವೇಶನ ಇದಾಗಿದೆ ಎಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದರು.
  • ಸುಮಾರು 2 ಗಂಟೆ 35 ನಿಮಿಷಗಳ ಕಾಲ ಬಜೆಟ್ ಭಾಷಣ ಓದಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

12:55 February 17

ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾದ ಹಣವೆಷ್ಟು?:

ಕೇಂದ್ರ ಸರ್ಕಾರವು, ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು ಸತತವಾಗಿ ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದೆ. 2019-20 ರಿಂದ 2022-23 ರವರೆಗೆ 2,77,711 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

12:54 February 17

ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ:

ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ವೇ, ಬೆಂಗಳೂರು - ರಾಮನಗರ - ಮಂಡ್ಯ- ಮೈಸೂರು ಹೆದ್ದಾರಿ, ಹುಬ್ಬಳ್ಳಿ - ಆಂಧ್ರ ಗಡಿ ಹೆದ್ದಾರಿ ಸೇರಿದಂತೆ ರಾಜ್ಯದ ಅನೇಕ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

12:34 February 17

ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ ಹೊಸ ಯೋಜನೆಗಳೇನು?, ಹೊಸ ಘೋಷಣೆಗಳು:

  • ರೈತರಿಗಾಗಿ 'ಭೂ ಸಿರಿ' ಎಂಬ ನೂತನ ಯೋಜನೆ ಘೋಷಣೆ ಮಾಡಲಾಗಿದೆ. ಈ ಯೋಜನೆಯಡಿ 10 ಸಾವಿರ ರೂ. ಹೆಚ್ಚುವರಿ ಸಹಾಯಧನ ನೀಡಿಕೆ.
  • 'ಸಹಸ್ರ ಸರೋವರ' ಯೋಜನೆಯಡಿ ರಾಜ್ಯದ 1,000 ಸಣ್ಣ ಸರೋವರಗಳ ಅಭಿವೃದ್ಧಿ ಮಾಡಲಾಗುವುದು.
  • 'ರೈತ ಸಿರಿ' ಯೋಜನೆ ಅಡಿ ಕಿರುಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದು.
  • 'ಸಹ್ಯಾದ್ರಿ ಸಿರಿ' ಯೋಜನೆಯಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗೆ ಒತ್ತು
  • ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲು 'ಒಂದು ತೋಟ ಒಂದು ಬೆಳೆ' ಯೋಜನೆಗೆ 10 ಕೋಟಿ ರೂ. ಅನುದಾನ ಮೀಸಲು
  • ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ 'ಮತ್ಸ್ಯ ಸಿರಿ' ಯೋಜನೆ ಘೋಷಣೆ
  • 'ಮುಖ್ಯಮಂತ್ರಿ ವಿದ್ಯಾ ಶಕ್ತಿ' ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
  • 100 ಕೋಟಿ ರೂ. ವೆಚ್ಚದಲ್ಲಿ ಶಾಲೆಗೆ ತೆರಳಲು 'ಮಕ್ಕಳ ಬಸ್' ಯೋಜನೆ ಜಾರಿ
  • 'ಬದುಕುವ ದಾರಿ' ಯೋಜನೆಯಡಿ ಯುವಜನರಿಗೆ 3 ತಿಂಗಳು ಐಟಿಐ ತರಬೇತಿ
  • ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು 'ಯುವಸ್ನೇಹಿ' ಯೋಜನೆಯಡಿ ತಲಾ 2 ಸಾವಿರ ರೂ. ಘೋಷಣೆ
  • 'ವಿದ್ಯಾವಾಹಿನಿ' ಯೋಜನೆಯಡಿ ವಿದ್ಯಾರ್ಥಿನಿಯರಿಗೆ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ
  • ಮಹಿಳೆಯರ ಆರ್ಥಿಕ ಶಕ್ತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಗೃಹಿಣಿ ಶಕ್ತಿ' ಯೋಜನೆ ಜಾರಿ, ಇದಕ್ಕೆ 46,278 ಕೋಟಿ ರೂ. ಅನುದಾನ ಮೀಸಲು
  • 'ನಮ್ಮ ನೆಲೆ' ಯೋಜನೆಯಡಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನಿವೇಶನ ನೀಡಿಕೆ
  • 'ಜಲನಿಧಿ' ಯೋಜನೆಯಡಿ ರೈತರ ಜಮೀನುಗಳಲ್ಲಿ ಜಲ ಹೊಂಡ
  • ಗೋ ಶಾಲೆಗಳ ಸ್ಥಾಪನೆಗೆ 'ಪುಣ್ಯ ಕೋಟಿ ದತ್ತು ಯೋಜನೆ' ಜಾರಿ
  • 'ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ' ಅಡಿ 355 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕ ಸ್ಥಾಪನೆ. ಇದರಿಂದ 20 ಸಾವಿರ ಫಲಾನುಭವಿಗಳಿಗೆ ಅನುಕೂಲ
  • 'ಹಳ್ಳಿ ಮುತ್ತು' ಯೋಜನೆ ಅಡಿ ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಾಲಾ ಶಿಕ್ಷಣ ಪೂರೈಸುವ 500 ಅತ್ಯುತ್ತಮ ವಿದ್ಯಾರ್ಥಿಗಳು ಸಿಇಟಿ ಮೂಲಕ ಸರ್ಕಾರಿ ಕೋಟಾದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಆಯ್ಕೆಯಾದರೆ ಸರ್ಕಾರವೇ ಸಂಪೂರ್ಣ ಶುಲ್ಕ ಭರಿಸಲಿದೆ.
  • 'ವಿದ್ಯಾವರ್ಧಿನಿ' ಯೋಜನೆಯಡಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್‌ಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು
  • 'ಆರೋಗ್ಯ ಪುಷ್ಟಿ' ಯೋಜನೆ ಅಡಿ ಮಹಿಳೆಯರ ಅಪೌಷ್ಟಿಕತೆ, ರಕ್ತಹೀನತೆ ತಡೆಯಲು ಕ್ರಮ ಕೈಗೊಳ್ಳಲು ಕ್ರಮ
  • 'ಸ್ವಚೇತನ' ಯೋಜನೆಯಡಿ 5 ಸಾವಿರ ವಿಕಲ ಚೇತನರಿಗೆ ದ್ವಿಚಕ್ರ ವಾಹನ ನೀಡುವುದಾಗಿ ಸಿಎಂ ತಿಳಿಸಿದ್ದಾರೆ.

12:07 February 17

ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆ?

  • ಶಿಕ್ಷಣ: 37,960 ಕೋಟಿ
  • ಜಲಸಂಪನ್ಮೂಲ: 22,854 ಕೋಟಿ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 20,494 ಕೋಟಿ
  • ನಗರಾಭಿವೃದ್ಧಿ: 17,938 ಕೋಟಿ
  • ಕಂದಾಯ: 15,943 ಕೋಟಿ
  • ಆರೋಗ್ಯ: 15,151 ಕೋಟಿ
  • ಒಳಾಡಳಿತ ಮತ್ತು ಸಾರಿಗೆ: 14509 ಕೋಟಿ
  • ಇಂಧನ: 13,803 ಕೋಟಿ
  • ಸಮಾಜ ಕಲ್ಯಾಣ: 11,163 ಕೋಟಿ
  • ಲೋಕೋಪಯೋಗಿ: 10,741 ಕೋಟಿ
  • ಕೃಷಿ ಮತ್ತು ತೋಟಗಾರಿಕೆ: 9,456 ಕೋಟಿ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 5,676 ಕೋಟಿ
  • ಆಹಾರ ಮತ್ತು ನಾಗರೀಕ ಸರಬರಾಜು: 4,600 ಕೋಟಿ
  • ವಸತಿ: 3,787 ಕೋಟಿ
  • ಇತರೆ: 1,16,968 ಕೋಟಿ

12:01 February 17

ಮೊದಲ ಬಾರಿಗೆ ಗಂಡು ಮಕ್ಕಳಿಗೂ ಅನುಪಾಲನಾ ಗೃಹ ನಿರ್ಮಾಣ

  • 18 ರಿಂದ 21 ವರ್ಷದೊಳಗಿನ ಅನಾಥ ಹೆಣ್ಣು ಮಕ್ಕಳ ಆರೈಕೆಗೆ 6 ಹಾಸ್ಟೆಲ್‌ ನಿರ್ಮಾಣ
  • ರಾಜ್ಯದಲ್ಲಿ ಮೊದಲ ಬಾರಿ ಅನಾಥ ಗಂಡು ಮಕ್ಕಳಿಗೂ 4 ಅನುಪಾಲನಾ ಗೃಹ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 2 ಕೋಟಿ ರೂ. ಗಳ ಅನುದಾನ ಘೋಷಿಸಲಾಗಿದೆ.

12:01 February 17

ರಾಜ್ಯದಲ್ಲಿ ಪೊಲೀಸ್‌ ಠಾಣೆಗಳ ಆಧುನೀಕರಣ

  • ರಾಜ್ಯದಲ್ಲಿ ನೂತನ ಪೊಲೀಸ್‌ ಕಚೇರಿ, ಪೊಲೀಸ್‌ ಠಾಣೆಗಳ ನಿರ್ಮಾಣ
  • ಪೋಲಿಸ್‌ ಠಾಣೆಗಳ ಆಧುನೀಕರಣಕ್ಕೆ 348 ಕೋಟಿ ರೂ.
  • ಕಾರಾಗೃಹಗಳ ನಿರ್ಮಾಣಕ್ಕೆ 410 ಕೋಟಿ ರೂ., ಕಾರಾಗೃಹ ಆಧುನೀಕರಣಕ್ಕೆ 51 ಕೋಟಿ ರೂ ಅನುದಾನ.

11:55 February 17

ಮೀನುಗಾರಿಕೆ ನೆರವು:

  • ಮೀನುಗಾರಿಕೆ ನೆರವಾಗಲು 62 ಎಫ್ ಎಫ್ ಪಿಓ ಗಳ ಸ್ಥಾಪನೆಗೆ 12,175 ಮೀನುಗಾರಿಕೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ
  • ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿ ದಾಸ್ತಾನಿಗೆ ಪ್ರೋತ್ಸಾಹಿಸಲು 20 ಕೋಟಿ ಅನುದಾನ.
  • ಮೀನುಗಾರರ ಹಾಗೂ ದೋಣಿಗಳ ಸುರಕ್ಷತೆಗಾಗಿ 17 ಕೋಟಿ ರೂಗಳ ಅನುದಾನದಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಜಿಪಿಎಸ್ ಸಂಮೋಹನ ವ್ಯವಸ್ಥೆಯನ್ನು ಎಲ್ಲಾ ಯಾಂತ್ರಿಕೃತ ಮೀನುಗಾರಿಕೆ ದೋಣಿಗೆ ಅಳವಡಿಕೆ
  • ಮೀನುಗಾರಿಕೆ ವಸತಿ ಸೌಕರ್ಯ ಕಲ್ಪಿಸಲು ವಸತಿ ರಹಿತರಿಗೆ ಈ ಸಾರಿ 10,000 ವಸತಿ ನಿರ್ಮಾಣ
  • ಆವರ್ತ ನಿಧಿ ಬಲಪಡಿಸುವ ಉದ್ದೇಶದಿಂದ ಪ್ರಸಕ್ತ ಆಯುರ್ವೇದನೆ 1500 ಕೋಟಿಗಳನ್ನು ಒದಗಿಸಿ 3500 ಕೋಟಿಗೆ ಏರಿಸಲಾಗುವುದು.
  • ಸಮುದ್ರ ಸೇರುವ ನೀರು ತಡೆಹಿಡಿದು ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಉಪಯೋಗಿಸಲು ರೂಪಿಸಲಾಗಿರುವ ಪಶ್ಚಿಮ ವಾಹಿನಿ ಯೋಜನೆಯ ಎರಡನೇ ಹಂತದಡಿ ಅನುಮೋದನೆಯಾಗಿರುವ 378 ಕೋಟಿ ರೂಗಳ ಕಾಮಗಾರಿ ಅನುಷ್ಠಾನ.
  • ಪ್ರಸಕ್ತ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಸುಮಾರು 1.5 ಲಕ್ಷ ಎಕರೆ ನೀರಾವರಿ ಸಾಮರ್ಥ್ಯದ ಸೃಜೀಕರಣ
  • ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿ ಉತ್ಪಾದನೆ ಹೆಚ್ಚಿಸಲು ಪ್ರಸಾತ್ತ ವರ್ಷದಲ್ಲಿ ನೀರಾವರಿ ಕ್ಷೇತ್ರಕ್ಕೆ ಒಟ್ಟಾರೆ 25,000 ಕೊಟಿ ರೂ.ಗಳನ್ನ ಒದಗಿಸಲು ತೀರ್ಮಾನ.

