ಕರ್ನಾಟಕ

karnataka

ETV Bharat / state

ವಿವಿಧ ಕಾಮಗಾರಿಗಳನ್ನು ಸರ್ಕಾರ ತಡೆದಿರುವುದು ಸರಿಯಲ್ಲ: ದಿನೇಶ್​ ಗುಂಡೂರಾವ್​​

ಕೆಪಿಸಿಸಿ ಕಚೇರಿಯಲ್ಲಿ ಕೈ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆದಿದ್ದು, ಸಿಎಂ ಬಿಎಸ್​​ವೈ ನಗರಾಭಿವೃದ್ಧಿಗಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ತಡೆದಿರುವುದು ಸರಿಯಲ್ಲ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನೇಶ್ ವಾಗ್ದಾಳಿ

By

Published : Aug 5, 2019, 2:07 PM IST

Updated : Aug 5, 2019, 3:04 PM IST

ಬೆಂಗಳೂರು:ಮಹಾನಗರದಲ್ಲಿ ಅನುಮೋದನೆ ಪಡೆದು ನಡೆಯುತ್ತಿರುವ ಕೆಲಸಗಳನ್ನ ತಡೆಹಿಡಿಯಬಾರದು. ಬೆಂಗಳೂರಿನ ಹಿತದೃಷ್ಠಿಯಿಂದ ಇದು ಉತ್ತಮವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕೈ ನಾಯಕರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನವ ಬೆಂಗಳೂರು ಯೋಜನೆ ಅಡಿ 8,000 ಕೋಟಿ ರೂ. ಮೊತ್ತದ ಯೋಜನೆಯನ್ನು ಸರ್ಕಾರ ತಡೆಹಿಡಿದಿದೆ. ಹಿಂದಿನ ಮೈತ್ರಿ ಸರ್ಕಾರ ಘೋಷಿಸಿದ್ದ ಯೋಜನೆಗಳನ್ನು ತಡೆಹಿಡಿಯುವ ಜೊತೆಗೆ ಬಿಬಿಎಂಪಿ ಬಜೆಟ್ ಕೂಡ ತಡೆಹಿಡಿಯಲಾಗಿದೆ. ಇದು ಸರಿಯಲ್ಲ ಎಂದರು.

ಬೆಂಗಳೂರು ನಗರೋತ್ಥಾನ ಯೋಜನೆಯನ್ನು ಹಿಂದೆ ಸಿದ್ದರಾಮಯ್ಯ ಅನುಷ್ಠಾನಕ್ಕೆ ತಂದಿದ್ದರು. ಕಸದ ಸಮಸ್ಯೆ, ಕುಡಿಯುವ ನೀರು, ರಸ್ತೆ, ಟೆಂಡರ್ ಶ್ಯೂರ್ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಮತ್ತೆ 11,500 ಕೋಟಿಗೆ ಅನುಮೋದನೆ ನೀಡಲಾಗಿತ್ತು. ಕಾಮಗಾರಿಗಳು ವೇಗವಾಗಿ ನಡೆದಿದ್ದವು. ಆದರೆ ಯಡಿಯೂರಪ್ಪ ಬರುತ್ತಿದ್ದಂತೆ ತಡೆ ನೀಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ದಿನೇಶ್ ವಾಗ್ದಾಳಿ ನಡೆಸಿದರು.

ವಿವಿಧ ಕಾಮಗಾರಿಗಳನ್ನು ಸರ್ಕಾರ ತಡೆದಿರುವುದು ಸರಿಯಲ್ಲ

ಸಾಕಷ್ಟು ಹಣ ಖರ್ಚು:

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, 8,500 ಕೋಟಿ ರೂ. ಮೊತ್ತದ ಕೆಲಸಗಳು ಪ್ರಾರಂಭವಾಗಿವೆ. ರಸ್ತೆ, ಫ್ಲೈ ಓವರ್, ಚರಂಡಿ ಎಲ್ಲಾ ಕಾಮಗಾರಿಗಳು ಸೇರಿವೆ. 150 ಕೋಟಿಗಿಂತ ಹೆಚ್ಚು ಹಣ ಎಲ್ಲಾ 28 ಕ್ಷೇತ್ರಗಳಿಗೆ ಹಂಚಿಕೆಯಾಗಿದೆ. ಹೀಗಾಗಿ ನವ ಬೆಂಗಳೂರು ಯೋಜನೆಗೆ ತಡೆ ಬೇಡ. ಗುಣಮಟ್ಟ ಪರಿಶೀಲನೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಕಾಮಗಾರಿಗಳನ್ನ ತಡೆಹಿಡಿಯುವುದು ಸರಿಯಲ್ಲ. ನ್ಯೂನತೆ, ಕಳಪೆ ಕಾಮಗಾರಿ ಇದ್ದರೆ ಕ್ರಮ ತೆಗೆದುಕೊಳ್ಳಲಿ. ಅದು ಬಿಟ್ಟು ಕಾಮಗಾರಿಗೆ ತಡೆ ನೀಡುವುದು ಸರಿಯಲ್ಲ ಎಂದರು.

