ಬೆಂಗಳೂರು: ಕೆಲಸ ಕೊಟ್ಟ ಮಾಲೀಕನ ಅಂಗಡಿಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂಗಮೇಶ್ ಎಂದು ಗುರುತಿಸಲಾಗಿದೆ.
ಜಯನಗರದ ಎಂಪಿಎಸ್ ಜ್ಯುವೆಲ್ಲರಿ ಶಾಪ್ ನಲ್ಲಿ ಆರೋಪಿ ಸಂಗಮೇಶ್ ಹಲವು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದ. ಜೊತೆಗೆ ಮಾಲೀಕರ ವಿಶ್ವಾಸವನ್ನು ಗಳಿಸಿಕೊಂಡಿದ್ದ. ಕಳೆದ ಫೆ.12ರಂದು ಮಾಲೀಕರು ಅಂಗಡಿಯಲ್ಲಿ ಇಲ್ಲದಿರುವಾಗ 2 ಲಕ್ಷ ಮೌಲ್ಯದ ಎರಡು ವಜ್ರದುಂಗುರ ಹಾಗೂ ಒಂದು ಚಿನ್ನದ ಉಂಗುರ ಕಳ್ಳತನ ಮಾಡಿದ್ದ. ಬಳಿಕ ಯಾರಿಗೂ ತಿಳಿಯದಂತೆ ಕೆಲಸ ಬಿಟ್ಟು ಪರಾರಿಯಾಗಿದ್ದ.