11:52 February 17

ಕೃಷಿ ಮತ್ತು ಪೂರಕ ಚಟುವಟಿಕೆಗಳು:

  • ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023 24ನೇ ಸಾಲಿನಲ್ಲಿ ಒಟ್ಟಾರೆ 39,031 ಕೋಟಿ ರೂ ಅನುದಾನ ಬಿಡುಗಡೆ.
  • ಪಿಎಂ ಕಿಸಾನ್ ಯೋಜನೆಗೆ ಕಳೆದ ಮೂರು ವರ್ಷದಲ್ಲಿ ರಾಜ್ಯ ಸರ್ಕಾರದ ತಲಾ 4822 ಕೋಟಿ ರೂ ನಂತೆ ಒಟ್ಟಾರೆ 15,752 ಕೋಟಿ ರೂಗಳನ್ನು ರೈತರ ಖಾತೆಗೆ ನೇರ ಜಮೆ.
  • ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ 400 ಕೋಟಿ ಅನುದಾನ
  • ಕೃಷಿಯಂತ್ರೀಕರಣ ಉತ್ತೇಜನಕ್ಕೆ 2037 ಕೋಟಿ ರೂ ನೀಡಿಕೆ.
  • ಕೃಷಿ ಮತ್ತು ತೋಟಗಾರಿಕೆ ಹನಿ ನೀರಾವರಿಗೆ 2900 ಕೋಟಿ ರೂ ಮಾರುಕಟ್ಟೆ ನೆರವು
  • ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ ರೂ.962 ಕೋಟಿ ವೆಚ್ಚ.
  • ನೀರಾವರಿ ಪಂಪ್ಸೆಟ್ ಗೆ 52,590 ಕೋಟಿ ರೂ ವಿದ್ಯುತ್ ಸಹಾಯಧನ
  • ಫಸಲ್ ಭೀಮಾ ಯೋಜನೆ ಅಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ ರೂ.4,900 ಕೋಟಿ ಪಾವತಿ
  • ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ರಾಗಿ ಜೋಳ ಹೆಸರುಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗೆ 6650 ಕೋಟಿ.
  • ಬೆಳೆಗಳ ಸಂರಕ್ಷಣೆ ಶೇಖರಣೆಗಾಗಿ 10.45 ಲಕ್ಷ ಫಲಾನುಭವಿಗಳಿಗೆ 175 ಕೋಟಿ ರೂ ನೆರವು
  • ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕೆ 545 ಕೋಟಿ ರೂ ವೆಚ್ಚ
  • ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು 725 ಕೋಟಿ ರೂ. ನೀಡಿಕೆ
  • ರಾಜ್ಯದ 3.6 ಲಕ್ಷ ರೈತರ ಅನುಕೂಲಕ್ಕೆ 2022 23ನೇ ಸಾಲಿನಲ್ಲಿ ಪ್ರಥಮ ಬಾರಿಗೆ 5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಪ್ರತಿ ಕ್ವಿಂಟಲ್ ಗೆ 3578 ರೂ. ನಂತೆ 1879 ಕೋಟಿ ರೂ. ವೆಚ್ಚ. 75,000 ರೈತರಿಂದ ಭತ್ತ ಹಾಗೂ 40,000 ರೈತರಿಂದ ಬಿಳಿ ಜೋಳ ಖರೀದಿಗೆ 1072 ಕೋಟಿ ರೂಪಾಯಿ. ಈ ಸಾರಿ ಕುಚಲಕ್ಕಿ ಖರೀದಿಗೂ ಸಹ ಪ್ರೋತ್ಸಾಹ.
  • 2022 23ನೇ ಸಾಲಿನಲ್ಲಿ 13.09 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾದ 14.63 ಲಕ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2031 ಕೋಟಿ ರೂಗಳನ್ನು ಎರಡು ತಿಂಗಳ ಅವಧಿಯೊಳಗೆ ಜಮೆ.
  • ಬೀದರ್ ಕಲಬುರ್ಗಿ ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ನೆಟೆ ರೋಗದಿಂದ ಹಾನಿಯಾಗಿರುವ ತೊಗರಿ ಬೆಳೆಗೆ ಹೆಕ್ಟರಿಗೆ 10,000 ರೂ ನಂತೆ 223 ಕೋಟಿ ರೂ. ಪರಿಹಾರ.
  • ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿ ರೈತ ಅರ್ಪಾವತಿ ಸಾಲದ ಮಿತಿಯನ್ನು ಮೂರು ಲಕ್ಷ ರೂ ನಿಂದ 5 ಲಕ್ಷ ರೂಗೆ ಏರಿಕೆ.
  • ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25000 ಕೋಟಿ ರೂಗಳಷ್ಟು ಸಾಲ ವಿತರಿಸುವ ಗುರಿ
  • ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಎಂಬ ನೂತನ ಯೋಜನೆ ಅಡಿ 2023 24ನೇ ಸಾಲಿನಲ್ಲಿ 10,000 ರೂ. ಹೆಚ್ಚುವರಿ ಸಹಾಯಧನ ನೀಡಲು ನಿರ್ಧಾರ ಸುಮಾರು 50 ಲಕ್ಷ ರೈತರಿಗೆ ಇದರಿಂದ ಅನುಕೂಲ.
  • ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ನೆರವಿನೊಂದಿಗೆ ಬದುಕಿನ ಭದ್ರತೆ
  • ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಗಳನ್ನು ಹಂತ ಹಂತವಾಗಿ ಒದಗಿಸಲು ಉದ್ದೇಶ. 2023 24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಗಳಿಗೆ 50 ಲಕ್ಷ ರೂ ನಂತೆ 50 ಕೋಟಿ ರೂ ನೀಡಿಕೆ.
  • ರೈತ ಉತ್ಪಾದಕ ಸಂಸ್ಥೆಗಳ ಪ್ರೋತ್ಸಾಹಕ್ಕೆ ತಲಾ ಹತ್ತು ಲಕ್ಷ ರೂ ವರೆಗಿನ ಬಂಡವಾಳಕ್ಕೆ ಐದು ವರ್ಷಗಳ ಅವಧಿಗೆ ಬ್ಯಾಂಕುಗಳ ಮೂಲಕ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆ ಅಡಿ ಬಡ್ಡಿ ಸಹಾಯಧನ ನೀಡಿಕೆ.
  • ರೈತಸಿರಿ ಯೋಜನೆ ಅಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟರಿಗೆ 10 ಸಾವಿರ ರೂಗಳ ಪ್ರೋತ್ಸಾಹ ಧನ ನೀಡಲು ನಿರ್ಧಾರ.
  • ಪ್ರತಿ ತಾಲೂಕಿಗೆ ಒಂದರಂತೆ ತಲ 50 ಹೆಕ್ಟೆ ಪ್ರದೇಶದಲ್ಲಿ ಗುಚ್ಛ ಮಾದರಿಯಲ್ಲಿ ಮುಂದಿನ ನಾಲ್ಕು ವರ್ಷದಲ್ಲಿ ಒಂದು ಲಕ್ಷ ಹೆಕ್ಟರ್ ಪ್ರದೇಶವನ್ನ ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ಒಳಪಡಿಸುವುದು.
  • ಸಹಸ್ರ ಸರೋವರ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಸಾವಿರ ಸಣ್ಣ ಸರೋವರಗಳ ಅಭಿವೃದ್ಧಿ. ಸಹ್ಯಾದ್ರಿ ಸಿರಿ ಯೋಜನೆ ಅಡಿ ಕರಾವಳಿ ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶದಲ್ಲಿ ಬೇಸಿಗೆ ನೀರು ಸಂಸ್ಕರಣೆಗೆ ಬಾವಿ ಕಿಂಡಿ ಅಣೆ ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಎರಡು ಯೋಜನೆಗಳಿಗೆ 75 ಕೋಟಿ ರೂ ಅನುದಾನ.
  • ಕೊಯ್ಲೋತ್ತರ ತಂತ್ರಜ್ಞಾನಕ್ಕೆ ಒತ್ತುಕೊಟ್ಟು ತೋಟಗಾರಿಕಾ ಬೆಳೆ ಮೌಲ್ಯವರ್ಧನೆ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತು ಮತ್ತು ಸಂಸ್ಕರಣೆಯ ಉತ್ತೇಜನಕ್ಕೆ ರೈತ ಸಂಪದ ಯೋಜನೆ ಅಡಿ ಕೆಫೆಕ್ ಸಂಸ್ಥೆಯ ಮೂಲಕ 100 ಕೋಟಿ ರೂಗಳಲ್ಲಿ ಯೋಜನೆ ರೂಪಿಸಲು ನಿರ್ಧಾರ.
  • ತೋಟಗಾರಿಕೆ ಇಲಾಖೆ ಅಡಿ 12 ತೋಟಗಳಲ್ಲಿ ಒಂದು ತೋಟ ಒಂದು ಬೆಳೆ ಯೋಜನೆ ಅಡಿ ಉತ್ಪಾದಕತೆ ಹೆಚ್ಚಿಸಲು 10 ಕೋಟಿ ರೂಗಳ ಒಂದು ಬಾರಿಯ ವಿಶೇಷ ಅನುದಾನ.
  • ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ ಹತ್ತು ಕೋಟಿ ರೂ ನೆರವು
  • ತುಮಕೂರು ಜಿಲ್ಲೆ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆ
  • ದ್ರಾಕ್ಷಿ ಬೆಳಗಾರಿಗೆ ನೆರವಾಗಲು ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾ ರಸ ಮಂಡಳಿ ಮುಖಾಂತರ 100 ಕೋಟಿ ರೂಗಳ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ
  • ರೇಷ್ಮೆ ಬೆಳೆಯನ್ನು 10,000 ಎಕರೆಷ್ಟು ಪ್ರದೇಶಕ್ಕೆ ವಿಸ್ತರಿಸಲು ತೀರ್ಮಾನ
  • ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆ ಅಡಿ 75 ಕೋಟಿ ರೂಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ
  • 32 ಸ್ವಯಂ ಚಾಲಿತ ರೈಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂಪಾಯಿ ಹಾಗೂ ಸಾವಿರ ರೇಷ್ಮೆ ಬೆಳೆಗಾರರಿಗೆ ಶ್ರೆಡ್ಡರ್ಸ್ ಗಳನ್ನು ಒದಗಿಸಲು 12 ಕೋಟಿ ರೂಗಳ ನೆರವು.
  • ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಬಲಪಡಿಸಲು ಎಂಟು ಕೋಟಿ ರೂ ಅನುದಾನ
  • ರಾಜ್ಯದ 10 ಪ್ರಮುಖ ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ ಡ್ರೈಯರ್ ಅಳವಡಿಸಲು 5 ಕೋಟಿ ರೂ ಅನುದಾನ.
  • ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಬಳ್ಳಾರಿಯಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕಾರಣ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ 100 ಕೋಟಿ ರೂಪಾಯಿ ವೆಚ್ಚ.
  • ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂಗಳ ವೆಚ್ಚದಲ್ಲಿ ಕುರಿ ಮೇಕೆ ಘಟಕ ಸ್ಥಾಪಿಸುವ ಯೋಜನೆ ಜಾರಿ
  • ರೈತ ಮಹಿಳೆಯಲ್ಲಿ ಕೋಳಿ ಸಾಕಾಣಿಕೆ ಪ್ರೋತ್ಸಾಹಿಸಲು 2022 23ನೇ ಸಾಲಿನಲ್ಲಿ 16 642 ಫಲಾನುಭವಿಗಳಿಗೆ 3.33 ಲಕ್ಷ ಕೋಳಿ ಮರಿ ವಿತರಣೆ
  • ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ ಅನುದಾನ ನೀಡಿಕೆ ಸಂಚಾರಿ ಚಿಕಿತ್ಸಾಲಯ ನಿರ್ಮಿಸಲು ಕ್ರಮ
  • ಮುಧೋಳ ಜಾತಿಯ ಶ್ವಾನ ತಳಿ ಅಭಿವೃದ್ಧಿಗಾಗಿ 5 ಕೋಟಿ ಅನುದಾನ. ಬೀದಿ ನಾಯಿ ದತ್ತು ಕಾರ್ಯಕ್ರಮಕ್ಕೆ ವಿಶೇಷ ಆನ್ಲೈನ್ ತಂತ್ರಾಂಶ ಅಭಿವೃದ್ಧಿ

