ಕರ್ನಾಟಕ

karnataka

ETV Bharat / state

ಸಾವಯವ ಮೇಳ: ಗಮನ ಸೆಳೆದ ಬುಡಕಟ್ಟು ಮಹಿಳೆಯರು ತಯಾರಿಸಿದ ನೇರಳೆ ಹಣ್ಣಿನ ಉತ್ಪನ್ನಗಳು - jamun fruit products

ಬುಡಕಟ್ಟು ಮಹಿಳೆಯರು ನೇರಳೆ ಹಣ್ಣಿನಿಂದ‌ ತಯಾರಿಸಿದ ವಿವಿಧ ಉತ್ಪನ್ನಗಳನ್ನು ಬೆಂಗಳೂರಿನ ಸಿರಿಧಾನ್ಯ ಹಾಗೂ ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

Etv Bharatjamun-fruit-products-prepared-by-tribal-women-displayed-in-organics-international-trade-fair
ಸಾವಯವ ಮೇಳ: ಗಮನ ಸೆಳೆದ ಬುಡಕಟ್ಟು ಮಹಿಳೆಯರಿಂದ ತಯಾರಾದ ನೇರಳೆ ಹಣ್ಣಿನ ಉತ್ಪನ್ನಗಳು

By ETV Bharat Karnataka Team

Published : Jan 5, 2024, 10:10 PM IST

Updated : Jan 5, 2024, 10:21 PM IST

ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ

ಬೆಂಗಳೂರು:ಕಾಡಿಗೆ ತೆರಳಿ ನೇರಳೆ ಹಣ್ಣುಗಳನ್ನು ಸಂಗ್ರಹಿಸಿ ಅದನ್ನು ಸಂಸ್ಕರಿಸಿ ಮೌಲ್ಯವರ್ಧನೆ‌ ಮಾಡಿ, ಸಾವಿರಾರು ಬುಡಕಟ್ಟು ಮಹಿಳೆಯರಿಗೆ ಉದ್ಯೋಗಕ್ಕೆ ದಾರಿಯಾಗಿರುವ ಜೊವಾಕಿ ಅಗ್ರಿಫುಡ್ ಇಂಡಿಯಾ ಪ್ರೈವೇಟ್ ಕಂಪನಿಯ ಟ್ರೈಬಲ್ ವೇದ ಬ್ರ್ಯಾಂಡ್ ಹೆಸರಿನಲ್ಲಿ ಹಣ್ಣಿನಿಂದ‌ ತಯಾರಿಸಿದ ವಿವಿಧ ಉತ್ಪನ್ನಗಳು ನಗರದ ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭಗೊಂಡಿರುವ ಸಿರಿಧಾನ್ಯ ಹಾಗೂ ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ನೋಡುಗರ ಗಮನ ಸೆಳೆಯುತ್ತಿದೆ.

ರಾಜಸ್ಥಾನದ ಉದಯಪುರ ಮೂಲದ‌‌ ಕಂಪನಿಯು ಅಲ್ಲಿನ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಸಾವಿರಾರು ಬುಡಕಟ್ಟು ಮಹಿಳೆಯರು ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ.‌ ಸ್ಥಳೀಯವಾಗಿ ಹೇರಳವಾಗಿ ಸಿಗುವ ನೇರಳೆ ಹಣ್ಣುಗಳನ್ನ ಮೊದಲು ಬೆರಳೆಣಿಕೆ ರೂಪಾಯಿ ಮಾರಾಟ ಮಾಡುತ್ತಿದ್ದರು. ಅಲ್ಲದೆ, ಹಲವು ಬಾರಿ ಬೆಲೆ ಸಿಗದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಹಣ್ಣು ವ್ಯರ್ಥವಾಗುತ್ತಿರುವುದನ್ನು ಕಂಡು ಕಳೆದ ಆರು ವರ್ಷಗಳ ಹಿಂದೆ ಕಂಪನಿಯು ಲಭ್ಯವಾಗುವ ಹಣ್ಣಿನಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಲು ಮುಂದಾಗಿತ್ತು. ಇದಕ್ಕೆ ಒಂದು ಸಾವಿರಾರು ಆದಿವಾಸಿ ಮಹಿಳೆಯರನ್ನ ಬಳಸಿಕೊಂಡು ಹಣ್ಣಿನ ಮೂಲಕ ತಯಾರಿಸಬಹುದಾದ ವಿವಿಧ ಉತ್ಪನ್ನಗಳನ್ನ‌ು ಮಾರಾಟ‌ ಮಾಡುತ್ತಿದೆ.