ಆಸ್ತಿ ಅಡವಿಟ್ಟು ಹೋಗಿದ್ದರು:

ಮಾಜಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬಿಜೆಪಿಯವರು ಆಸ್ತಿ ಅಡವಿಟ್ಟು ಹೋಗಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ನಾವು ಬಿಡಿಸಿದ್ದೆವು. 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಿದ್ದೇವೆ. ಮಳೆ ನೀರಿನಿಂದ ರಸ್ತೆ ಗುಂಡಿ ಬೀಳುತ್ತಿದ್ದವು. ಈಗ ವೈಟ್ ಟಾಪಿಂಗ್ ಮಾಡುತ್ತಿದ್ದೇವೆ. ಇದರಿಂದ 30 ವರ್ಷ ರಸ್ತೆ ಗುಣಮಟ್ಟದಿಂದ ಕೂಡಿರುತ್ತದೆ. ಹೊರಭಾಗದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಉತ್ತಮ ಕೆಲಸಗಳು ಈಗ ನಡೆಯುತ್ತಿವೆ. ಇದನ್ನ ಸ್ಟಾಪ್ ಮಾಡಿದರೆ ಕಾಮಗಾರಿ ನಿಲ್ಲುತ್ತದೆ. ಬೆಂಗಳೂರಿನ ಅಂದವೂ ಕೆಡುತ್ತದೆ. ಆರೇಳು ತಿಂಗಳಲ್ಲಿ ನಗರ ಅಧ್ವಾನವಾಗುತ್ತದೆ. ಹೀಗಾಗಿ ಕಾಮಗಾರಿಗಳನ್ನ ತಡೆಹಿಡಿಯುವುದು ಸರಿಯಲ್ಲ ಎಂದರು.

ಕೇಂದ್ರದ ಕ್ರಮ ಖಂಡನೀಯ:

ಜಮ್ಮು-ಕಾಶ್ಮೀರದಿಂದ 370 ಹಾಗೂ 35 ಎ ಸಂವಿಧಾನದ ವಿಧಿ ಹಿಂಪಡೆದ ಕೇಂದ್ರದ ಕ್ರಮ ಖಂಡಿಸಿ ಮಾತನಾಡಿದ ದಿನೇಶ್, 370 ತೆಗೆಯುವುದು ಒಂದು ಸೂಕ್ಷ್ಮ ವಿಚಾರ. ಇನ್ನೂ ಪ್ರಯತ್ನಗಳು ನಡೆದಿರಬಹುದು. ಒಂದು ವೇಳೆ ಅಂತಹ ಕೆಲಸಕ್ಕೆ ಕೈಹಾಕಿದರೆ ಅದು ದುಸ್ಸಾಹಸ. ಈಗಾಗಲೇ 30 ಸಾವಿರ ಸೈನಿಕರನ್ನ ನಿಯೋಜಿಸಿದ್ದಾರೆ. ಅಲ್ಲಿ ವಿಶೇಷ ಅಧಿಕಾರ ತೆಗೆದಿದ್ದಾರೆ. ಫೋನ್ ಸಂಪರ್ಕ ಕಡಿತ ಮಾಡಿದ್ದಾರೆ. ಅಲ್ಲಿ ಎಮರ್ಜೆನ್ಸಿ ಕ್ರಿಯೇಟ್ ಮಾಡಿದ್ದಾರೆ. ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇಂತಹ ದುಸ್ಸಾಹಸ ಮಾಡುವುದು ಕೇಂದ್ರಕ್ಕೆ ಒಳ್ಳೆಯದಲ್ಲ. ನಮ್ಮ ರಾಷ್ಟ್ರೀಯ ನಾಯಕರು ಇದರ ಬಗ್ಗೆ ಗಮನಹರಿಸ್ತಾರೆ ಎಂದರು.

Last Updated : Aug 5, 2019, 3:04 PM IST

ABOUT THE AUTHOR

...view details