ಕರ್ನಾಟಕ

karnataka

ETV Bharat / state

ಸುಳ್ಳು ಆರೋಪದಡಿ ರೌಡಿಶೀಟರ್ ಜೆಸಿಬಿ ನಾರಾಯಣ್​ ಬಂಧನ: ಆರೋಪ

ಪೊಲೀಸರು ರೌಡಿ ಶೀಟರ್​ ಜೆಸಿಬಿ ನಾರಾಯಣ್​ನನ್ನು ಬಂಧಿಸಿದ್ದಾರೆ.ರಾಜಕಾರಣಿಗಳ ಒತ್ತಡಕ್ಕೆ ಮಣಿದು ಜೆಸಿಬಿ ನಾರಾಯಣ್​ ಬಂಧನ ಮಾಡಲಗಿದೆ ಎಂದು ಹೇಳಲಾಗುತ್ತಿದೆ.

By

Published : Jul 30, 2019, 9:36 AM IST

ಪೊಲೀಸರು ಬಂಧಿಸಿದ ರೌಡಿಶೀಟರ್​ ನಾರಾಯಣ್

ಆನೇಕಲ್/ಬೆಂಗಳೂರು:ಪೊಲೀಸರು ರೌಡಿ ಶೀಟರ್​ ಜೆಸಿಬಿ ನಾರಾಯಣ್​ನನ್ನು ಸೇರಿ ಐವರನ್ನು ದರೋಡೆ ಪ್ರಕರಣದಲ್ಲಿ ಬಂಧಿಸಿದ್ದಾರೆ.ರಾಜಕಾರಣಿಗಳ ಒತ್ತಡಕ್ಕೆ ಮಣಿದು ಜೆಸಿಬಿ ನಾರಾಯಣ್​ ಬಂಧನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪೊಲೀಸರು ಬಂಧಿಸಿದ ರೌಡಿಶೀಟರ್​ ನಾರಾಯಣ್

ರಾಜಕಾರಣಿಗಳ ಒತ್ತಡಕ್ಕೆ ಮಣಿದು ರೌಡಿಶೀಟರ್​ ಜೆಸಿಬಿ ನಾರಾಯಣ್ ಅನ್ನು ಬಂಧಿಸಿದ್ದಾರೆ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಆರ್​ಎಂಎನ್ ರಮೇಶ ಆರೋಪಿಸಿದ್ದಾರೆ.

ಜು.27ರ ಸಂಜೆ ಹುಲ್ಲಹಳ್ಳಿ-ಬಿಂಗೀಪುರ ರಸ್ತೆಯ ಕ್ರೈಸ್ಟ್ ಅಕಾಡೆಮಿ ಶಾಲೆ ಮುಂಭಾಗ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಜೆಸಿಬಿ ನಾರಾಯಣ್​ನನ್ನು ಕರೆದುಕೊಂಡು ಹೋಗಿದ್ದಾರೆ. ಆ ದಿನವೇ ನಾರಾಯಣ್​ ಕೆಲವು ಮಾಧ‍್ಯಮದವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ, ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಸಿಕ್ಕಿ ಹಾಕಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಈ ವಿಷಯ ಕುರಿತಂತೆ ಎಸಿಪಿ ಅವರನ್ನು ಮಾಹಿತಿ ಕೇಳಿದಾಗ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರೆಂಟ್ ಬಾಕಿಯಿದ್ದು, ವಿಚಾರಣೆಗೆ ಡಿಸಿಪಿ ಕರೆಸಿದ್ದಾರೆ ಎಂದು ಮಾಹಿತಿ ನೀಡಿದ್ದರು. ಜು.27ರ ರಾತ್ರಿ ಠಾಣೆಯಲ್ಲಿದ್ದ ಜೆಸಿಬಿ ನಾರಾಯಣ್​ನನ್ನು ದರೋಡೆಗೆ ಸಂಚು ರೂಪಿಸಿದ್ದಾನೆ ಎಂದು ಪ್ರಕರಣ ದಾಖಲಿಸಿ ಜು.28ರಂದು ರಾತ್ರಿ 8 ಗಂಟೆಗೆ ಜೈಲಿಗೆ ಕಳುಹಿಸಿರುವುದು ಪೊಲೀಸರ ಕ್ರಮದ ಬಗ್ಗೆ ಅನುಮಾನ ಮೂಡಿದೆ ಎಂದು ರಮೇಶ ಆರೋಪಿಸಿದರು.

5 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸ್ ಮೂಲಗಳೇ ತಿಳಿಸಿವೆ. ಕೂಡಲೇ ಪೊಲೀಸ್​ರು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details