11:43 February 17

  • 185 ನಗರ ಹಾಗೂ ಪಟ್ಟಣಗಳಲ್ಲಿ 6,820 ಕೋಟಿ ರೂ. ವೆಚ್ಚದಲ್ಲಿ 7.21 ಲಕ್ಷ ಮನೆಗಳಿಗೆ ನಳ ಸಂಪರ್ಕ
  • ಪೌಎ ಆಸರೆ ಯೋಜನೆಯಡಿ 5,000 ಪೌರಕಾರ್ಮಿಕರಿಗೆ 300 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಾಣ
  • ನಗರ ಮತ್ತು ಪಟ್ಟಣಗಳಲ್ಲಿ ದಿವಂಗತ ಶಂಕರ್ ನಾಗ್ ಹೆಸರಲ್ಲಿ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣ ನಿರ್ಮಾಣ
  • ಶರಾವತಿ ಪಂಡ್ಡ್ ಸ್ಟೋರೇಜ್ ಪವರ್ ಪ್ಲ್ಯಾಂಟ್ ನ ವಿಸ್ತೃತ ಯೋಜನೆಯಡಿ ಪಿಪಿಪಿ ಮಾದರಿಯಲ್ಲಿ 1000 ಮೆ.ವಾ ಹೊಸ ಪಂಪ್ಡ್ ಸ್ಟೋರೇಜ್ ಘಟಕ ಸ್ಥಾಪನೆ.
  • ಪಾವಗಡ ಸೋಲಾರ್ ಪಾರ್ಕ್ ನಲ್ಲಿ 48 ಕೋಟಿ ವೆಚ್ಚದಲ್ಲಿ ಬ್ಯಾಟರಿ ಶೇಖರಣೆ ವ್ಯವಸ್ಥೆ ಹೊಂದಿದ 2 MW ಸಾಮರ್ಥ್ಯದ ಸೌರ ಘಟಕ ಸ್ಥಾಪನೆ
  • ಎಸ್ಕಾಂಗಳಿಗೆ 13,743 ಕೋಟಿ ರೂ. ಅನುದಾನ
  • ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ 2000 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ
  • ಪ.ಘಟ್ಟ ವ್ಯಾಪ್ತಿಯ ಜಿಲ್ಲೆಗಳಲ್ಲಿ 500 ಕಾಲು ಸಂಕಗಳ ನಿರ್ಮಾಣ ಕಾಮಗಾರಿಗೆ 250 ಕೋಟಿ ರೂ.
  • ಕೊಡಗು ಜಿಲ್ಲೆಯ ಮುಖ್ಯ ರಸ್ತೆ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಪ್ಯಾಕೇಜ್
  • ಕಿರು ಬಂದರುಗಳ ಅಭಿವೃದ್ಧಿ ಗೆ 597 ಕೋಟಿ ವೆಚ್ಚದಲ್ಲಿ 12 ಹೊಸ ಯೋಜನೆಗಳ ಆರಂಭ
  • ಉ.ಕನ್ನಡದ ಕೋಡ್ಕಣಿ, ಬೆಳಗಾವಿಯ ಕಣಗಲಾ, ಚಾಮರಾಜನಗರ ದ ಬದನಗುಪ್ಪೆ, ಕಲಬುರಗಿ ಯ ಚಿತ್ತಾಪುರ, ತುಮಕೂರಿನ ಬೈರಗೊಂಡನಹಳ್ಳಿ-ಚಿಕ್ಕನಾಯಕನಹಳ್ಳಿ, ಬೀದರ್ನ ಹುಮನಾಬಾದ್, ರಾಯಚೂರು ಗ್ರಾಮಾಂತರ, ವಿಜಯಪುರ ದ ಹೂವಿನ ಹಿಪ್ಪರಗಿ, ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಹೊಸ ಕೈಗಾರಿಕಾ ವಸಾಹತು ಸ್ಥಾಪನೆ
  • ದೇವನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ವಿಸ್ತರಣೆಗೆ 2 ಕೋಟಿ ಅನುದಾನ
  • ಮಹಿಳಾ ಉದ್ದಿಮೆದಾರರಿಗೆ 2 ಕೋಟಿ ರೂ. ವರೆಗೆ 4% ಬಡ್ಡಿದರದಲ್ಲಿ ನೀಡಲಾಗುತ್ತಿದ್ದ ಸಾಲ ಸೌಲಭ್ಯವನ್ನು 5 ಕೋಟಿಗೆ ಹೆಚ್ಚಳ
  • ಮಥಶುಗರ್ ಕಾರ್ಖಾನೆಯಲ್ಲಿ ಎಥನಾಲ್ ಉತ್ಪಾದನಾ ಘಟಕ ಸ್ಥಾಪನೆ
  • ರಾಜ್ಯದ 25 ಸ್ಥಳಗಳಲ್ಲಿ ಮಿನಿ ಜವಳಿ ಪಾರ್ಕ್ ನಿರ್ಮಾಣ
  • ರಾಯಚೂರು, ಕಲಬುರಗಿ, ವಿಜಯಪುರ ಮತ್ತು ಚಿಕ್ಕಮಗಳೂರಲ್ಲಿ ನೂತನ ಮೆಗಾ ಜವಳಿ ಪಾರ್ಕ್ ನಿರ್ಮಾಣ

11:38 February 17

ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣೆ

⦁ ಬೆಂಗಳೂರು ನಗರದಲ್ಲಿ ಭುವನೇಶ್ವರಿ ತಾಯಿಯ ಬೃಹತ್​ ಮೂರ್ತಿ ಮತ್ತು ಥೀಮ್​ ಪಾರ್ಕ್​ ಅಭಿವೃದ್ಧಿ

⦁ ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ ಕಾರ್ಯಕ್ರಮದ ಅಡಿ ಪ್ರತಿ ಜಿಲ್ಲೆಯಲ್ಲಿ ಜನಪದ ಹಬ್ಬ ಆಯೋಜನೆ

⦁ ಗಡಿ ಪ್ರದೇಶ ರಸ್ತೆ ಹಾಗೂ ಸಮಗ್ರ ಅಭಿವೃದ್ಧಿಗೆ 150 ಕೋಟಿ ಅನುದಾನ

⦁ 3ನೇ ವಿಶ್ವಕನ್ನಡ ಸಮ್ಮೇಳನ ದಾವಣೆಗೆರೆಯಲ್ಲಿ ಆಯೋಜನೆ

⦁ ಬೆಂಗಳೂರು ಕರಗ ಉತ್ಸವ ಆಚರಣೆಗೆ ಸರ್ಕಾರದಿಂದ ವಿಶೇಷ ಅನುದಾನ

⦁ ಕೈಗಾರಿಕೋದ್ಯಮ ಆಡಳಿತ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ರಕ್ಷಣೆಗಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಅಧಿನಿಯಮ ಜಾರಿ

⦁ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಸಾಧಕರ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವರ ಯಶೋಗಾಥೆಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಕೆ

⦁ ಕನ್ನಡ ಪುಸ್ತಕ ಪ್ರಾಧಿಕಾರದ ಚಟುವಟಿಕೆಗಳಿಗೆ ಎರಡು ಕೋಟಿ ನೆರವು

⦁ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಅಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವೇಕಾನಾಂದ ಜಂಟಿ ಬಾಧ್ಯತ ಗುಂಪುಗಳಿಗೆ ತಲಾ 10 ಸಾವಿರನಂತೆ ಸುತ್ತು ನಿಧಿ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು 1 ಲಕ್ಷದಿಂದ 5 ಲಕ್ಷದವರೆಗೆ ಸಹಾಯಧನ

⦁ ಬದುಕು ದಾರಿ ಹೊಸ ಯೋಜನೆ ಅಡಿ, ವಿವಿಧ ಕಾರಣಗಳಿಂದ ವಿದ್ಯಾಭ್ಯಾಸ ತೊರೆದ ಯುವಜನರಿಗೆ ಐಟಿಐಗಳಲ್ಲಿ 3 ತಿಂಗಳ ವೃತ್ತಿಪರ ಸರ್ಟಿಫಿಕೇಟ್​ ತರಬೇತಿ ಪಡೆಯಲು ಮಾಸಿಕ 15000 ಶಿಷ್ಯವೇತನ ಒದಗಿಸುವುದು.

⦁ ಪದವಿ ಮುಗಿದ ಮೂರು ವರ್ಷದ ಬಳಿಕವೂ ಉದ್ಯೋಗ ದೊರೆಯದ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು, ಯುವ ಸ್ನೇಹಿ ಹೊಸ ಯೋಜನೆ ಅಡಿ ತಲಾ 2000 ರೂ ಒಂದು ಬಾರಿ ಆರ್ಥಿಕ ನೆರವು.

