ಕರ್ನಾಟಕ

karnataka

ETV Bharat / state

8.30ಕ್ಕೆ ಟಿವಿ ಬಿಟ್ಟು ಕದಲದ ಸೀರಿಯಲ್​ ಪ್ರಿಯರು... ಮತ್ತೆ ಟಾಪ್​ ಟಿಆರ್​ಪಿಯಲ್ಲಿ ಜೊತೆಜೊತೆಯಲಿ - jothe jotheyali searial created a new history

ಜೊತೆ ಜೊತೆಯೆಲಿ ಧಾರಾವಾಹಿ ಇತಿಹಾಸ ಸೃಷ್ಟಿಸಿದ್ದು, ಈ ವಾರ 15.2 ಟಿಆರ್​ಪಿ ಪಡೆದುಕೊಂಡು ಜೊತೆ ಜೊತೆಯಲಿ ಅಗ್ರ ಸ್ಥಾನದಲ್ಲಿದೆ.

ಜೊತೆ ಜೊತೆಯಲಿ ಧಾರಾವಾಹಿ ಸದಸ್ಯರು

By

Published : Nov 21, 2019, 5:28 PM IST

ಬೆಂಗಳೂರು:ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಜೊತೆ ಜೊತೆಯೆಲಿ ಧಾರಾವಾಹಿ ಇತಿಹಾಸ ಸೃಷ್ಟಿಸಿದ್ದು, ಈ ವಾರ 15.2 ಟಿಆರ್​ಪಿ ಪಡೆದುಕೊಂಡು ಮತ್ತೆ ಅಗ್ರ ಸ್ಥಾನದಲ್ಲಿದೆ.

ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಆಗಿ ಮಿಂಚುತ್ತಿರುವ ಅನಿರುದ್ಧ್ ಧಾರಾವಾಹಿ ಆರಂಭವಾದಾಗಿನಿಂದಲೂ ಅದೇ ಹುರುಪು ಕಾಪಾಡಿಕೊಂಡಿದ್ದಾರೆ.ಆರೂರು ಜಗದೀಶ್ ಅವರ ನಿರ್ದೇಶನದ ಈ ಧಾರಾವಾಹಿಯ ಯಶಸ್ಸಿನ ಹಿಂದೆ ಅನಿರುದ್ಧ್, ಅನು ಸಿರಿಮನೆ, ಜೆಂಡೆ, ಮೀರಾ ಹೀಗೆ ಇಡೀ ಕಲಾವಿದರ ಪರಿಶ್ರಮವಿದ್ದು, ತೆರೆಯ ಹಿಂದಿನ ತಂತ್ರಜ್ಞರು ಕೂಡಾ ಸಾಕಷ್ಟು ಶ್ರಮಿಸಿದ್ದಾರೆ.

ಇನ್ನು ಧಾರಾವಾಹಿಯು ದಿನದಿಂದ ದಿನಕ್ಕೆ ಕೂತೂಹಲ ಹೆಚ್ಚಿಸುತ್ತಿದ್ದು, ವಿಭಿನ್ನ ಕಥಾ ಶೈಲಿಗೆ ಪ್ರೇಕ್ಷಕರು ಫಿದಾ ಆಗಿದ್ದಂತೂ ನಿಜ. ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆದುಕೊಂಡು ವೀಕ್ಷಕರನ್ನು ಟಿವಿ ಮುಂದೆಯಿಂದ ಅಲ್ಲಾಡದಂತೆ ಮಾಡಿರುವ ಈ ಧಾರಾವಾಹಿ ಹಿಂದಿ ಧಾರಾವಾಹಿಗಳನ್ನು ಹಿಂದಿಕ್ಕುವ ಸನಿಹದಲ್ಲಿದೆ ಎಂದರೆ ತಪ್ಪಾಗಲಾರದು.

ABOUT THE AUTHOR

...view details