ಬೆಂಗಳೂರು:ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಬಂದ್ ಹಿನ್ನೆಲೆ: 180 ರೌಡಿಶೀಟರ್ ವಶಕ್ಕೆ ಪಡೆದ ಪೊಲೀಸರು - ಕರ್ನಾಟಕ ಬಂದ್ ಹಿನ್ನೆಲೆ
ಕನ್ನಡ ಸಂಘಟನೆಗಳು ಇಂದು ಕರ್ನಾಟಕ ಬಂದ್ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು 180 ರೌಡಿಶೀಟರ್ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Police seized 180 rowsheeters
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಗರದಲ್ಲಿ ಯಾವುದೇ ಗಲಭೆಗಳಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಯಾ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಿದ್ದು, ಈ ಸಂಬಂಧ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಕಾವೇರಿ ಗಲಭೆ ಮತ್ತು ಪಿಎಫ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಉತ್ತರ ವಿಭಾಗದ 180 ರೌಡಿಶೀಟರ್ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇಂದು ನಡೆಯುವ ಬಂದ್ ವೇಳೆ ಈ ಅಸಾಮಿಗಳು ಅಹಿತಕರ ಘಟನೆ ನಡೆಸುವ ಮಾಹಿತಿ ಇದ್ದು, ಹೀಗಾಗಿ ಪೊಲೀಸರು ಕಾರ್ಯ ಕೈಗೊಂಡಿದ್ದಾರೆ.