⦁ ಕ್ರೀಡಾಂಗಣದಲ್ಲಿ ಮಹಿಳೆಯರು ಮತ್ತು ವಿಶೇಷ ಚೇತನರಿಗೆ ಸೂಕ್ತ ಸೌಕರ್ಯ ಹಾಗೂ ಹೊರಾಂಗಣ ಜಿಮ್​ ಸೌಲಭ್ಯಕ್ಕಾಗಿ 100 ಕೋಟಿ ಮೀಸಲು

⦁ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಖಾಸಗಿ ಕ್ರೀಡಾ ಸಂಸ್ಥೆಗಳಿಗೆ, 25 ಲಕ್ಷ ರೂ ಪ್ರೋತ್ಸಾಹ ಧನ

⦁ ಸಂಪ್ರದಾಯಿಕ ಕ್ರೀಡೆಗಳಾದ ಖೋಖೋ, ಕಬ್ಬಡಿ, ಕಂಬಳ, ಕುಸ್ತಿ, ಎತ್ತಿನಗಾಡಿ ಓಟ, ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರಿಗೆ ಗ್ರಾಮೀಣ ಮಟ್ಟದ ಕ್ರೀಡಾಕೂಟ ಆಯೋಜನೆ

⦁ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣವನ್ನು ನರೇಗಾ ಯೋಜನೆಯಲ್ಲಿ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ

⦁ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಯುವ ಜನರಿಗೆ ಈ ಸಾಲಿನಿಂದ ಸ್ವಾಮಿ ವಿವೇಕನಾಂದ ಯುವ ಪ್ರಶಸ್ತಿ ಘೋಷಣೆ.

⦁ ಒಲಂಪಿಕ್ಸ್​ ಹಾಗೂ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಪಡೆಯುವ ಉದ್ದೇಶಕ್ಕೆ ಅತ್ಯುನ್ನತ ತರಬೇತಿ ಹಾಗೂ ಸಲಕರಣೆಗಾಗಿ 50 ಕೋಟಿ ವೆಚ್ಚದಲ್ಲಿ ಕರ್ನಾಟಕ ಒಲಂಪಿಕ್ಸ್​ ಕನಸಿನ ಯೋಜನಾ ನಿಧಿ ಸ್ಥಾಪನೆ.

⦁ ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ

⦁ ನಾಡ ಪ್ರಭು ಕೆಂಪೇಗೌಡರ ಐತಿಜಾಸಿಕ ಕುರುಹುಗಳಿರುವ ತಾಣಗಳ ಪ್ರವಾಸಿ ಸರ್ಕಿಟ್​ ಒಂದನ್ನು ಈ ವರ್ಷ ಪ್ರಾರಂಭ

⦁ ಸಂತ ಸೇವಾಲಾಲ್​ ಜನ್ಮ ಸ್ಥಳ ದಾವಣೆಗೆರೆಯ ಸುರಗೊಂಡ ಕೊಪ್ಪವನ್ನು ಅಭಿವೃದ್ಧಿಗಾಗಿ 5 ಕೋಟಿ ಅನುದಾನ

⦁ ದಾವಣಗೆರೆಯ ಚನ್ನಗಿರಿಯ ಹೊದಿಗೆರೆಯಲ್ಲಿರುವ ಷಹಾದಿ ಮಹಾರಾಜ್​ ಸಮಾಧಿ ಅಭಿವೃದ್ಧಿಗೆ 5 ಕೋಟಿ ಮೀಸಲು

⦁ ಹಾವೇರಿಯ ಬಂಕಾಪೂರದಲ್ಲಿ ಐತಿಹಾಸಿಕ 101 ಕಂಬಗಳ ನಗರೇಶ್ವರ ದೇವಸ್ಥಾನ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ

⦁ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ರೋಪ್​ ವೇ ನಿರ್ಮಾಣ ಕಾಮಗಾರಿ ಈ ವರ್ಷ ಪೂರ್ಣಕ್ಕೆ ನಿರ್ಧಾರ

⦁ ಹಂಪಿಯ ವಿಜಯ ವಿಠ್ಠಲ ದೇವಾಲಯ, ಪುರಂದರ ಮಂಟಪ, ವಿಜಯಪುರದ ಗೋಲ್​ಗುಂಬಜ್​, ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಾಲಯ, ಬಾದಾಮಿ ಗುಹೆಗಳು, ಕಿತ್ತೂರು ಹಾಗೂ ಬೀದರ್​ ಕೋಟೆ ಅಭಿವೃದ್ಧಿ. ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯ 3ಡಿ ಪ್ರೊಜೆಕ್ಷನ್​ ಮ್ಯಾಪಿಂಗ್​​, ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ 60 ಕೋಟಿ ಅನುದಾನ

⦁ ಮೈಸೂರಿನ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ 2ವರೆ ಎಕರೆ ಜಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ಅಂತರಾಷ್ಟ್ರೀಯ ಮಟ್ಟದ ರಾಜ್ಯ ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ನಿರ್ಮಾಣಕ್ಕೆ 10 ಕೋಟಿ ವ್ಯಯ.

⦁ ರಾಣಿ ಚೆನ್ನಭೈರದೇವಿ ಅವರ ಹೆಸರನ್ನು ಶಾಶ್ವತಗೊಳಿಸಲು ಹೊನ್ನಾವರದಲ್ಲಿ ಚೆನ್ನಭೈರ ದೇವಿ ಸ್ಮಾರಕ ಉದ್ಯಾನವನ

⦁ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮನದಿಂದ ರೋರಿಚ್​ ಹಾಗೂ ದೇವಿಕ ರಾಣಿ ಎಸ್ಟೇಟ್​ನಲ್ಲಿ ವಿವಿಧ ಮೂಲಭೂತ ಸೌಕರ್ಯ ಒದಗಿಸಲು ಕ್ರಮ

⦁ ಮಂಚನಬೆಲೆ ಜಲಾಶಯದ ಹಿನ್ನೀರಿನ ಸ್ಥಳದಲ್ಲಿ 10 ಕೋಟಿ ವೆಚ್ಚದಲ್ಲಿ ಜಂಗಲ್​ ಲಾಡ್ಜ್ಸ್​ ಅಂಡ್​ ರೆಸಾರ್ಟ್​ ಲಿ ಮೂಲಕ ರೆಸಾರ್ಟ್​ ನಿರ್ಮಾಣ

⦁ ಕಲಬುರಗಿಯ ಸನ್ನತಿ ಚಂದ್ರಲಾಂಬಾ ಹಾಗೂ ಗಾಣಗಾಪುರ ದತ್ತಾತ್ರೇಯ ದೇವಾಲಯ, ಬನವಾಸಿಯ ಮಧುಕೇಶ್ವರ ದೇವಾಲಯಗಳ ಸಂಕೀರ್ಣ ಸಮಗ್ರ ಅಭಿವೃದ್ಧಿಗೆ ಅನುದಾನ

⦁ ಮಾನವ -ಆನೆ ಸಂಘರ್ಷ ತಡೆಯುವ ಸಲುವಾಗಿ ವಿವಿಧ ಕಾಮಗಾರಿಗಳಿಗೆ 155 ಕೋಟಿ ಅನುದಾನ

⦁ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣ

⦁ ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣಾ ವಲಯಕ್ಕೆ ಪ್ರಸಕ್ತ ಸಾಲಿನಲ್ಲಿ 3,458 ಕೋಟಿ ಅನುದಾನ

11:35 February 17

ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ಬಂಪರ್‌ ಕೊಡುಗೆ:

ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ಬಂಪರ್‌ ಕೊಡುಗೆ ಘೋಷಿಸಲಾಗಿದ್ದು, 202 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ, ಮೈಸೂರಿನಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಆಸ್ಪತ್ರೆ. ಆರೋಗ್ಯ ಕ್ಷೇತ್ರ ಸುಧಾರಣೆಗಾಗಿ 720 ಕೋಟಿ ರೂ. ಘೋಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ. ರಾಯಚೂರಿನಲ್ಲಿ ಏಮ್ಸ್‌ ಮಾದರಿಯ ಆಸ್ಪತ್ರೆ ನಿರ್ಮಾಣ. 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ. ಕೊಡಗು, ಕಾರವಾರದಲ್ಲಿ 450 ಹಾಸಿಗೆ ಆಸ್ಪತ್ರೆ ನಿರ್ಮಾಣ.

11:35 February 17

ಕರ್ನಾಟಕದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಅಕಾಡೆಮಿಯನ್ನು ಹಾಗೂ ಯಕ್ಷರಂಗಾಯಣವನ್ನು ಸ್ಥಾಪಿಸಲಿದೆ.

11:35 February 17

ಗಡಿ ಪ್ರದೇಶಗಳ ಅಭಿವೃದ್ಧಿ:

ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪ್ರಾಶಸ್ತ್ಯವನ್ನು ನೀಡುವುದಕ್ಕಾಗಿ ಹಾಗೂ ಗಡಿ ಪ್ರದೇಶಗಳ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಒದಗಿಸಲಾಗುವುದು.

11:34 February 17

ಕರಾವಳಿಗರ ಬೇಡಿಕೆಗೆ ಮಣೆ ಹಾಕಿದ ಸಿಎಂ:

ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ CRZ ಮಾನದಂಡಗಳನ್ನು ಸಡಿಲಗೊಳಿಸುವುದಕ್ಕೆ ಕೇಂದ್ರ ಸರ್ಕಾರವು ಒಪ್ಪಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ವಲಯ ನಿರ್ವಹಣೆ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಧಾರ್ಮಿಕ, ಸಾಹಸ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೂಪುರೇಷೆಗಳನ್ನು ತಯಾರಿಸಲಾಗುವುದು.

11:30 February 17

ಕಳಸಾ ಬಂಡೂರಿ ನಾಲೆ ವಿಸ್ತರಣೆಗೆ 1,000 ಕೋಟಿ ರೂ.

ಕಳಸಾ ಬಂಡೂರಿ ನಾಲೆ ವಿಸ್ತರಣೆ ಯೋಜನೆಗೆ ಡಿಪಿಆರ್​​ಗೆ ಅನುಮೋದನೆ ಪಡೆಯಲಾಗಿದೆ. ಯೋಜನೆ ಅನುಷ್ಠಾನಕ್ಕೆ 1,000 ಕೋಟಿ ಅನುದಾನ ಘೋಷಿಸಲಾಗುತ್ತಿದೆ. ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ರೂ. ಅನುದಾನ ಘೋಷಿಸಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದ ಬೊಮ್ಮಾಯಿ.

11:29 February 17

ಮೀನುಗಾರಿಕೆ ಉತ್ತೇಜನಕ್ಕೆ ಸೀ ಫುಡ್ ಪಾರ್ಕ್

ಸೀಮೆ ಎಣ್ಣೆ ಆಧಾರಿತ ದೋಣಿಗಳನ್ನು ಪೆಟ್ರೋಲ್ ದೋಣಿಗಳನ್ನಾಗಿ ಪರಿವರ್ತಿಸಲು​ 40 ಕೋಟಿ ರೂ. ಮೀಸಲಿಡಲಾಗುವುದು. ಪರಿವರ್ತನೆಯಾಗುವ ವರೆಗೂ ಸೀಮೆಎಣ್ಣೆ ಸಹಾಯಧನ ಮುಂದುವರಿಸಲಾಗುವುದು. ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯಸಿರಿ ಎಂಬ ಯೋಜನೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಜತೆ ಸಮನ್ವಯಗೊಳಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ. ಮೀನುಗಾರಿಕೆ ಉತ್ತೇಜನಕ್ಕೆ ಕಾರವಾರದ ಬಳಿ ಸೀ ಫುಡ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ.

