ಬೆಂಗಳೂರು: ಜಿಂದಾಲ್ ಕಂಪೆನಿಗೆ ಭೂ ಪರಭಾರೆ ಹಾಗೂ ರೈತರ ಸಾಲಮನ್ನಾ ವಿಚಾರವಾಗಿ ಬಿಜೆಪಿ ಮುಖಂಡರು ಕಳೆದ ಎರಡು ದಿನದಿಂದ ಆಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಜಿಂದಾಲ್ ಕಂಪೆನಿಗೆ ಭೂ ಪರಭಾರೆ : ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಿರ್ಧಾರ - kannadanews
ಜಿಂದಾಲ್ ಕಂಪೆನಿಗೆ ಭೂ ಪರಭಾರೆ ಹಾಗೂ ರೈತರ ಸಾಲಮನ್ನಾ ವಿಚಾರವಾಗಿ ಬಿಜೆಪಿ ನಾಯಕರು ಹಾಗೂ ಮುಖಂಡರು ಧರಣಿ ನಡೆಸುತ್ತಿದ್ದು,ಇಂದು ದೊಡ್ಡ ಮಟ್ಟದ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಇಂದು ಬಿಜೆಪಿ ನಾಯಕರ ಆಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯವಾಗಲಿದ್ದು ಕೊನೆ ದಿನವಾದ ಇಂದು ದೊಡ್ಡ ಹೋರಾಟ ನಡೆಸಲು ಬಿಜೆಪಿ ನಾಯಕರು ನಿರ್ಧಾರ ಮಾಡಿದ್ದಾರೆ. ನಗರದ ಮೌರ್ಯ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿ 12 ಗಂಟೆಗೆ ಮೌರ್ಯ ಸರ್ಕಲ್ ನಿಂದ ಹೊರಟು ರೇಸ್ ಕೋರ್ಸ್ ರಸ್ತೆ, ಚಿತ್ರಕಲಾ ಪರಿಷತ್ ಮೂಲಕ ಜಾಥಾ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗೃಹ ಕಚೇರಿ ಕೃಷ್ಣಗೆ ಮುತ್ತಿಗೆ ಹಾಕಲಿದ್ದಾರೆ.
ಇನ್ನು ಹೋರಾಟದಲ್ಲಿ ಸುಮಾರು ಐದು ಸಾವಿರ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ. ಬೆಂಗಳೂರಿನ ಎಲ್ಲಾ ವಾರ್ಡ್ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಪ್ರತಿಭಟನೆ ಹಾಗೂ ಮುತ್ತಿಗೆ ವೇಳೆ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.