ಬೆಂಗಳೂರು:ಆರ್.ಆರ್.ನಗರ ಉಪ ಚುನಾವಣೆ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಾಳೆ ಬೆಳಗ್ಗೆ 10:30ಕ್ಕೆ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿಸಿದರು.
ಆರ್.ಆರ್.ನಗರ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಕಣಕ್ಕೆ - ಕೃಷ್ಣಮೂರ್ತಿ ನಾಳೆ ನಾಮಪತ್ರ ಸಲ್ಲಿಕೆ
'ಕೃಷ್ಣಮೂರ್ತಿಯವರ ತಂದೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. 2008 ರ ಚುನಾವಣೆಯಲ್ಲಿ ಅವರು ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಂತ ನಮ್ಮ ಪರ ಕೆಲಸ ಮಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಇದರ ಶಾಕ್‌ನಿಂದ ಅವ್ರ ತಂದೆ ಹೃದಯಾಘಾತದಿಂದ ಮೃತರಾದರು' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
'ಚುನಾವಣೆಯಲ್ಲಿ ಎರಡೂ ಪಕ್ಷಗಳು ನಮಗೆ ಸಮಾನ ವಿರೋಧಿಗಳು. ಈ ಪಕ್ಷಗಳ ವಿರುದ್ದ ನಮ್ಮ ಹೋರಾಟ ಇರುತ್ತದೆ. ಕಳೆದ ಎರಡು ಚುನಾವಣೆ ಬೇರೆ ಬೇರೆ ರೀತಿ ಆಗಿದೆ. ಈ ಬಾರಿ ಬೇರೆ ರೀತಿ ಚುನಾವಣೆ ಆಗುತ್ತೆ ಅನ್ನೋ ವಿಶ್ವಾಸ ನನಗಿದೆ' ಎಂದರು.
'ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಜನರಲ್ಲಿ ಮನವಿ ಮಾಡುತ್ತೇವೆ. ಕೃಷ್ಣಮೂರ್ತಿ ತಂದೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. 2008ರ ಚುನಾವಣೆಯಲ್ಲಿ ಅವರು ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಂತ ನಮ್ಮ ಪರ ಕೆಲಸ ಮಾಡಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇದರ ಶಾಕ್‌ನಿಂದ ಅವ್ರ ತಂದೆ ಹೃದಯಾಘಾತದಿಂದ ಮೃತರಾದರು. ಆ ಕುಟುಂಬದ ಬಗ್ಗೆ ನನಗೆ ಅನುಕಂಪ ಇದೆ. ಕೃಷ್ಣಮೂರ್ತಿ ನಮ್ಮ ಪಕ್ಷದ ಕಾರ್ಯಕರ್ತ, ಅವರು ಸ್ವಂತ ದುಡಿಮೆಯಿಂದ ಬೆಳೆದಿದ್ದಾರೆ. ಹೀಗಾಗಿ ಕಾರ್ಯಕರ್ತರಿಗೆ ಟಿಕೆಟ್ ಕೊಡ್ತಿದ್ದೇವೆ' ಎಂದರು.