11:26 February 17

  • ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ‘She Toilet’ ನಿರ್ಮಾಣ. ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್, ತುರ್ತು SOS ಸೌಲಭ್ಯಗಳು ಇತ್ಯಾದಿಯನ್ನು ಆಧುನಿಕ ವಿನ್ಯಾಸದೊಂದಿಗೆ 50 ಕೋಟಿ ರೂ. ಗಳಲ್ಲಿ ನಿರ್ಮಾಣ.
  • 45 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ 1800 ಕೋಟಿ ರೂ. ಸಾಲ ಸೌಲಭ್ಯ. ಮಹಿಳೆಯರ ಅಪೌಷ್ಟಿಕತೆ ನಿವಾರಣೆಗೆ 100 ಕೋಟಿ ರೂ. ಮಕ್ಕಳ ಆರೋಗ್ಯ ತಪಾಸಣೆಗಾಗಿ ವಾತ್ಸಲ್ಯ ಯೋಜನೆ ಘೋಷಣೆ.
  • ಬೆಂಗಳೂರು ನಗರದಲ್ಲಿ ಕನ್ನಡ ಮಾತೆ ‘ಶ್ರೀ ಭುವನೇಶ್ವರಿ' ತಾಯಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಅಭಿವೃದ್ಧಿ. ‘ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ’ ಕಾರ್ಯಕ್ರಮದಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡ ಜಾನಪದ ಹಬ್ಬ ಆಯೋಜನೆ.
  • ಶೀಘ್ರದಲ್ಲೇ ಜಾಗತಿಕ ತಂತ್ರಜ್ಞಾನದ ರಾಜಧಾನಿಯಾಗುವತ್ತ ಸಾಗುತ್ತಿರುವ ಬೆಂಗಳೂರಿನ ಮೂಲ ಸೌಕರ್ಯವನ್ನು ಹೆಚ್ಚಿಸಲು ಯಶವಂತಪುರ ರೈಲ್ವೆ ನಿಲ್ದಾಣದಿಂದ ಇಂಟಿಗ್ರೇಟೆಡ್‌ ಮೇಲ್ಸೇತುವೆ ಹಾಗೂ ಬಿಇಎಲ್‌ ರಸ್ತೆಗೂ ಇಂಟಿಗ್ರೇಟೆಡ್‌ ಮೇಲ್ಸೇತುವೆ ನಿರ್ಮಿಸಲಾಗುವುದು.
  • ರಾಜ್ಯದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬದ್ಧವಾಗಿರುವ ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ 11 ಅಭಿವೃದ್ಧಿ ನಿಗಮಗಳಿಗೆ 569 ಕೋಟಿ ರೂ. ಘೋಷಿಸಿದೆ ಎಂದ ಸಿಎಂ.

11:23 February 17

ಅಂಜನಾದ್ರಿ ಅಭಿವೃದ್ಧಿಗೂ ಆದ್ಯತೆ:

  • ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಮೂಲಸೌಲಭ್ಯಕ್ಕೆ 100 ಕೋಟಿ ರೂ. ಅನುದಾನ
  • ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ C.R.Z ಮಾನದಂಡಗಳನ್ನು ಸಡಿಲ
  • ಮಂತ್ರಾಲಯದ 'ಪ್ರಸಾದ್' ಯೋಜನೆ ಅಡಿಯಲ್ಲಿ ಚಾಮುಂಡಿಬೆಟ್ಟ ಅಭಿವೃದ್ಧಿ
  • ಸ್ವದೇಶ್‌ ದರ್ಶನ್ 2.0 ಅಡಿಯಲ್ಲಿ ಹಂಪಿಯ ಸ್ಮಾರಕ ಅಭಿವೃದ್ಧಿ
  • 24 ಸಾವಿರ ಪೌರಕಾರ್ಮಿಕರ ನೇರ ನೇಮಕಾತಿಗೆ ನಿರ್ಧಾರ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಭಜನೆ
  • ಮಕ್ಕಳ ಪೌಷ್ಟಿಕತೆಗೆ ಪ್ರತ್ಯೇಕ ಇಲಾಖೆ ರಚನೆ
  • ತುಮಕೂರಿನಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ

11:23 February 17

  • ಸಂತ ಸೇವಾಲಾಲ್ ಜನ್ಮಸ್ಥಳದಲ್ಲಿ ಪ್ರವಾಸಿ ಸೌಲಭ್ಯಕ್ಕೆ 5 ಕೋಟಿ ರೂ. ಘೋಷಣೆ
  • ಷಹಾಜಿ ಮಹಾರಾಜ್ ಸಮಾಧಿ ಸ್ಥಳದ ಅಭಿವೃದ್ಧಿಗೆ 5 ಕೋಟಿ ರೂ.
  • ದಾವಣಗೆರೆ ಜಿಲ್ಲೆ ಚನ್ನಗಿರಿ ತಾ. ಹೊದಿಗೆರೆಯಲ್ಲಿ ಸಮಾಧಿ ಅಭಿವೃದ್ಧಿ
  • ಹಾವೇರಿ ಜಿಲ್ಲೆ ಬಂಕಾರಪುದ ನಗರವೇಶ್ವರ ದೇವಾಲಯದ ಅಭಿವೃದ್ಧಿ

11:19 February 17

ಬೆಂಗಳೂರು ನಗರ ಅಭಿವೃದ್ಧಿ:

  • ಬೆಂಗಳೂರಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ
  • ಬೆಂಗಳೂರು ನಗರದಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ 1200 ಕೋಟಿ ರು.ವೆಚ್ಚದಲ್ಲಿ ಯೋಜನೆ.
  • ನಗರದ ಪ್ರತಿ ವಾರ್ಡ್​ಗಳಲ್ಲಿ ಆಧುನಿಕ ತಂತ್ರಜ್ಞಾನ ಆಧರಿತ ವಾಸನೆ ರಹಿತ ತ್ಯಾಜ್ಯ ಸಂಸ್ಕರಣಾ ಕೇಂದ್ರ ಸ್ಥಾಪನೆ
  • ಬೆಂಗಳೂರಿನ 243 ವಾರ್ಡ್​ಗಳ ನಮ್ಮ ಕ್ಲಿನಿಕ್​ ಆರಂಭ
  • ಬೆಂಗಳೂರು ನಗರದಲ್ಲಿ ಉತ್ತಮ ಆರೋಗ್ಯಕ್ಕೆ ಬೆಂಗಳೂರು ಹೆಲ್ತ್​ ಸಿಸ್ಟಮ್​ ರಚನೆ
  • ಬಿಬಿಎಂಪಿ ಶಾಲೆಗಳ ಅಭಿವೃದ್ಧಗೆ 180 ಕೋಟಿ ರೂ.ಗಳ ಯೋಜನೆ.
  • ಬೆಂಗಳೂರು ನಗರದಲ್ಲಿ ಪ್ರತಿ ವರ್ಷ 15 ಲಕ್ಷ ಸಸಿ ನಡೆಲು ಯೋಜನೆ, ಇದಕ್ಕಾಗಿ ಮೂರು ಹೈಟೆಕ್​ ನರ್ಸರಿ ರಚನೆ.
  • ಬಿಬಿಎಂಪಿ ಆಸ್ತಿ ರಚನೆಗೆ 35 ಕೋಟಿ ರೂ.ಗಳಲ್ಲಿ ಬೇಲಿ ರಚನೆ, ಜಿಪಿಎಸ್​ ಅಳವಡಿಕೆ.
  • ಬೆಂಗಳೂರು ಸೇಫ್​ ಸಿಟಿ ನಿರ್ಭಯ ಯೋಜನೆಗೆ 261 ಕೋಟಿ ರು.ಗಳ ಅನುದಾನ.
  • ಬೆಂಗಳೂರಿನ ಮಾರುಕಟ್ಟೆ ವಾಣಿಜ್ಯ ಸಂಕಿರಣ ಮತ್ತು ಜನನಿಬಿಡ ಸ್ಥಳಗಳಲ್ಲಿ ಸ್ತ್ರೀ(she) ಶೌಚಾಲಯ ನಿರ್ಮಾಣಕ್ಕೆ 55 ಕೋಟಿ ರು.ಅನುದಾನ
  • ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 9698 ಕೋಟಿ ರು.ಗಳ ಅನುದಾನ ಮೀಸಲು.

11:19 February 17

  • ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಜುಯಿಟಿ ಕೊಡಲು ಅನುದಾನ ಮೀಸಲು
  • ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ಗುರುತಿಸಿರುವ ರಾಜ್ಯ ಸರ್ಕಾರವು 2023-24ನೇ ಸಾಲಿನಿಂದ ಅವರಿಗೆ ಉಪಧನವನ್ನು (Gratuity) ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 40 ಕೋಟಿ ರೂ. ಗಳ ಅನುದಾನ ಮೀಸಲಿಡಲಾಗಿದೆ.
  • 25 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಗಳು ಹಾಗೂ ಅಂಗನವಾಡಿ ಸಹಾಯಕಿಯರಿಗೆ 30,000 ರೂ. ಗಳ ಆರ್ಥಿಕ ಭದ್ರತೆಯನ್ನು ಒಂದು ಬಾರಿಗೆ ನೀಡಿ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಲಾಗುವುದು.
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ವಿಭಜಿಸಿ ಮಕ್ಕಳ ಪೌಷ್ಟಿಕತೆ ಕುರಿತು ಒಂದು ಪ್ರತ್ಯೇಕ ಇಲಾಖೆ ಮತ್ತು ಮಹಿಳಾ ಸಬಲೀಕರಣ ಇಲಾಖೆಯನ್ನು ರೂಪಿಸಲು ನಿರ್ಧರಿಸಿದೆ.

11:19 February 17

ಶಿಕ್ಷಣಕ್ಕೆ ನೀಡಿದ ಕೊಡುಗೆಗಳು:

  • 60 ತಾಲೂಕುಗಳಲ್ಲಿ ತಲಾ ಒಂದು ಪದವಿ ಪೂರ್ವ ಕಾಲೇಜು ಅಭಿವೃದ್ಧಿಗೆ ಕ್ರಮ
  • ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಗಳಲ್ಲಿ Dormitory ನಿರ್ಮಾಣ
  • 47 ವಸತಿ ಶಾಲೆಗಳ ದುರಸ್ತಿ ಮತ್ತು ಸ್ಮಾರ್ಟ್ ಕ್ಲಾಸ್‌ರೂಮ್ ಗಳ ಅಭಿವೃದ್ಧಿ
  • 73 ಕರ್ನಾಟಕ ಪಬ್ಲಿಕ್ ಶಾಲೆಗಳು, 50 ಆದರ್ಶ ವಿದ್ಯಾಲಯಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ 'ಸೃಷ್ಟಿ' ಟಿಂಕರಿಂಗ್ ಲ್ಯಾಬ್ ಸ್ಥಾಪನೆ
  • 23 ತಾಲೂಕುಗಳಲ್ಲಿ ಹೊಸದಾಗಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ
  • 46 ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ
  • ವಿದೇಶದಲ್ಲಿ ವ್ಯಾಸಂಗ ಮಾಡುವ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ಸಾಲ
  • ಶೂನ್ಯ ಬಡ್ಡಿ ದರದಲ್ಲಿ 20 ಲಕ್ಷ ರೂ. ವರೆಗೂ ಸಾಲ
  • ಐಐಟಿ/ ಐಐಎಂ, ಐಐಎಸ್ಸಿ/ ಎನ್ಐಟಿ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಎಸ್​ಸಿ/ ಎಸ್ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ 4 ಲಕ್ಷಕ್ಕೆ ಏರಿಕೆ
  • ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ 150 ರೂ.ಗೆ ಏರಿಕೆ

11:15 February 17

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಒತ್ತು:

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 9,698 ಕೋಟಿ ರೂ. ಮೀಸಲಿರಿಸಲಾಗಿದೆ. ಬೆಂಗಳೂರಿಗೆ ಜಾಗತಿಕ ಮಟ್ಟದ ಮೂಲಸೌಕರ್ಯ ಒದಗಿಸಲು ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ ನಿರ್ಮಾಣ. 13,139 ಕೋಟಿ ರೂ. ವೆಚ್ಚದಲ್ಲಿ 5 ಕಿ.ಮಿ ಎಲಿವೇಟಡ್‌ ರಸ್ತೆ ನಿರ್ಮಾಣ.

