ಕರ್ನಾಟಕ

karnataka

ETV Bharat / state

ಹೆಚ್​​ಡಿಕೆ ನೇತೃತ್ವದಲ್ಲಿ ಜೆಡಿಎಸ್​ ಶಾಸಕಾಂಗ ಸಭೆ: ಯಾರಾಗಲಿದ್ದಾರೆ ಪರಿಷತ್ ಅಭ್ಯರ್ಥಿ? - ವಿಧಾನ ಪರಿಷತ್​​ಗೆ ಅಭ್ಯರ್ಥಿಗಳ ಆಯ್ಕೆ

ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್​​ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದ್ದು, ಯಾರು ವಿಧಾನ ಪರಿಷತ್ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಹೆಚ್​​ಡಿಕೆ ನೇತೃತ್ವದಲ್ಲಿ ಜೆಡಿಎಸ್​ ಶಾಸಕಾಂಗ ಸಭೆ
ಹೆಚ್​​ಡಿಕೆ ನೇತೃತ್ವದಲ್ಲಿ ಜೆಡಿಎಸ್​ ಶಾಸಕಾಂಗ ಸಭೆ

By

Published : Jun 15, 2020, 3:38 PM IST

ಬೆಂಗಳೂರು: ವಿಧಾನ ಪರಿಷತ್​​ಗೆ ಅಭ್ಯರ್ಥಿಗಳ ಆಯ್ಕೆಯ ವಿಚಾರವಾಗಿ ಇಂದು ಜೆಡಿಎಸ್​​ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದ್ದು, ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸಭೆ ನಡೆಯುತ್ತಿದೆ.

ವಿಧಾನ ಪರಿಷತ್​​ಗೆ ಟಿ.ಎ.ಸರವಣ ಪುನಃ ಆಯ್ಕೆ ಬಯಸಿದ್ದು, ಅದೇ ರೀತಿ ಮಾಜಿ ಶಾಸಕ ಕೋನರೆಡ್ಡಿ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಜೆಡಿಎಸ್​​​​​​​​ನ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಪಾಲಿನ ಒಂದು ಸ್ಥಾನಕ್ಕಾಗಿ ಹಲವಾರು ಮಂದಿ ಆಕಾಂಕ್ಷಿಗಳಿದ್ದು, ಯಾರು ವಿಧಾನ ಪರಿಷತ್ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಹೆಚ್​​ಡಿಕೆ ನೇತೃತ್ವದಲ್ಲಿ ಜೆಡಿಎಸ್​ ಶಾಸಕಾಂಗ ಸಭೆ

ಸಭೆಯಲ್ಲಿ ರಾಜ್ಯಸಭಾ ನೂತನ ಸದಸ್ಯ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪುರ್, ಶ್ರೀನಿವಾಸ್ (ವಾಸು), ಶಾಸಕರಾದ ಸುರೇಶ್​​​ಗೌಡ, ಡಾ‌. ಶ್ರೀನಿವಾಸಮೂರ್ತಿ, ವಿಧಾನಸಭೆ ಮಾಜಿ ಉಪ ಸಾಭಾಧ್ಯಕ್ಷ ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಟಿ.ಎ.ಶರವಣ ಸೇರಿದಂತೆ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕರು

ಇದೇ ಸಂದರ್ಭದಲ್ಲಿ ಬಂಡೆಪ್ಪ ಕಾಶೆಂಪುರ್ ಹಾಗೂ ಕೃಷ್ಣಾರೆಡ್ಡಿಯವರು, ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನಂತರ ಬಂಡಪ್ಪ ಕಾಶೆಂಪುರ್ ರಾಜ್ಯಸಭೆಗೆ ಆಯ್ಕೆಯಾದ ದೇವೇಗೌಡರನ್ನು ಅಭಿನಂದಿಸಿದರು.

ABOUT THE AUTHOR

...view details