ಬೆಂಗಳೂರು:ತಡರಾತ್ರಿಯಿಂದ ನಡೆದಿರುವ ಐಟಿ ದಾಳಿಯು ಉದ್ದೇಶಪೂರ್ವಕವಲ್ಲ. ರಾಜಕಾರಣಿಗಳಷ್ಟೇ ಅಲ್ಲ ಉದ್ಯಮಿಗಳ ಮನೆ ಮೇಲೂ ರೇಡ್ ನಡೆದಿದೆ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಈ ಸಂಬಂಧ ಪ್ರಕಟಣೆ ಬಿಡುಗಡೆ ಮಅಡಿರುವ ಐಟಿ ಇಲಾಖೆ, ಕೇವಲ ಎಂಪಿ, ಎಂಎಲ್ಎ ಹಾಗೂ ಸಚಿವರ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆದಿಲ್ಲ. ಉದ್ಯಮಿಗಳ ಮನೆ ಮೇಲೂ ರೇಡ್ ನಡೆದಿದೆ.
ನಾವು ಸಿಆರ್ಪಿಎಫ್ ಬಳಸಿದ್ದು ನಿಜ, ಇದು ಪ್ರೋಟೋಕಾಲ್ ಪ್ರಕಾರ ನಡೆದಿದೆ. ದಾಳಿಗೂ ಮುನ್ನ ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದೆವು. ಇವತ್ತಿನ ದಾಳಿ ಉದ್ಯಮಿಗಳು, ಎಂಎನ್ಸಿ ಕಂಪೆನಿ, ಗಣಿ ಉದ್ಯಮಿಗಳು, ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್, ಮೀನುಗಾರಿಕೆ, ಮೆಡಿಕಲ್ ಕಾಲೇಜು, ಫಿಲ್ಮ್ ಇಂಡಸ್ಟ್ರಿ ಹಾಗೂ ರಾಜಕೀಯ ಪ್ರೇರಿತವಾದ ವ್ಯಕ್ತಿಗಳ ಮೇಲೂ ದಾಳಿ ನಡೆದಿದೆ. ತೆರಿಗೆ ವಂಚನೆಯಾಗಿದ್ದೆ ಈ ಎಲ್ಲಾ ದಾಳಿಗೆ ಕಾರಣ.
ಇದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಅಧಿಕೃತ ಪಡೆದುಕೊಂಡೇ ದಾಳಿ ಮಾಡಲಾಗಿದೆ. ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ರಾಜಕೀಯ ಪಕ್ಷಗಳು ನಮಗೆ ಸಹಕಾರ ನೀಡಬೇಕು. ಈ ದಾಳಿ ಯಾವುದೇ ರಾಜಕೀಯ ಪ್ರೇರಿತವಲ್ಲ. ವೈಯಕ್ತಿಕ ದಾಳಿಯೂ ಅಲ್ಲ ಎಂದು ಕರ್ನಾಟಕ ಹಾಗೂ ಗೋವಾ ಆದಾಯ ಇಲಾಖೆಯು ಅಧಿಕೃತ ಸ್ಪಷ್ಟನೆ ನಿಡಿದೆ.