11:14 February 17

ಕನ್ನಡ ಚಲನಚಿತ್ರರಂಗಕ್ಕೆ ಪ್ರೋತ್ಸಾಹ ನೀಡಲು ಟೈಯರ್‌ 2 ನಗರಗಳಲ್ಲಿ 100 ರಿಂದ 200 ಆಸನಗಳ ವ್ಯವಸ್ಥೆಯುಳ್ಳ ಮಿನಿ ಥಿಯೇಟರ್‌ಗಳ ಸ್ಥಾಪನೆ.

11:14 February 17

75 ಯೂನಿಟ್‌ ಉಚಿತ ವಿದ್ಯುತ್ ಘೋಷಣೆ:

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬದ್ಧವಾಗಿರುವ ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ 11 ಅಭಿವೃದ್ಧಿ ನಿಗಮಗಳಿಗೆ 569 ಕೋಟಿ ರೂ. ಘೋಷಿಸಿದೆ. ನಮ್ಮ ಸರ್ಕಾರ ಅಂತ್ಯೋದಯಕ್ಕೆ ಬದ್ಧವಾಗಿದೆ. ರಾಜ್ಯದ ಬಿಪಿಎಲ್‌ ಹೊಂದಿರುವ ಎಸ್‌ಸಿ ಎಸ್‌ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ ಉಚಿತ ವಿದ್ಯುತ್ ಘೋಷಿಸುವ ಮೂಲಕ ಸಮಾಜದ ಸರ್ವರ ಕಲ್ಯಾಣವನ್ನು ಖಚಿತಪಡಿಸುತ್ತಿದೆ ಎಂದು ತಿಳಿಸಿದ ಬೊಮ್ಮಾಯಿ.

11:09 February 17

ಮುಂದಿನ 5 ವರ್ಷಗಳಲ್ಲಿ ಐಐಟಿ ಮಾದರಿಯಲ್ಲಿ ಕರ್ನಾಟಕ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಗಳಾಗಿ (KIT) ಉನ್ನತೀಕರಿಸಲಾಗುವುದು. ಇದಕ್ಕಾಗಿ ಬೆಂಗಳೂರು, ಹಾವೇರಿ, ಹಾಸನ, ಕೆ.ಆರ್.ಪೇಟೆ, ರಾಮನಗರ ಹಾಗೂ ಕಾರವಾರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಗುರುತಿಸಲಾಗಿದೆ.

11:09 February 17

ಬೆಂಗಳೂರು ನಗರ ಅಭಿವೃದ್ಧಿ:

- ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದಕ್ಕಾಗಿ ಹೆಚ್ಚು ಸಂಚಾರ ದಟ್ಟಣೆ ಇರುವ 75 ಜಂಕ್ಷನ್​ಗಳಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು.

- ಕೃತಕ ಬುದ್ದಿಮತ್ತೆ ಬಳಸಿಕೊಂಡು ಸಂಚಾರ ಸಿಗ್ನಲ್​ಗಳ ನಿರ್ವಹಣೆ,

- Seamless signalling ಅಳವಡಿಸಿ ಸಂಚಾರ ದಟ್ಟಣೆ ನಿರ್ವಗಣೆ ಮಾಡಲಾಗುವುದು.

11:08 February 17

  • ಜಲಜೀವನ್‌ ಮಿಷನ್ ಗೆ 6,234 ಕೋಟಿ ರೂ. ಅನುದಾನ ಘೋಷಣೆ
  • ನರೇಗಾ ಯೋಜನೆಗೆ 1,800 ಕೋಟಿ ರೂ.
  • ಪ್ರತಿ ಗ್ರಾಮ ಪಂಚಾಯತಿಗೆ 22-60 ಲಕ್ಷ ಅನುದಾನದಂತೆ 780 ಕೋಟಿ ವಿಶೇಷ ಅನುದಾನ
  • ಗ್ರಾಮೀಣ ರಸ್ತೆ ಮತ್ತು ಕೃಷಿ ಭೂಮಿ ಸಂಪರ್ಕ ರಸ್ತೆಗೆ ಪ್ರತಿ ವಿಧಾನಸಭಾ ಕ್ಷೇತ್ರವಾರು 25 ಕಿ.ಮೀ.ನಂತೆ 5,000 ಕಿ.ಮೀ. ರಸ್ತೆ ಅಭಿವೃದ್ಧಿಗೆ 300 ಕೋಟಿ ರೂ.
  • ಗ್ರಾಮಗಳಲ್ಲಿ ಅಗತ್ಯ ಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛ ಭಾರತ್ ಯೋಜನೆಗೆ 4,190 ಕೋಟಿ
  • 2000 ಕೆರೆ ಅಭಿವೃದ್ಧಿ ಗೆ 200 ಕೋಟಿ ರೂ.
  • 330 ಗ್ರಾಮ ಪಂಚಾಯತಿಗಳಲ್ಲಿ 1000 ಗ್ರಾಮೀಣ ಗ್ರಂಥಾಲಯ ಉನ್ನತೀಕರಣ
  • ಪ್ರತಿ ಜಿಲ್ಲೆಯಲ್ಲಿ 18 ಲಕ್ಷ ರೂ. ಘಟಕ ವೆಚ್ಚದಲ್ಲಿ ಆಹಾರ ಮಂದಿರ ನಿರ್ಮಾಣ
  • ಕಣ್ಯಾಣ ಕರ್ನಾಟಕ ಅಭಿವೃದ್ಧಿಗೆ 5,000 ಕೋಟಿ ಬಿಡುಗಡೆ

11:05 February 17

ಜಿಎಸ್‌ಟಿ ಸಂಗ್ರಹ ಶೇ. 26ರಷ್ಟು ವೃದ್ಧಿ:

ಜಿಎಸ್‌ಟಿ ಸಂಗ್ರಹ ಶೇ. 26ರಷ್ಟು ವೃದ್ಧಿಯಾಗಿದೆ. ರಾಜ್ಯದ ಹಣಕಾಸು ಸ್ಥಿತಿ ಸದೃಢವಾಗಿದ್ದು ಆದಾಯ ತೆರಿಗೆ ಸಂಗ್ರಹ ಶೇ. 20ರಷ್ಟು ಹೆಚ್ಚಳವಾಗಿದೆ. ಮುದ್ರಣ ಹಾಗೂ ನೋಂದಣಿ ಶುಲ್ಕ ಸಂಗ್ರಹವೂ ಹೆಚ್ಚಾಗಿದೆ.

11:05 February 17

ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ:

ಚಾಮುಂಡಿ ಬೆಟ್ಟದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂ, ಕಲಾ ಗ್ಯಾಲರಿ ನಿರ್ಮಾಣ. ಹೊನ್ನಾವರದಲ್ಲಿ ಚೆನ್ನಭೈರಾದೇವಿ ಸ್ಮಾರಕ ಪಾರ್ಕ್‌ ನಿರ್ಮಾಣ. ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ.

ನಂದಿ ಗಿರಿಧಾಮ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ನಂದಿಬೆಟ್ಟಕ್ಕೆ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ರೋಪ್‌ ವೇ ನಿರ್ಮಾಣ, ಪ್ರವಾಸಿ ಗೈಡ್‌ಗಳ ಮಾಸಿಕ ಪ್ರೋತ್ಸಾಹ ಧನ 2 ರಿಂದ 5 ಸಾವಿರಕ್ಕೆ ಏರಿಕೆ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ರೂ. ಕೋಟಿ.

ಚಿಕ್ಕಮಗಳೂರಿಗೆ ವಿವಿ ನಿರ್ಮಿಸಲು ಮತ್ತು 46 ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ. ಪ್ರಚಲಿತ ವಿದ್ಯಮಾನಗಳ ಅರಿವು ಹೊಂದಲು ಅನುವಾಗುವಂತೆ 24,347 ಶಾಲೆಗಳಲ್ಲಿ 20 ಕೋಟಿ ರೂ. ಅನುದಾನ. ಪುಸ್ತಕ, ಪತ್ರಿಕೆ ಒದಗಿಸುವ ಮೂಲಕ ಗಂಥಾಲಯಗಳ ಬಲವರ್ಧನೆಗೆ ಒತ್ತು.

11:02 February 17

ಕರ್ನಾಟಕವು ತೋಟಗಾರಿಕೆ ವಲಯದಲ್ಲಿ ಅಪಾರ ಸಾಧನೆ ಮಾಡಿ ದೇಶದಲ್ಲಿಯೇ ಅತ್ಯುತ್ತಮ ತೋಟಗಾರಿಕೆ ರಾಜ್ಯ ಪ್ರಶಸ್ತಿ ಪಡೆದಿದೆ. 26.21 ಲಕ್ಷ ಹೆಕ್ಟೇರ್ ವಿಸ್ತೀರ್ಣ ಪ್ರದೇಶದ ತೋಟಗಾರಿಕೆ ಬೆಳೆಯಿಂದ 242 ಲಕ್ಷ ಮೆ. ಟನ್ ವಾರ್ಷಿಕ ಉತ್ಪನ್ನದ ಮೌಲ್ಯ 66,263 ಕೋಟಿ ರೂ. ಎಂದು ತಿಳಿಸಿದ ಸಿಎಂ

11:02 February 17

ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್​ಗೆ ಅನುಮೋದನೆ:

ಬೆಂಗಳೂರಿನಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ದೊರಕಿಸುವುದು ಉದ್ದೇಶಕ್ಕಾಗಿ 2022-23 ನೇ ಸಾಲಿನಲ್ಲಿ 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್​ಗಳನ್ನು ಅನುಮೋದಿಸಲಾಗಿದೆ. ಇದಲ್ಲದೆ, ಹೆಚ್ಚುವರಿಯಾಗಿ 50 ಡಯಾಲಿಸಿಸ್ ಹಾಸಿಗೆಗಳು ಮತ್ತು 300 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆಯನ್ನು ಬೆಂಗಳೂರು ಹೆಲ್ತ್ ಸಿಸ್ಟಂ ಎಂದು ಪುನರ್ ರಚನೆ ಮಾಡಲು ಉದ್ದೇಶಿಸಲಾಗಿದೆ.

10:57 February 17

ಆ‍್ಯಸಿಡ್‌ ದಾಳಿ ಸಂತ್ರಸ್ಥರಿಗೆ ಮಾಶಾಸನ ಹೆಚ್ಚಳ: ಶೂನ್ಯ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯ ಯೋಜನೆ. ಗೃಹಿಣಿಯರಿಗೆ ತಿಂಗಳಿಗೆ 500 ರೂ. ಗಳ ಸಹಾಯಧನ. ರಾಜ್ಯದಲ್ಲಿ ಗೃಹಿಣಿ ಶಕ್ತಿ ಯೋಜನೆ ಶೀಘ್ರದಲ್ಲೇ ಜಾರಿ. ಆ‍್ಯಸಿಡ್‌ ದಾಳಿ ಸಂತ್ರಸ್ಥರಿಗೆ ಮಾಶಾಸನ 10,000ಕ್ಕೆ ಏರಿಕೆ ಮಾಡಲಾಗಿದೆ.