ಯಾವ್ಯಾವ ಉತ್ಪನ್ನಗಳು ಲಭ್ಯ?:ಕಂಪನಿಯು ನೇರಳೆ ಹಣ್ಣಿನಿಂದ ಸುಮಾರು 10 ವಿವಿಧ ಪ್ರಾಡೆಕ್ಟ್​​ಗಳನ್ನು ಮಾರಾಟ ಮಾಡುತ್ತಿದೆ. ಜಾಮೂನ್ ಪೌಡರ್, ಜಾಮೂನ್ ಫ್ಲಿಕ್ಸ್, ಜಾಮೂನ್ ಟೀ, ಜಾಮೂನ್ ವಿನ್ನಿಗರ್ ಸೇರಿದಂತೆ ವಿವಿಧ ವಸ್ತುಗಳನ್ನ ತಯಾರಿಸಿ ಮಾರಾಟ ಮಾಡುತ್ತಿದೆ. ಅಲ್ಲದೆ ಸಾವಿರಾರು ಆದಿವಾಸಿ ಮಹಿಳೆಯರಿಗೆ ಉದ್ಯೋಗ ನೀಡಿ ಅವರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ. ನೇರಳೆ ಹಣ್ಣಿನ ಕಾಯಿಯನ್ನ ಒಣಗಿಸಿ, ಯಂತ್ರದ ಸಹಾಯದಿಂದ ಪುಡಿ ಮಾಡಿ ಒಣಗಿಸಿ ಪೌಡರ್ ಮಾಡಲಾಗುತ್ತದೆ.

ಈ ನೇರಳೆ ಪೌಡರ್ ಮಧುಮೇಹ, ರಕ್ತದೊತ್ತಡ ಕಡಿಮೆ‌ ಮಾಡಲು, ಜೀರ್ಣಕ್ರಿಯೆ‌ ಸುಲಭವಾಗಿಸಲು, ಹೃದ್ರೋಗಕ್ಕೆ ರಾಮಬಾಣವಾಗಲಿದೆ. ರಾಜಸ್ಥಾನದ ಉದಯಪುರದಲ್ಲಿ ಕಂಪೆನಿಯಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು ಮುಂದಾಗುತ್ತಿದೆ. ಕಳೆದ ಆರು ವರ್ಷಗಳಲ್ಲಿ 3 ರಿಂದ 4 ಲಕ್ಷ ಕೆಜಿ ನೇರಳೆ ಹಣ್ಣನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದೆ. 2.5 ಕೋಟಿಯಿಂದ 3 ಕೋಟಿ ಆದಾಯ ಸಂಗ್ರಹವಾಗಿದೆ ಎಂದು 'ಈಟಿವಿ ಭಾರತ್'​ಗೆ ಕಂಪನಿಯ‌ ಪ್ರತಿನಿಧಿ ಶ್ರೀನಾಥ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಇಂದಿರಾ ಕ್ಯಾಂಟೀನ್, ಶಾಲಾ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆಗೆ ಶೀಘ್ರ ಕ್ರಮ: ಸಿಎಂ

Last Updated : Jan 5, 2024, 10:21 PM IST

ABOUT THE AUTHOR

...view details