10:56 February 17

ಗ್ರಾಮ ಸಹಾಯಕರ ಹುದ್ದೆ ಮರುನಾಮಕರಣ:ಗ್ರಾಮ ಸಹಾಯಕರ ಹುದ್ದೆಯನ್ನು ‘ಜನಸೇವಕ' ಎಂದು ಮರುನಾಮಕರಣ ಮಾಡಲಾಗಿದೆ. ಗ್ರಾಮ ಸಹಾಯಕರ ಮಾಸಿಕ ಗೌರವಧನ 13,000 ರೂ. ಗಳಿಂದ. 14,000 ರೂ. ಗೆ ಹೆಚ್ಚಳ ಮಾಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂ. ನಿಂದ 1500 ರೂ.ಗೆ ಏರಿಕೆ.

10:54 February 17

ಹಾವೇರಿಯಲ್ಲಿ ಮೆಗಾ ಡೈರಿ ಸ್ಥಾಪನೆಗೆ 90 ಕೋಟಿ ರೂ.

  • ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು, ಬಳ್ಳಾರಿ ಜಿಲ್ಲೆಯಲ್ಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
  • ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿ.

10:54 February 17

ರಾಸು ಕಳೆದುಕೊಂಡ ಮಾಲೀಕರಿಗೆ ಪರಿಹಾರ:

ಚರ್ಮಗಂಟು ರೋಗವನ್ನು ತಡೆಗಟ್ಟಲು 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಈ ಸೋಂಕಿನಿಂದ ಮರಣ ಹೊಂದಿದ ರಾಸುಗಳ ಮಾಲೀಕರಿಗೆ ಪರಿಹಾರ ನೀಡಲು 55 ಕೋಟಿ ರೂ. ಮಂಜೂರು.

10:51 February 17

ಸಮಗ್ರ ಕೃಷಿ ಪದ್ಧತಿಗೆ ಪ್ರೋತ್ಸಾಹ: ಕೃಷಿ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಹಲವು ಮಹತ್ವಪೂರ್ಣ ಕ್ರಮಗಳನ್ನು ಕೈಗೊಂಡಿದೆ. ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪದ್ಧತಿಗಳ ಅಳವಡಿಕೆಯೊಂದಿಗೆ ರೈತರು ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಪೂರಕ ಕ್ರಮಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಲಿದೆ. ಇದಲ್ಲದೇ, ಕೃಷಿಯನ್ನು ಲಾಭದಾಯಕವಾಗಿಸಲು ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮತ್ತು ರಪ್ತಿಗೆ ಒತ್ತು ನೀಡಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ಮೂಲಕ ರೈತರ ಆದಾಯದಲ್ಲಿ ಸ್ಥಿರತೆಯನ್ನು ತರಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಿಎಂ ಘೋಷಿಸಿದರು.

10:48 February 17

ಬಜೆಟ್‌ನಲ್ಲಿ ರೈತರಿಗೆ ಬಂಪರ್ ಗಿಫ್ಟ್

  • ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ರೂ. ಸಾಲ
  • 3 ಲಕ್ಷದವರೆಗಿನ ಶೂನ್ಯ ಬಡ್ಡಿದರದ ಸಾಲದ ಮೊತ್ತ 5 ಲಕ್ಷಕ್ಕೆ ಏರಿಕೆ
  • ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 4,822 ಕೋಟಿ ರೂ. ಒಟ್ಟಾರೆ 15,752 ಕೋಟಿ ರೂ. ಗಳನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗಿದೆ.
  • ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ 400 ಕೋಟಿ ಒದಗಿಸಲಾಗಿದೆ.
  • ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು 2,037 ಕೋಟಿ ರೂ.
  • ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ 2,900 ಕೋಟಿ ರೂ. ಮಾರುಕಟ್ಟೆ ನೆರವು ನೀಡಲಾಗಿದೆ.
  • ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ 962 ಕೋಟಿ ರೂ. ವೆಚ್ಚ ಮಾಡಲಾಗಿದೆ.

10:43 February 17

ರಾಮನಗರದಲ್ಲಿ ಬೃಹತ್​ ರಾಮ ಮಂದಿರ

  • ರಾಮನಗರದಲ್ಲಿ ಬೃಹತ್​ ರಾಮ ಮಂದಿರ
  • ಅಂಜನಾದ್ರಿ ಬೆಟ್ಟ ಅಭಿವೃದ್ದಿಗೆ 100 ಕೋಟಿ
  • ನಮ್ಮ ನೆಲೆ ಹೆಸರಿನಲ್ಲಿ 10 ಸಾವಿರ ಸೈಟ್ ವಿತರಣೆ
  • ಗೃಹಿಣೀ ಶಕ್ತಿ ಯೋಜನೆ ಘೋಷಣೆ
  • ಆಶಾ ಕಾರ್ಯಕರ್ತೆಯರ ಮಾಸಿಕ ಸಹಾಯಧನ 1 ಸಾವಿರ ರೂ ಹೆಚ್ಚಳ
  • ನರೇಗಾ ಯೋಜನೆಗೆ ಒಂದು ಸಾವಿರ ಕೋಟಿ ಅನುದಾನ

10:42 February 17

ಕೃಷಿಗೆ ನೀಡಿದ ಕೊಡುಗೆಗಳು:

  • ಕಿಸಾನ್ ಕ್ರಿಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆ ಅನ್ವಯ
  • ಭೂ ಸಿರಿ ಯೋಜನೆಯಡಿ 10 ಸಾವಿರ ರೂ. ಹೆಚ್ಚುವರಿ ಪ್ರೋತ್ಸಾಹ ಧನ ವಿತರಣೆ
  • ಬೀಜ, ರಸಗೊಬ್ಬರ, ಕ್ರಿಮಿನಾಶಕ ಖರೀದಿಸಲು ಪ್ರೋತ್ಸಾಹ
  • ನೀರಿನ ಸಂರಕ್ಷಣೆಗೆ ಆದ್ಯತೆ
  • ಅರೆ ಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ ಕಿಂಡಿ ಅಣೆ, ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಎರಡೂ ಯೋಜನೆಗಳಿಗೆ 75 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.
  • ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸಿ ನೀರು ಸಂರಕ್ಷಣಾ ಕಾಮಗಾರಿಗಳಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲನಿಧಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು.
  • ನರೇಗಾ ಯೋಜನೆಯ ಸಮನ್ವಯದೊಂದಿಗೆ ಎಲ್ಲಾ ರೈತರಿಗೆ ತಮ್ಮ ಜಮೀನಿನಲ್ಲಿ ಜಲ ಹೊಂಡವನ್ನು ನಿರ್ಮಿಸಲು ಪ್ರೋತ್ಸಾಹಿಸಲಾಗುವುದು.
  • ಕರ್ನಾಟಕವು ತೋಟಗಾರಿಕೆ ವಲಯದಲ್ಲಿ ಅಪಾರ ಸಾಧನೆ ಮಾಡಿ ದೇಶದಲ್ಲಿಯೇ ಅತ್ಯುತ್ತಮ ತೋಟಗಾರಿಕೆ ರಾಜ್ಯ ಎಂದು ಪ್ರಶಸ್ತಿ ಪಡೆದಿದೆ. ರಾಜ್ಯದ 26.21 ಲಕ್ಷ ಹೆಕ್ಟೇರ್ ವಿಸ್ತೀರ್ಣ ಪ್ರದೇಶದ ತೋಟಗಾರಿಕೆ ಬೆಳೆಗಳಿಂದ ಲಭಿಸುವ 242 ಲಕ್ಷ ಮೆಟ್ರಿಕ್‌ ಟನ್‌ ವಾರ್ಷಿಕ ಉತ್ಪನ್ನದ ಮೌಲ್ಯವು 66,263 ಕೋಟಿ ರೂ. ಗಳಾಗಿದ್ದು, ಇದು ರಾಜ್ಯದಲ್ಲಿನ ಸಮಗ್ರ ಕೃಷಿ ವಲಯದ ಒಟ್ಟಾರೆ ಆದಾಯದ ಶೇ.30 ರಷ್ಟಿದೆ.

10:38 February 17

2022-23ರಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ಶೇ. 7.9 ರಷ್ಟು ಹೆಚ್ಚಳ:

  • 2022-23ರಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ಶೇ.7.9 ರಷ್ಟು ಅಧಿಕ.
  • ಕೃಷಿ ವಲಯದ ಬೆಳವಣಿಗೆ ಶೇ.5.5 ಹೆಚ್ಚಳ
  • ರಾಜ್ಯ ಸ್ವಂತ ತೆರಿಗೆಗಳ ಸಂಗ್ರಹ ಶೇ.20ರಷ್ಟು ಹೆಚ್ಚಳ
  • ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ
  • ಮಹಿಳಾ ಕಾರ್ಮಿಕರಿಗೆ 500 ರೂ. ಸಹಾಯಧನ
  • 30 ಲಕ್ಷ ಮಹಿಳೆಯರಿಗೆ ಉಚಿತ ಪಾಸ್
  • ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
  • 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ
  • ಬೊಮ್ಮಾಯಿ ಬಜೆಟ್​ಬಲ್ಲಿ ಸ್ತ್ರೀ ಸಬಲೀಕರಣಕ್ಕೆ ಬಂಪರ್ ಕೊಡುಗೆ ಘೋಷಣೆ

10:34 February 17

  • ಸ್ವಾವಲಂಬನೆಯ ಮೂಲಕ ರಾಜ್ಯದ ಅಭಿವೃದ್ಧಿ ಮಾಡಲಗುತ್ತಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಚೇತರಿಕೆ ಕಂಡುಬಂದಿದ್ದು, ತಲಾದಾಯ ಕೂಡ ಹೆಚ್ಚಳವಾಗಿದೆ. 2,40,000 ದಿಂದ 33,2,000 ತಲಾ ಆದಾಯ ಹೆಚ್ಚಳ.
  • ಹಣಕಾಸಿನ ಪರಿಸ್ಥಿತಿ ಕೂಡ ಸದೃಢ
  • ಮೋಟರ್​ ವಾಹನ ತೆರಿಗೆ ಶುಲ್ಕ ಕೂಡ ಹೆಚ್ಚಳ
  • ಕೇಂದ್ರದಲ್ಲಿ ರಾಜ್ಯದ ತೆರಿಗೆ ಪಾಲು 4813 ರೂ ಅಧಿಕ
  • ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಅನುದಾನ
  • ಜಲಸಾರಿಗೆ ಅವಕಾಶಗಳ ಬಳಕೆ ಸಾಧ್ಯತೆ ಮತ್ತು ಬಂದರು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದಲೂ ಸಹಕಾರ ದೊರೆತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್​​ನಲ್ಲಿ ದೊಡ್ಡ ಮೊತ್ತದ ಅನುದಾನ ದೊರೆತಿದೆ.
  • ದಾವೋಸ್​​​ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆ, ಬೆಂಗಳೂರಿನ ಹೂಡಿಕೆದಾರರ ಸಮಾವೇಶದ ಮೂಲಕ ಹೂಡಿಕೆಯನ್ನು ಸೆಳೆಯಲಾಗಿದೆ. ಉದ್ಯಮ ಸ್ನೇಹಿ ವಾತಾವರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

10:23 February 17

ಬಜೆಟ್​ ಮಂಡನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ

  • ಸಂಪುಟ ಸಭೆ ವೇಳೆ 'ಹೋಗುತ್ತಿದೆ ಹಳೆ ಕಾಲ, ಬರುತಲಿದೆ ಹೊಸ ಕಾಲ' ಕುವೆಂಪು ಕವನದ ಸಾಲುಗಳನ್ನು ಉಲ್ಲೇಖ ಮಾಡಿದ ಸಿಎಂ ಬೊಮ್ಮಾಯಿ
  • ಮೋದಿ ಸರ್ಕಾರದ ಹೆಜ್ಜೆ ಬಣ್ಣಿಸಿದ ಸಿಎಂ
  • ಸಿದ್ದರಾಮಯ್ಯ ಜನರ ಕಿವಿ ಮೇಲೆ ಹೂ ಇಟ್ಟಿದ್ದರು - ಬೊಮ್ಮಾಯಿ ಟೀಕೆ
  • ಸಿಎಂ ಹೇಳಿಕೆಗೆ ಮಾಜಿ ಸಿಎಂ ಆಕ್ರೋಶ
  • ಬಜೆಟ್​ ಮಂಡನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ
  • ಮಾನ ಮರ್ಯಾದೆ ಇಲ್ಲ ನಿಮಗೆ, ಸುಮ್ಮನೆ ಕುಳಿತುಕೊಳ್ಳಿ - ಸಿದ್ದರಾಮಯ್ಯ ವಾಗ್ದಾಳಿ

10:17 February 17

ಬಜೆಟ್​ ಮಂಡನೆ ಆರಂಭ

2023-24 ನೇ ಸಾಲಿನ ರಾಜ್ಯ ಬಜೆಟ್​ ಮಂಡನೆ ಆರಂಭವಾಗಿದೆ. ಆಡಳಿತ ಮತ್ತು ಪ್ರತಿಪಕ್ಷದ ನಾಯಕರುಗಳು ಈಗಾಗಲೇ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

09:59 February 17

ವಿಧಾನಸೌಧಕ್ಕೆ ಆಗಮಿಸಿದ ಬಜೆಟ್ ಪುಸ್ತಕ ಪ್ರತಿಗಳು:

ಇಂದು ಮಂಡಿಸಲಿರುವ ಬಜೆಟ್ ಪುಸ್ತಕದ ಪ್ರತಿಗಳು ವಿಧಾನಸೌಧಕ್ಕೆ ಬಂದು ತಲುಪಿವೆ. ಕೆಂಗಲ್ ಗೇಟ್ ಮುಖಾಂತರ ಪೊಲೀಸ್ ಬಿಗಿ ಭದ್ರತೆಯಲ್ಲಿ ಬಜೆಟ್ ಪುಸ್ತಕಗಳನ್ನು ತರಲಾಯಿತು.

09:31 February 17

ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ:

ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಕ್ಕೆ ಆಗಮಿಸಿದ್ದಾರೆ. ಇಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಬಜೆಟ್​ ಮಂಡನೆಗೆ ಅನುಮೋದನೆ ಪಡೆಯಲಿದ್ದಾರೆ.

09:05 February 17

ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

ಆಂಜನೇಯ ದೇವಾಲಯಕ್ಕೆ ಸಿಎಂ ಭೇಟಿ:

2023-24 ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ ಟಿ ನಗರದ ಮುತ್ತಪ್ಪ ಬ್ಲಾಕ್​ನ ಕಂಠೇಶ್ವರ ದೇವಸ್ಥಾನ ಹಾಗೂ ಬಾಲಬ್ರುಯಿ ಬಳಿ ಇರುವ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಮಸ್ತ ಕರ್ನಾಟಕದ ಮಹಾಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಸಿಎಂ, ಮಂಗಳಾರತಿ ತಟ್ಟೆಗೆ 500 ರೂಪಾಯಿಯ ಎರಡು ನೋಟುಗಳನ್ನ ಹಾಕಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಸಮಸ್ತ ಕರ್ನಾಟಕದ ಮಹಾಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾಗಿ ತಿಳಿಸಿದರು.

07:30 February 17

ಕರ್ನಾಟಕ ರಾಜ್ಯ ಬಜೆಟ್ ಮಂಡನೆ - ​2023

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಇಂದು ತಮ್ಮ ಆಡಳಿತಾವಧಿಯ ಕೊನೆಯ ಬಜೆಟ್ ಮಂಡಿಸುತ್ತಿದ್ದಾರೆ. 2022-23ರ ಸಾಲಿನಲ್ಲಿ 2.7 ಲಕ್ಷ ಕೋಟಿ ಆಯವ್ಯಯ ಮಂಡಿಸಿದ್ದ ಸಿಎಂ, ಈ ಬಾರಿ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸುತ್ತಿದ್ದಾರೆ. ಕಳೆದ ವರ್ಷ 5 ಸಾವಿರ ಕೋಟಿ ರೂ. ರಾಜ್ಯದ ಬೊಕ್ಕಸಕ್ಕೆ ಆದಾಯ ಕೊರತೆಯಿತ್ತು. ಆದರೆ, ಈ ಬಾರಿ ಬಜೆಟ್ ಗುರಿಗಿಂತ 13 ಸಾವಿರ ಕೋಟಿ ಅಧಿಕವಾಗಿ ಆದಾಯ ಸಂಗ್ರಹವಾಗಿದೆ. ಹೀಗಾಗಿ, ಅಧಿಕ ತೆರಿಗೆ ಹೊರೆ ಇಲ್ಲದ ಚುನಾವಣಾ ಬಜೆಟ್ ಮಂಡನೆ ಮಾಡಲಾಗುತ್ತಿದೆ.

ಇದು ಚುನಾವಣೆಯ ಬಜೆಟ್ ಆದ​ ಹಿನ್ನೆಲೆಯಲ್ಲಿ ಸಿಎಂ ಅವರ ಮೇಲಿನ ನಿರೀಕ್ಷೆಗಳೂ ಗರಿಗೆದರಿವೆ. ಇಂದು ಬೆಳಗ್ಗೆ 10:15ಕ್ಕೆ ಸಿಎಂ ಬೊಮ್ಮಾಯಿ ಅಯವ್ಯಯ ಮಂಡಿಸಲಿದ್ದಾರೆ. ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿರಲಿದ್ದು, ಬಸವರಾಜ ಬೊಮ್ಮಾಯಿ ಅವರ ಎರಡನೇ ಬಜೆಟ್ ಆಗಿದೆ. ಇನ್ನು 7ನೇ ವೇತನ ಆಯೋಗ ರಚನೆಯಾಗಿರುವ ಹಿನ್ನೆಲೆ ಈ ಬಗ್ಗೆಯೂ ಬಜೆಟ್​ನಲ್ಲಿ ಮಹತ್ವ ಘೋಷಣೆಗಳಾಗುವ ನಿರೀಕ್ಷೆ ಇದೆ. ಸರ್ಕಾರಿ ನೌಕರರ ವೋಟ್​​ಗಳನ್ನು ಸೆಳೆಯಲು ಬಿಜೆಪಿ ಮುಂದಾಗುತ್ತಾ? ಮತ್ತು ಬಡವರಿಗೆ, ಮಹಿಳೆಯರಿಗೆ ಹಾಗೂ ರೈತರು ಸೇರಿದಂತೆ ಯಾವ ಯಾವ ಕ್ಷೇತ್ರಕ್ಕೆ ಎಷ್ಟೇಷ್ಟು ಅನುದಾನ ಘೋಷಿಸಿದ್ದಾರೆಂಬ ಮಾಹಿತಿ ಕೆಲವೇ ಹೊತ್ತಿನಲ್ಲಿ ತಿಳಿಯಲಿದೆ.

ಚುನಾವಣಾ ಪೂರ್ವ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈಗಾಗಲೇ ಮತದಾರರನ್ನು ಆಕರ್ಷಿಸುವಂತಹ ಹಲವಾರು ಘೋಷಣೆಗಳನ್ನು ಮಾಡಿದ್ದರಿಂದ ಇದಕ್ಕೆ ಪ್ರತಿಯಾಗಿ ಉತ್ತಮವಾದ ಯೋಜನೆಗಳನ್ನು ಬಜೆಟ್​ನಲ್ಲಿ ಪ್ರಸ್ತಾಪಿಸಿ ಮತದಾರರನ್ನು ಸೆಳೆಯುವ ಸವಾಲು ಸಿಎಂ ಮುಂದಿದೆ. ಬಿಜೆಪಿ ಸರ್ಕಾರ ಈ ಮೊದಲೇ ಸುಳಿವು ನೀಡಿದಂತೆ ಮುಂಗಡಪತ್ರದಲ್ಲಿ ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಭರಪೂರ ಕೊಡುಗೆಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸುವ ಸಾಧ್ಯತೆ ಇದೆ. ಕೆಲವು ಷರತ್ತಿಗೊಳಪಟ್ಟು ಕೃಷಿ ಸಾಲ ಮನ್ನಾ, ಬಡ್ಡಿರಹಿತ ಸಾಲದ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಹೆಚ್ಚಳ, ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಿಕೆ, ಮಹಿಳೆಯರಿಗೆ, ಮಕ್ಕಳಿಗೆ ಅತ್ಯಾಕರ್ಷಕ ಯೋಜನೆಗಳನ್ನ ನೀಡುವ ಸಂಭವವಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು ಸಹಾಯಧನವನ್ನು ಘೋಷಣೆ ಮಾಡುವ ಸಂಭವವಿದೆ.

ಕೃಷಿ ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ಮುಂಗಡಪತ್ರದಲ್ಲಿ ಪ್ರಕಟಿಸುವ ನಿರೀಕ್ಷೆಗಳು ಇವೆ. ಶಿಕ್ಷಣ, ವಸತಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ನಗರಾಭಿವೃದ್ಧಿ, ಇಂಧನ, ಆರೋಗ್ಯ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಉತ್ತಮ ಯೋಜನೆಗಳನ್ನ ಮುಖ್ಯಮಂತ್ರಿ ಬೊಮ್ಮಾಯಿ ಪ್ರಕಟ ಮಾಡಲಿದ್ದಾರೆ. ಬಜೆಟ್ ಗಾತ್ರವು ಈ ಬಾರಿ ಸುಮಾರು ಮೂರು ಲಕ್ಷ ಕೋಟಿಗೆ ತಲುಪುವ ಅಂದಾಜು ಇದೆ.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗಕ್ಕೆ ಹಾಗೂ ಬೆಂಗಳೂರು ನಗರಕ್ಕೆ ವಿಶೇಷ ಕೊಡುಗೆಯನ್ನು ಬಜೆಟ್​ನಲ್ಲಿ ಬೊಮ್ಮಾಯಿ ನೀಡಲಿದ್ದಾರೆಂದು ಅಂದಾಜಿಸಲಾಗಿದೆ. ಬೆಲೆ ಏರಿಕೆ ಹೆಚ್ಚಾಗಿದ್ದರಿಂದ ಪೆಟ್ರೋಲ್ ಮತ್ರು ಡೀಸೆಲ್ ಮೇಲಿನ ಸೆಸ್ ಅನ್ನು ಸಿಎಂ ಕಡಿಮೆ ಮಾಡುವ ನಿರೀಕ್ಷೆಯೂ ಇದೆ. ಬೆಲೆಯೇರಿಕೆ, ಆಡಳಿತ ಪಕ್ಷದ ವಿರೋಧಿ ಅಲೆ, ಮೀಸಲಾತಿ ಹೆಚ್ಚಳದ ಹೋರಾಟಗಳು, ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪಗಳು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಆಡಳಿತಕ್ಕೆ ತಂದು ತಮ್ಮ ನಾಯಕತ್ವ ಸಾಬೀತುಪಡಿಸಿಕೊಳ್ಳುವ ಸವಾಲುಗಳ ಇವೆ.

Last Updated : Feb 17, 2023, 4:58 PM IST

ABOUT THE AUTHOR

...view details